ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತೀಯ ಪಾಸ್‌ಪೋರ್ಟ್ ಇನ್ನು ಮತ್ತಷ್ಟು ಬಲಿಷ್ಠ! ಜಾಗತಿಕ ಮಟ್ಟದಲ್ಲಿ 80ನೇ ಸ್ಥಾನಕ್ಕೆ ಏರಿಕೆ

2026ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತೀಯ ಪಾಸ್‌ಪೋರ್ಟ್ ಐದು ಸ್ಥಾನಗಳ ಏರಿಕೆ ಕಂಡು 85ನೇ ಸ್ಥಾನದಿಂದ 80ನೇ ಸ್ಥಾನಕ್ಕೆ ಬಂದಿದೆ. ಈ ಸುಧಾರಣೆ ಭಾರತದ ಹೆಚ್ಚುತ್ತಿರುವ ರಾಜತಾಂತ್ರಿಕ ಬಲವನ್ನು ಸೂಚಿಸುತ್ತಿದ್ದು, ಭಾರತೀಯರಿಗೆ 55 ದೇಶಗಳಿಗೆ ವೀಸಾ-ರಹಿತ ಅಥವಾ ವೀಸಾ-ಆನ್-ಅರೈವಲ್ ಮೂಲಕ ಪ್ರಯಾಣಿಸುವ ಅವಕಾಶ ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವನ್ನು ಐಎಟಿಎ ಮಾಹಿತಿ ಮತ್ತು ಹೆನ್ಲಿ & ಪಾರ್ಟ್ನರ್ಸ್ ಸಂಶೋಧನೆಯ ಆಧಾರದಲ್ಲಿ ರೂಪಿಸಲಾಗುತ್ತದೆ.

ಪಾಸ್‌ಪೋರ್ಟ್

ನವದೆಹಲಿ: ಭಾರತದ ಜಾಗತಿಕ ಸಂಚಾರ ಸಾಮರ್ಥ್ಯಕ್ಕೆ ಮಹತ್ವದ ಉತ್ತೇಜನ ನೀಡುವಲ್ಲಿ ಭಾರತೀಯ ಪಾಸ್‌ಪೋರ್ಟ್ (Indian Passport) ಐದು ಸ್ಥಾನಗಳ ಏರಿಕೆಯನ್ನು ದಾಖಲಿಸಿದೆ. 2026ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ 2025ರಲ್ಲಿ 85ನೇ ಸ್ಥಾನದಲ್ಲಿದ್ದ ಭಾರತ, ಈಗ 80ನೇ ಸ್ಥಾನಕ್ಕೇರಿದೆ. ಈ ಸುಧಾರಣೆ ಭಾರತದ ಹೆಚ್ಚುತ್ತಿರುವ ರಾಜತಾಂತ್ರಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತಿದ್ದು, ಭಾರತೀಯ ನಾಗರಿಕರಿಗೆ 55 ದೇಶಗಳಿಗೆ ವೀಸಾ-ರಹಿತವಾಗಿ ಅಥವಾ ವೀಸಾ-ಆನ್-ಅರೈವಲ್ ಮೂಲಕ ಪ್ರಯಾಣ ಮಾಡುವ ಅವಕಾಶವನ್ನು ಒದಗಿಸುತ್ತದೆ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು, ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಪ್ರವೇಶಿಸಬಹುದು ಎಂಬ ಆಧಾರದ ಮೇಲೆ ದೇಶಗಳಿಗೆ ಶ್ರೇಣಿ ನೀಡಲಾಗುತ್ತದೆ. ಈ ಶ್ರೇಣಿಯನ್ನು ಐಎಟಿಎ (International Air Transport Association)ಯ ವಿಶೇಷ ಮಾಹಿತಿಯೊಂದಿಗೆ ಹೆನ್ಲಿ & ಪಾರ್ಟ್ನರ್ಸ್ ಸಂಸ್ಥೆಯ ಸಂಶೋಧನೆಯ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ.

2026ರ ಸೂಚ್ಯಂಕದ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ 55 ದೇಶಗಳಿಗೆ ವೀಸಾ-ರಹಿತವಾಗಿ ಅಥವಾ ವೀಸಾ-ಆನ್-ಅರೈವಲ್ ಮೂಲಕ ಪ್ರಯಾಣಿಸಬಹುದು. ಇದು ಭಾರತದ ಅಂತಾರಾಷ್ಟ್ರೀಯ ಸಂಚಾರ ಸುಧಾರಣೆ ಮತ್ತು ಹೆಚ್ಚುತ್ತಿರುವ ರಾಜತಾಂತ್ರಿಕ ಸಂಪರ್ಕವನ್ನು ತೋರಿಸುತ್ತದೆ. ಶ್ರೇಣಿಯಲ್ಲಿ ಮೇಲಿರುವ ದೇಶಗಳ ನಡುವೆ ತೀವ್ರ ಸ್ಪರ್ಧೆ ಇದ್ದರೂ, ಭಾರತದ ಶ್ರೇಣಿಯಲ್ಲಿ ಏರಿಕೆಯಾಗಿರುವುದು ಇಲ್ಲಿ ನಾಗರಿಕರಿಗೆ ಹೆಚ್ಚುತ್ತಿರುವ ಜಾಗತಿಕ ಸ್ವೀಕೃತಿ ಮತ್ತು ಪ್ರಯಾಣ ಸ್ವಾತಂತ್ರ್ಯದ ಸೂಚಕವಾಗಿದೆ.

2025ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನಕ್ಕೆ ಕುಸಿದಿತ್ತು. ಆಗ 57 ದೇಶಗಳಿಗೆ ಪ್ರವೇಶ ಇದ್ದರೂ, 2024ರ 80ನೇ ಸ್ಥಾನದಿಂದ ಕೆಳಗೆ ಇಳಿದಿತ್ತು. ಆ ಕುಸಿತವು ಪ್ರಯಾಣ ಸ್ವಾತಂತ್ರ್ಯದ ಸವಾಲುಗಳನ್ನು ಎತ್ತಿ ತೋರಿಸಿದರೂ, ಜಾಗತಿಕ ಸಂಚಾರವನ್ನು ಬಲಪಡಿಸುವ ಹೊಸ ಪ್ರಯತ್ನಗಳಿಗೆ ಉತ್ತೇಜನ ನೀಡಿತು. ಹೆನ್ಲಿ ಸೂಚ್ಯಂಕವು ಜಾಗತಿಕ ಸಂಚಾರ ಸಾಮರ್ಥ್ಯದಲ್ಲಿ ಹೆಚ್ಚುತ್ತಿರುವ ಅಂತರವನ್ನೂ ತೋರಿಸುತ್ತದೆ. ಸಿಂಗಪೂರ್, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಬಲಿಷ್ಠ ಪಾಸ್‌ಪೋರ್ಟ್‌ಗಳು ಸುಮಾರು 190 ಅಥವಾ ಅದಕ್ಕಿಂತ ಹೆಚ್ಚು ದೇಶಗಳಿಗೆ ವೀಸಾ-ರಹಿತ ಪ್ರವೇಶವನ್ನು ಒದಗಿಸುತ್ತಿವೆ.

ತಿಂಡಿ ಪ್ಯಾಕೆಟ್ ಒಳಗೆ ಇದ್ದ ಆಟಿಕೆ ಸ್ಫೋಟ: ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಬಾಲಕ

ಭಾರತದ ಪಾಸ್‌ಪೋರ್ಟ್ ಶ್ರೇಣಿಯಂದರೇನು?

2026ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತ 80ನೇ ಸ್ಥಾನಕ್ಕೆ ಏರಿರುವುದು ಜಾಗತಿಕ ಸಂಚಾರದ ದೃಷ್ಟಿಯಲ್ಲಿ ಪ್ರಗತಿಯ ಸಂಕೇತವಾಗಿದೆ. 55 ದೇಶಗಳಿಗೆ ವೀಸಾ-ರಹಿತ ಅಥವಾ ವೀಸಾ-ಆನ್-ಅರೈವಲ್ ಪ್ರವೇಶ ದೊರೆಯುತ್ತಿರುವುದರಿಂದ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಕೆಲವು ನೆರೆ ರಾಷ್ಟ್ರಗಳಿಗಿಂತ ಹೆಚ್ಚಿನ ಅಂತರರಾಷ್ಟ್ರೀಯ ಪ್ರಯಾಣದ ಸ್ವಾತಂತ್ರ್ಯ ಲಭ್ಯವಾಗಿದೆ. ಆದರೆ ಶ್ರೇಣಿಯ ಮೇಲಿರುವ ದೇಶಗಳೊಂದಿಗೆ ಹೋಲಿಸಿದರೆ, ಇನ್ನೂ ವಿಶ್ವದ ಅನೇಕ ಭಾಗಗಳಲ್ಲಿ ನಿರ್ಬಂಧಗಳು ಮುಂದುವರಿದಿವೆ ಎಂಬುವುದು ತಿಳಿದುಬರುತ್ತದೆ.

ಪಾಸ್‌ಪೋರ್ಟ್ ಪವರ್ ಪಟ್ಟಿಯಲ್ಲಿ ಯಾರು ಮುಂಚೂಣಿಯಲ್ಲಿದ್ದಾರೆ?

227 ದೇಶಗಳಲ್ಲಿ 192 ದೇಶಗಳಿಗೆ ವೀಸಾ-ರಹಿತ ಪ್ರವೇಶದೊಂದಿಗೆ ಸಿಂಗಪೂರ್ ಮೂರನೇ ವರ್ಷವೂ ವಿಶ್ವದ ಅತ್ಯಂತ ಪವರ್‌ಪುಲ್ ಪಾಸ್‌ಪೋರ್ಟ್ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ತಲಾ 188 ದೇಶಗಳಿಗೆ ಪ್ರವೇಶದೊಂದಿಗೆ ಎರಡನೇ ಸ್ಥಾನದಲ್ಲಿವೆ. ಡೆನ್ಮಾರ್ಕ್, ಲಕ್ಸಂಬರ್ಗ್, ಸ್ಪೇನ್, ಸ್ವೀಡನ್ ಮತ್ತು ಸ್ವಿಟ್ಜರ್ಲ್ಯಾಂಡ್ ತಲಾ 186 ದೇಶಗಳಿಗೆ ವೀಸಾ-ರಹಿತ ಪ್ರವೇಶದೊಂದಿಗೆ ಮೂರನೇ ಸ್ಥಾನದಲ್ಲಿವೆ. ಆಸ್ಟ್ರಿಯಾ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲೆಂಡ್, ನೆದರ್‌ಲ್ಯಾಂಡ್ಸ್ ಮತ್ತು ನಾರ್ವೇ ತಲಾ 185 ದೇಶಗಳಿಗೆ ಪ್ರವೇಶ ನೀಡುತ್ತಾ ನಾಲ್ಕನೇ ಸ್ಥಾನದಲ್ಲಿವೆ.