ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಸಿರು ಅಮೋನಿಯಾ-ಮೆಥನಾಲ್‌ ಪೂರೈಕೆಗೆ ಭಾರತ-ಜಪಾನ್‌ ಒಪ್ಪಂದ; ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ

ಹಸಿರು ಹೈಡ್ರೋಜನ್‌ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸ್ಥಾನ ಪಡೆದಿರುವ ಭಾರತ ಇದೀಗ ಜಪಾನ್‌ನೊಂದಿಗೆ ಹಸಿರು ಅಮೋನಿಯಾ ಮತ್ತು ಮೆಥನಾಲ್ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಹಸಿರು ಇಂಧನದಲ್ಲಿ ಮಹತ್ವದ ಮೈಲಿಗಲ್ಲಿರಿಸಿದೆ. ಜಪಾನಿನ ಪ್ರಮುಖ ಕಂಪನಿಗಳಾದ IHI ಕಾರ್ಪೊರೇಷನ್ ಫಾರ್ ಗ್ರೀನ್ ಅಮೋನಿಯಾ ಮತ್ತು ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿ, ಇಂಕ್. (MGC) ನೊಂದಿಗೆ ಗ್ರೀನ್ ಮೆಥನಾಲ್‌ಗಾಗಿ ದೀರ್ಘಾವಧಿಯ ಆಫ್‌ಟೇಕ್ ಒಪ್ಪಂದವನ್ನು ಪಡೆದುಕೊಂಡಿದೆ.

ಹಸಿರು ಅಮೋನಿಯಾ-ಮೆಥನಾಲ್‌ ಪೂರೈಕೆಗೆ ಭಾರತ-ಜಪಾನ್‌ ಒಪ್ಪಂದ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 2, 2026 9:55 PM

ನವದೆಹಲಿ: ಹಸಿರು ಹೈಡ್ರೋಜನ್‌ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸ್ಥಾನ ಪಡೆದಿರುವ ಭಾರತ ಇದೀಗ ಜಪಾನ್‌ನೊಂದಿಗೆ ಹಸಿರು ಅಮೋನಿಯಾ ಮತ್ತು ಮೆಥನಾಲ್ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಹಸಿರು ಇಂಧನದಲ್ಲಿ ಮಹತ್ವದ ಮೈಲಿಗಲ್ಲಿರಿಸಿದೆ. ದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಭಾರತ ಜಪಾನ್‌ನ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಜಪಾನಿನ ಪ್ರಮುಖ ಕಂಪನಿಗಳಾದ IHI ಕಾರ್ಪೊರೇಷನ್ ಫಾರ್ ಗ್ರೀನ್ ಅಮೋನಿಯಾ ಮತ್ತು ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿ, ಇಂಕ್. (MGC) ನೊಂದಿಗೆ ಗ್ರೀನ್ ಮೆಥನಾಲ್‌ಗಾಗಿ ದೀರ್ಘಾವಧಿಯ ಆಫ್‌ಟೇಕ್ ಒಪ್ಪಂದವನ್ನು ಪಡೆದುಕೊಂಡಿದೆ.

ಜಪಾನ್‌ನ IHI ಕಾರ್ಪೊರೇಷನ್‌ನೊಂದಿಗೆ ವರ್ಷಕ್ಕೆ ಒಟ್ಟು 4,05,000 ಟನ್‌ಗಳ (405 kTPA) ಹಸಿರು ಅಮೋನಿಯಾ ಪೂರೈಕೆಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ACME ಕ್ಲೀನ್‌ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಪ್ಯಾರದೀಪ್ ಸೌಲಭ್ಯದಿಂದ ವರ್ಷಕ್ಕೆ 1,00,000 ಟನ್‌ಗಳ (100 kTPA) ಹಸಿರು ಮೆಥನಾಲ್ ಪೂರೈಕೆಗಾಗಿ ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿ, ಇಂಕ್‌ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌, ಸೌರಶಕ್ತಿ ನಿಗಮ (SECI) ನಡೆಸುವ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಉತ್ಪಾದನೆಗೆ ಆರ್ಥಿಕ ನೆರವು ನೀಡುತ್ತದೆ. SIGHT ಕಾರ್ಯಕ್ರಮದಡಿ ACME ಗ್ರೂಪ್‌ಗೆ ವರ್ಷಕ್ಕೆ 3,70,000 ಟನ್‌ಗಳ (370 kTPA) ಉತ್ಪಾದನಾ ಸಾಮರ್ಥ್ಯದ ಗುರಿ ನೀಡಲಾಗಿದೆ. ಇದು ಈ ರಫ್ತು-ಆಧಾರಿತ ಒಪ್ಪಂದಗಳಿಗೆ ಅಡಿಪಾಯ ಹಾಕಿದೆ.

ಈ ವೇಳೆ ಸಚಿವ ಪ್ರಲ್ಹಾದ ಜೋಶಿ, ʼACME-IHI ಗ್ರೀನ್ ಹೈಡ್ರೋಜನ್ ಯೋಜನೆಗೆ ಜಪಾನ್ ತನ್ನ CfD ಸಬ್ಸಿಡಿ ಬೆಂಬಲ ವಿಸ್ತರಿಸುವ ನಿರ್ಧಾರವನ್ನು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಬಲವಾದ ಮತ್ತು ಭವಿಷ್ಯಕ್ಕೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

ಹಸಿರು ಇಂಧನ ವಲಯದಲ್ಲಿ ಭಾರತ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುತ್ತಿದ್ದು, ಅಂತರಾಷ್ಟ್ರೀಯ ಪಾಲುದಾರಿಕೆಗಳನ್ನು ನಿರ್ಮಿಸುವ ಜತೆಗೆ ಭಾರತೀಯ ಹಸಿರು ಹೈಡ್ರೋಜನ್ ಮತ್ತದರ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತಿದೆ ಎಂದು ಪ್ರತಿಪಾದಿಸಿದರು.

ಟಕೆಹಿಕೊ ಮಾಟ್ಸುವೊ, ಉಪಾಧ್ಯಕ್ಷರು ಜಪಾನ್ ಸರ್ಕಾರದ ಸಚಿವೆ METI ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಈ ಒಪ್ಪಂದ ಶುದ್ಧ ಇಂಧನದಲ್ಲಿ ಭಾರತ-ಜಪಾನ್ ಸಹಕಾರವನ್ನು ಮತ್ತಷ್ಟು ಆಳಗೊಳಿಸುತ್ತದೆ ಎಂದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಭಾರತದ ಹಸಿರು ಇಂಧನ ವಲಯ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತಿದೆ. ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್‌ಗಾಗಿ ಜಪಾನ್‌ನೊಂದಿಗೆ ಮಾರುಕಟ್ಟೆ ಸಂಪರ್ಕವನ್ನು ಸೃಷ್ಟಿಸಿದೆ. ನಮ್ಮ ಹಸಿರು ಹೈಡ್ರೋಜನ್ ವಲಯವು ವಾಣಿಜ್ಯಿಕವಾಗಿ ಪ್ರಬುದ್ಧವಾಗುತ್ತಿದೆ ಎಂದು ಹೇಳಿದರು.

ACME ಗ್ರೂಪ್ ಯೋಜನೆ ಅವಲೋಕನ ಪ್ರಸ್ತುತಪಡಿಸಿತು. ನಂತರ ಒಪ್ಪಂದಗಳಿಗೆ ಔಪಚಾರಿಕ ಸಹಿ ಹಾಕಲಾಯಿತು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು, ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ (METI) ಸೇರಿದಂತೆ ಜಪಾನ್ ಸರ್ಕಾರದ ಪ್ರತಿನಿಧಿಗಳು ಮತ್ತು ACME ಗ್ರೂಪ್, IHI ಕಾರ್ಪೊರೇಷನ್ ಮತ್ತು MGC ನಾಯಕತ್ವದ ಸಮ್ಮುಖದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಯಿತು.