ಲಡಾಖ್: ಭಾರತವು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದರೆ ಪಾಕಿಸ್ತಾನವು (Pakistan) ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುವಲ್ಲಿ ನಿರತವಾಗಿದೆ. ಭಾರತ ಜಗತ್ತಿಗೆ ಸಾಫ್ಟ್‌ವೇರ್ ಒದಗಿಸುತ್ತಿದ್ದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಪೂರೈಕೆ ಮಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಹೇಳಿದರು. ಅವರು ಭಾನುವಾರ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಅಂಗವಾಗಿ ಲಡಾಖ್‌ನ (Ladakh) ದ್ರಾಸ್‌ನಲ್ಲಿ ನಡೆಸ ಸಭೆಯಲ್ಲಿ ಮಾತನಾಡಿ, ಭಾರತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಆದರೆ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದರು.
ಅವರು ತಮ್ಮ ಮಾತನ್ನು ಮುಂದುವರಿಸಿ, ಭಾರತ ಯುಪಿಐ ಮೂಲಕ ಜಗತ್ತನ್ನು ಸಂಪರ್ಕಿಸುತ್ತಿದ್ದರೆ ಪಾಕಿಸ್ತಾನವು ಹವಾಲಾ ಮೂಲಕ ಭಯೋತ್ಪಾದನೆ ಮಾಡುತ್ತಿದೆ. ಭಾರತವು ನವೋದ್ಯಮಗಳ ಸಂಸ್ಕೃತಿಯನ್ನು ಪೋಷಿಸುತ್ತಿದ್ದರೆ ಪಾಕಿಸ್ತಾನವು ತನ್ನ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಪೋಷಿಸುವಲ್ಲಿ ನಿರತವಾಗಿದೆ. ಭಾರತವು ಅರೆವಾಹಕಗಳನ್ನು ತಯಾರಿಸುತ್ತಿದ್ದರೆ ಪಾಕಿಸ್ತಾನವು ಆತ್ಮಹತ್ಯಾ ಬಾಂಬರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಹೇಳಿದರು.
ಯುನೆಸ್ಕೋ ವಿಶ್ವ ಪರಂಪರೆ ತಾಣ ಪಟ್ಟಿಗೆ ಸಾರನಾಥ ಸೇರ್ಪಡೆ; ಇದೊಂದು ಹೆಮ್ಮೆಯ ಕ್ಷಣ ಎಂದ ಪ್ರಧಾನಿ ಮೋದಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ಮಾತನಾಡಿದ ಅವರು, ಭಾರತದ ಪ್ರಗತಿಗೆ ಅಡ್ಡಿಯಾಗುವ ದುಸ್ಸಾಹಸಗಳಿಂದ ದೂರವಿರುವಂತೆ ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದರು.
ಭಾರತದ ಮಾರ್ಗಗಳು ವಿಭಿನ್ನವಾಗಿವೆ. ಪಾಕಿಸ್ತಾನ ತನ್ನ ದುಷ್ಟ ಉದ್ದೇಶಗಳ ಮೂಲಕ ಇದನ್ನು ತಡೆಯಲು ಪ್ರಯತ್ನಿಸಿದರೆ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡಲು ಸಂಪೂರ್ಣವಾಗಿ ಸಿದ್ಧವಾಗಿವೆ. ಇಸ್ಲಾಮಾಬಾದ್‌ನೊಂದಿಗಿನ ಮಾತುಕತೆ ಕೇವಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ. ಯಾಕೆಂದರೆ ಅದು ಭಾರತದ ಭಾಗವಾಗಿದೆ ಎಂದು ತಿಳಿಸಿದರು.
ದ್ರಾಸ್‌ಗೆ ಶನಿವಾರ ಆಗಮಿಸಿದ ರಾಜನಾಥ್ ಸಿಂಗ್ ಅವರು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶ್ರದ್ಧಾಂಜಲಿ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
1999ರ ಆಪರೇಷನ್ ವಿಜಯ್ ನ 27 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸೇನೆಯು ದ್ರಾಸ್‌ನಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಭಾಗವಾಗಿ ಆಪರೇಷನ್ ವಿಜಯ್ ನಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರ ಅದಮ್ಯ ಸಾಹಸವನ್ನು ಗೌರವಿಸಿ ಭಾರತೀಯ ಸೇನೆಯು ಯುದ್ಧ ಸ್ಮಾರಕದಲ್ಲಿ 'ಶೌರ್ಯ ಸಂಧ್ಯಾ'ವನ್ನು ಆಯೋಜಿಸಿತ್ತು. ಈ ಬಳಿಕ ಕಾರ್ಗಿಲ್ ಸಂಘರ್ಷದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೇನಾ ಸಿಬ್ಬಂದಿಯ ಕೆಲವು ಕುಟುಂಬ ಸದಸ್ಯರಿಗೆ ಸಚಿವ ರಾಜನಾಥ್ ಸಿಂಗ್ ಅವರು ವಿಧ್ಯುಕ್ತ ಕಲಶವನ್ನು ಹಸ್ತಾಂತರಿಸಿದರು.