ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತದ ದಾಳಿಗೆ ಪಾಕ್‌ ತತ್ತರ; ಬಿಲ ಸೇರಿದ ಅಸಿಮ್‌ ಮುನೀರ್‌

ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಉದ್ವಿಗ್ನತೆ ಕೊಂಚ ಮಟ್ಟಿಗೆ ತಗ್ಗಿದೆ. ಭಾರತ ನಡೆಸಿದ ಕ್ಷಿಪಣಿಗಳ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮಿಲಿಟರಿ ನೆಲೆಗಳು ನಾಶವಾಗಿವೆ.

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಉದ್ವಿಗ್ನತೆ ಕೊಂಚ ಮಟ್ಟಿಗೆ ತಗ್ಗಿದೆ. ಭಾರತ ನಡೆಸಿದ ಕ್ಷಿಪಣಿಗಳ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಆಪರೇಷನ್‌ ಸಿಂದೂರ್‌ (Operation Sindoor) ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮಿಲಿಟರಿ ನೆಲೆಗಳು ನಾಶವಾಗಿವೆ. ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ನಡೆಸಿದ ದಾಳಿ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ( Asim Munir) ಅವರನ್ನು ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್‌ಕ್ವಾರ್ಟರ್ಸ್ (GHQ) ನಲ್ಲಿರುವ ಕೋಟೆಯ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದಾಳಿಯ ಬಳಿಕ ಪಾಕಿಸ್ತಾನ ತುರ್ತಾಗಿ ತನ್ನ ಕಮಾಂಡ್ ಮತ್ತು ನಿಯಂತ್ರಣ ಪ್ರಾಧಿಕಾರದ ಜೊತೆ ಸೇರಿದೆ. ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ ಎಂದು ವರದಿಯಾಗಿದೆ. ಭದ್ರತಾ ವಿಶ್ಲೇಷಕರು ಈಗ ಇಸ್ಲಾಮಾಬಾದ್ ತನ್ನ ಪ್ರಮುಖ ಕಮಾಂಡ್ ಕೇಂದ್ರಗಳನ್ನು ಸ್ಥಳಾಂತರಿಸಬಹುದು ಎಂದು ಊಹಿಸಿದ್ದಾರೆ. ಮೂಲಗಳ ಪ್ರಕಾರ, ಪಾಕಿಸ್ತಾನದ 11 ವಾಯುನೆಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ ನಂತರ ಪಾಕ್‌ ಸೇನಾ ಮುಖ್ಯಸ್ಥ ಆಸೀಮ್‌ ಅಮಿರ್‌ ಬೆದರಿದ್ದಾರೆ. ಕದನ ವಿರಾಮದ ಬಳಿಕ ಅವರನ್ನು ಬಂಕರ್‌ಗೆ ಸ್ಥಳಾಂತರಿಸಲಾಗಿದೆ. ಇಸ್ಲಾಮಾಬಾದ್‌ನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಮತ್ತು ಪಾಕಿಸ್ತಾನದ ಏರ್ ಮೊಬಿಲಿಟಿ ಕಮಾಂಡ್‌ಗೆ ನೆಲೆಯಾಗಿರುವ ನೂರ್ ಖಾನ್ ವಾಯುನೆಲೆಯೂ ಸೇರಿತ್ತು. ಚೀನಾದ ಸಂಸ್ಥೆ MIZAZVISION ಮತ್ತು ಭಾರತದ ಕಾವಾ ಸ್ಪೇಸ್‌ನ ಉಪಗ್ರಹ ಚಿತ್ರಣಗಳ ಪ್ರಕಾರ, ನೂರ್‌ ಖಾನ್‌ ರಾವಲ್ಪಂಡಿ, ಸೇರಿದಂತೆ ಹಲವು ಮಿಲಿಟರಿ ನೆಲೆಗಳು ಧ್ವಂಸವಾದ ಸ್ಯಾಟ್‌ಲೈಟ್‌ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಈ ಸುದ್ದಿಯನ್ನೂ ಓದಿ: Fact Check: ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವಾಗ ಪಾಕಿಸ್ತಾನಿಗಳು ವಿಡಿಯೋ ಮಾಡಿದ್ರಾ? ಅಸಲಿ ವಿಚಾರ ಬಯಲು

90 ನಿಮಿಷಗಳಲ್ಲಿ ಭಾರತವು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿಯದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಪಸ್ರೂರ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕಾರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ ಮತ್ತು ಜಕೋಬಾಬಾದ್ ವಾಯುನೆಲೆಯ ಮೇಲೆ ದಾಳಿ ಮಾಡಿತು. ಚುನಿಯನ್ ರಾಡಾರ್ ಸ್ಥಾಪನೆಯನ್ನು ಸಹ ಧ್ವಂಸ ಮಾಡಲಾಗಿದೆ. ದಾಳಿ ಮಾಡಲು ಬ್ರಹ್ಮೋಸ್‌ ಕ್ಷಿಪಣಿಗಳ ಬಳಕೆಯಾಗಿದೆ ಎಂದು ಭಾರತ ಹೇಳಿದೆ.