ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವದಲ್ಲೇ 2ನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಭಾರತ!

Muslim Population: ಶತಮಾನಗಳಿಂದ ವಿಶ್ವದ ಅತಿ ದೊಡ್ಡ ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಭಾರತದ ಜನಸಂಖ್ಯಾ ಸ್ವರೂಪದಲ್ಲಿ ಮುಂದಿನ ದಶಕಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ ಸೆಂಟರ್ ತನ್ನ ನೂತನ ಅಧ್ಯಯನದಲ್ಲಿ ಅಂದಾಜಿಸಿದೆ. 2070ರ ವೇಳೆಗೆ ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣ ತುಸು ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಜಗತ್ತಿನ 2ನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯ ರಾಷ್ಟ್ರವಾಗಲಿದೆ ಭಾರತ

ಸಾಂದರ್ಭಿಕ ಚಿತ್ರ -

Profile
Jyoti S Nov 19, 2026 5:41 PM

ದೆಹಲಿ, ನ. 19: ಇಷ್ಟು ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ಭಾರತದ ಜನಸಂಖ್ಯಾ ಸ್ವರೂಪದಲ್ಲಿ ಮುಂದಿನ ದಶಕಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ ಸೆಂಟರ್ (Pew Research Center) ತನ್ನ ನೂತನ ಅಧ್ಯಯನದಲ್ಲಿ ಅಂದಾಜಿಸಿದೆ. 2070ರ ವೇಳೆಗೆ ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣ ತುಸು ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಸಂಸ್ಥೆಯ 'ದಿ ಫ್ಯೂಚರ್ ಆಫ್ ವರ್ಲ್ಡ್ ರಿಲಿಜನ್ಸ್: ಪಾಪ್ಯುಲೇಷನ್ ಗ್ರೋತ್ ಪ್ರೊಜೆಕ್ಷನ್ಸ್, 2020-2070' ವರದಿಯ ಪ್ರಕಾರ, Pew Research America ಭಾರತವು ಹಿಂದೂ ಬಹುಮತದ ರಾಷ್ಟ್ರವಾಗಿಯೇ ಮುಂದುವರಿದರೂ, ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ಅವಧಿಯಲ್ಲಿ ಭಾರತದಲ್ಲಿ ಮುಸ್ಲಿಮರ ಸಂಖ್ಯೆ 33.4 ಕೋಟಿಗೆ ತಲುಪಲಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪಾಲು ತುಸು ಇಳಿಕೆಯಾಗಲಿದೆ ಎಂದು ಅಧ್ಯಯನ ಉಲ್ಲೇಖಿಸಿದೆ.

2070ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಪಾಲು

Pew Research America

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆ ಎಷ್ಟಿರಲಿದೆ?

ಪ್ಯೂ ರಿಸರ್ಚ್ ಅಂಕಿಅಂಶಗಳ ಪ್ರಕಾರ, 2020ರಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಸುಮಾರು ಶೇ. 79.5ರಷ್ಟಿದ್ದು, ಮುಸ್ಲಿಮರ ಪಾಲು ಶೇ. 15.2ರಷ್ಟಿತ್ತು. ಆದರೆ 2070ರ ವೇಳೆಗೆ ಭಾರತದಲ್ಲಿ ಹಿಂದೂಗಳ ಒಟ್ಟು ಜನಸಂಖ್ಯೆ 110 ಕೋಟಿಯಿಂದ 130 ಕೋಟಿಗೆ ಏರಿಕೆಯಾಗಲಿದ್ದರೂ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪಾಲು ಶೇ. 76.7ಕ್ಕೆ ಇಳಿಕೆಯಾಗಲಿದೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 21.3 ಕೋಟಿಯಿಂದ 33.4 ಕೋಟಿಗೆ ಏರಿಕೆಯಾಗಲಿದ್ದು, ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 19.4ಕ್ಕೆ ತಲುಪಲಿದೆ. ಆದಾಗ್ಯೂ, 2070ರಲ್ಲೂ ಭಾರತವು ಸ್ಪಷ್ಟ ಹಿಂದೂ ಬಹುಮತದ ರಾಷ್ಟ್ರವಾಗಿಯೇ ಮುಂದುವರಿಯಲಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ಹಿಂದೂಗಳಿಗಿಂತ ಹಿಂದೂಯೇತರರ ಜನಸಂಖ್ಯೆಯೇ ವೇಗವಾಗಿ ಏರಿಕೆ

Pew Research America 1

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ನಂ.1, ಭಾರತಕ್ಕೆ 2ನೇ ಸ್ಥಾನ!

ಪ್ರಸ್ತುತ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇಂಡೋನೇಷ್ಯಾ ಮೊದಲ ಸ್ಥಾನದಲ್ಲಿದ್ದು, ಭಾರತ ಮತ್ತು ಪಾಕಿಸ್ತಾನ ನಂತರದ ಸ್ಥಾನಗಳಲ್ಲಿವೆ. ಆದರೆ 2070ರ ವೇಳೆಗೆ ಈ ಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಅಧ್ಯಯನ ಹೇಳಿದೆ. ಅತಿ ವೇಗದ ಜನಸಂಖ್ಯಾ ಬೆಳವಣಿಗೆಯ ಕಾರಣದಿಂದ ಪಾಕಿಸ್ತಾನವು 46.1 ಕೋಟಿ ಮುಸ್ಲಿಂ ಜನಸಂಖ್ಯೆಯೊಂದಿಗೆ ಮೊದಲ ಸ್ಥಾನಕ್ಕೆ ಏರಲಿದೆ. ಭಾರತವು 33.4 ಕೋಟಿ ಮುಸ್ಲಿಮರೊಂದಿಗೆ ಎರಡನೇ ಸ್ಥಾನದಲ್ಲಿರಲಿದ್ದು, ನೈಜೀರಿಯಾ 28.2 ಕೋಟಿ ಮೂರನೇ ಸ್ಥಾನಕ್ಕೆ ಹಾಗೂ ಇಂಡೋನೇಷ್ಯಾ 27.4 ಕೋಟಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಪ್ಯೂ ರಿಸರ್ಚ್ ಅಂದಾಜಿಸಿದೆ.

ಪಾಕಿಸ್ತಾನವು ಹಿಂದೂ ರಾಷ್ಟ್ರವಾಗಿ ಬದಲಾಗುತ್ತಿದೆಯೇ !?

ಜನಸಂಖ್ಯೆ ಬದಲಾವಣೆಗೆ ಕಾರಣವೇನು?

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಫಲವತ್ತತೆ ದರ ಕಳೆದ ಕೆಲವು ದಶಕಗಳಿಂದ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೂ, ಮುಸ್ಲಿಂ ಸಮುದಾಯದ ಸರಾಸರಿ ಫಲವತ್ತತೆ ದರ ಹಿಂದೂಗಳಿಗಿಂತ ತುಸು ಹೆಚ್ಚಿರುವುದು ಮತ್ತು ಯುವ ಜನಸಂಖ್ಯೆಯ ಪ್ರಮಾಣ ಅಧಿಕವಾಗಿರುವುದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಇನ್ನು ಜಾಗತಿಕ ಮಟ್ಟದಲ್ಲಿ ನೋಡುವುದಾದರೆ, 2070ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 15.1ರಿಂದ ಶೇ. 13.6ಕ್ಕೆ ಇಳಿಕೆಯಾಗಲಿದ್ದರೆ, ಮುಸ್ಲಿಮರ ಪಾಲು ಶೇ. 35.8ಕ್ಕೆ ಏರಿಕೆಯಾಗಿ ಕ್ರಿಶ್ಚಿಯನ್ ಧರ್ಮವನ್ನು ಶೇ. 29.1 ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಲಿದೆ. ಅಲ್ಲದೆ, 2070ರ ಹೊತ್ತಿಗೆ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 1.03 ಕೋಟಿಗೆ ಮತ್ತು ಅಮೆರಿಕದಲ್ಲಿ 74 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ವರದಿ ವಿವರಿಸಿದೆ.