ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಭಾರತೀಯರು ಅಸಾಮಾನ್ಯರು’:ಉಭಯ ದೇಶಗಳ ನಡುವಿನ ಸಂಬಂಧವನ್ನು ಶ್ಲಾಘಿಸಿದ ಇರಾನ್

India-Iran relations: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಿರುವ ನಡುವೆಯೂ ಭಾರತದ ರಾಜತಾಂತ್ರಿಕ ವೈಖರಿಯನ್ನು ಇರಾನ್‌ನ ಸರ್ವೋಚ್ಚ ನಾಯಕನ ಭಾರತದಲ್ಲಿನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಶ್ಲಾಘಿಸಿದ್ದಾರೆ. ಭಾರತೀಯರು ಅಸಾಧಾರಣರು ಎಂದಿದ್ದಾರೆ. ಭಾರತೀಯ ಜನರ ಆತ್ಮೀಯತೆ ಮತ್ತು ಸದ್ಭಾವನೆಗಾಗಿ ಶ್ಲಾಘಿಸಿದ್ದಾರೆ.

ಭಾರತೀಯರು ಅಸಾಮಾನ್ಯರು ಎಂದು ಶ್ಲಾಘಿಸಿದ ಇರಾನ್

ಸಾಂದರ್ಭಿಕ ಚಿತ್ರ -

Priyanka P
Priyanka P Apr 8, 2026 9:43 PM

ನವದೆಹಲಿ, ಏ.8: ಇರಾನ್ ಮತ್ತು ಅಮೆರಿಕ (Iran-US war) ನಡುವಿನ ಉದ್ವಿಗ್ನತೆ ಹೆಚ್ಚಿರುವ ನಡುವೆಯೂ ಭಾರತದ ರಾಜತಾಂತ್ರಿಕ ವೈಖರಿಯನ್ನು ಇರಾನ್‌ನ ಸರ್ವೋಚ್ಚ ನಾಯಕನ ಭಾರತದಲ್ಲಿನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಶ್ಲಾಘಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇರಾನ್ ನಾಯಕತ್ವದೊಂದಿಗೆ ಹಲವು ಬಾರಿ ಫಲಪ್ರದ ಸಂಭಾಷಣೆಗಳನ್ನು ನಡೆಸಿದ್ದಾರೆ. ಭಾರತೀಯರು ಅಸಾಧಾರಣರು ಎಂದಿದ್ದಾರೆ. ಭಾರತೀಯ ಜನರ ಆತ್ಮೀಯತೆ ಮತ್ತು ಸದ್ಭಾವನೆಗಾಗಿ ಶ್ಲಾಘಿಸಿದ್ದಾರೆ.

ಅಮೆರಿಕ-ಇರಾನ್ ಸಂಘರ್ಷದ ಸಂದರ್ಭದಲ್ಲಿ ಭಾರತದ ಪಾತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಇಲಾಹಿ, ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷರೊಂದಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಾತನಾಡಿದ್ದಾರೆ. ಸಂಭಾಷಣೆಯು ಉತ್ತಮವಾಗಿತ್ತು ಎಂದು ಬಣ್ಣಿಸಿದ್ದಾರೆ.

ಭಾರತದ ವಿದೇಶಾಂಗ ಸಚಿವರು ಇರಾನಿನ ವಿದೇಶಾಂಗ ಸಚಿವರೊಂದಿಗೆ ಹಲವಾರು ಯಶಸ್ವಿ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದರು. ಭಾವನಾತ್ಮಕವಾಗಿ ಮಾತನಾಡಿದ ಇಲಾಹಿ, ಭಾರತೀಯರನ್ನು ಅಸಾಧಾರಣ ಜನರು ಎಂದು ಹೊಗಳಿದರು. ಈ ಬಗ್ಗೆ ತಮ್ಮ ಮೆಚ್ಚುಗೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ಪದಗಳೇ ಸಿಗುತ್ತಿಲ್ಲ ಎಂದು ಹೇಳಿದರು.

ಹೊರ್ಮುಜ್ ಜಲಸಂಧಿ ದಾಟಲು ಶುಲ್ಕ ಇಲ್ಲ; ಇರಾನ್‌ ಬೇಡಿಕೆಗೆ ಓಮನ್ ವಿರೋಧ

ಸಂದರ್ಶನವೊಂದರಲ್ಲಿ, ಇರಾನ್ ತನ್ನ ನೆರೆಹೊರೆಯ ದೇಶಗಳೊಂದಿಗೆ ಸಂಘರ್ಷಕ್ಕೆ ಇಳಿಯುವ ಯಾವುದೇ ಇಚ್ಛೆಯನ್ನು ಹೊಂದಿಲ್ಲ ಎಂದು ಇಲಾಹಿ ಒತ್ತಿ ಹೇಳಿದರು. ಆದರೆ, ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಲು ಅರಬ್ ದೇಶಗಳಲ್ಲಿರುವ ಮಿಲಿಟರಿ ನೆಲೆಗಳನ್ನು ಬಳಸಿಕೊಂಡಿದೆ ಎಂದು ಅವರು ಆರೋಪಿಸಿದರು.

ಇರಾನ್ ಮತ್ತು ಅಮೆರಿಕ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ನಮಗೆ ಈ ಯುದ್ಧ ಬೇಕಾಗಿಲ್ಲ. ಅದನ್ನು ನಮ್ಮ ಮೇಲೆ ಹೇರಲಾಗಿತ್ತು ಎಂದು ಇಲಾಹಿ ಹೇಳಿದರು. ಸಂಘರ್ಷವನ್ನು ಆರಂಭಿಸಿದವರು ಕೆಲವೇ ದಿನಗಳಲ್ಲಿ ಇರಾನ್ ಅನ್ನು ವಶಪಡಿಸಿಕೊಳ್ಳಬಹುದು ಎಂದು ಭಾವಿಸಿದ್ದರು. ಆದರೆ ನಂತರ ಇರಾನಿನ ನಾಗರಿಕರು ಮತ್ತು ವಸತಿ ಪ್ರದೇಶಗಳ ಮೇಲಿನ ದಾಳಿಗಳು ಗಂಭೀರ ತಪ್ಪು ಎಂದು ಅರಿತುಕೊಂಡರು ಎಂದು ಅವರು ಹೇಳಿದ್ದಾರೆ.

ಟೆಹರಾನ್‌ನ ನಿಲುವನ್ನು ಪುನರುಚ್ಚರಿಸಿದ ಇಲಾಹಿ, ನಾಗರಿಕರಿಗೆ ಹಾನಿ ಮಾಡುವ ಅಥವಾ ನೆರೆಯ ಅರಬ್ ರಾಷ್ಟ್ರಗಳನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಇರಾನ್‌ಗಿಲ್ಲ ಎಂದು ಹೇಳಿದರು.

ಅಮೆರಿಕವು ವಾಷಿಂಗ್ಟನ್ ಅಥವಾ ನ್ಯೂಯಾರ್ಕ್‌ನಿಂದ ನಮ್ಮ ಮೇಲೆ ದಾಳಿ ಮಾಡಲಿಲ್ಲ. ಅವರು ಅರಬ್ ದೇಶಗಳಲ್ಲಿನ ನೆಲೆಗಳನ್ನು ಬಳಸಿ ನಮ್ಮ ಮೇಲೆ ದಾಳಿ ಮಾಡಿದರು. ಮಿನಾಬ್‌ನಲ್ಲಿರುವ ಶಾಲೆ ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿ ಹೊಡೆದ ಕ್ಷಿಪಣಿಗಳು ಆ ದೇಶಗಳಿಂದಲೇ ಬಂದವು ಎಂದು ಅವರು ಆರೋಪಿಸಿದರು. ಆದರೆ ಇರಾನ್, ನಾಗರಿಕ ಮೂಲಸೌಕರ್ಯವನ್ನಲ್ಲ, ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರ ತೀರಿಸಿಕೊಂಡಿತು ಎಂದು ಹೇಳಿದರು.

ಇರಾನ್‌ನ ನೆರೆಹೊರೆಯ ದೇಶದವರು ಟೆಹರಾನ್‌ನ ನಿಲುವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಯವನ್ನು ಇಲಾಹಿ ವ್ಯಕ್ತಪಡಿಸಿದರು. ಪ್ರದೇಶದಾದ್ಯಂತ ಶಾಂತಿಯುತ ಮತ್ತು ರಚನಾತ್ಮಕ ಸಂಬಂಧಗಳಿಗಾಗಿ ಇರಾನ್‌ನ ಬಯಕೆಯನ್ನು ಪುನರುಚ್ಚರಿಸಿದರು.