ಲಖನೌ, ಆ.22: ವಿಮಾನ ಲ್ಯಾಂಡಿಂಗ್ ವೇಳೆ ಬಾಲ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ, ಇಂಡಿಗೋ (IndiGo) ಸಂಸ್ಥೆಯ ವಿಮಾನವೊಂದನ್ನು ಸ್ಥಗಿತಗೊಳಿಸಲಾಯಿತು. ಆಗಸ್ಟ್ 19 ರಂದು, ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಇಂಡಿಗೋ ಸಂಸ್ಥೆಯ 6E 2379 ವಿಮಾನವು ರನ್‌ವೇ ಮೇಲೆ ಇಳಿಯುವಾಗ (flight landing) ತಳಭಾಗಕ್ಕೆ ಹಾನಿಯಾಗಿದೆ. ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನದ (SOP) ಪ್ರಕಾರ, ಈ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಮಾಹಿತಿ ನೀಡಲಾಗಿದೆ. ವಿಮಾನವನ್ನು ಪರಿಶೀಲಿಸಲು ತನಿಖಾ ತಂಡವು ಇನ್ನೂ ಗೋರಖ್‌ಪುರಕ್ಕೆ ತಲುಪಬೇಕಿದೆ.
ಬಾಲ ಡಿಕ್ಕಿ ಹೊಡೆದಿದ್ದರಿಂದ (ಟೇಲ್ ಇಂಪ್ಯಾಕ್ಟ್) ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಗೋರಖ್‌ಪುರ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದೇ ವೇಳೆ ಇಂಡಿಗೋ ಸಂಸ್ಥೆಯು, ವಿಮಾನವು ಸದ್ಯ ದುರಸ್ತಿ ಕಾರ್ಯಕ್ಕೆ ಒಳಪಟ್ಟಿದ್ದು, ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದ ನಂತರವೇ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ ಎಂದು ತಿಳಿಸಿದೆ.
ದೆಹಲಿಯಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ಇಂಡಿಗೋ 6E 2381 ವಿಮಾನವು, ಸುರಕ್ಷತೆಯ ದೃಷ್ಟಿಯಿಂದ ಗೋ ಅರೌಂಡ್ ನಡೆಸಿ, ನಂತರ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ತಪಾಸಣೆಯ ವೇಳೆ ವಿಮಾನದ ಎಪಿಯು ಇನ್ಲೆಟ್‌ನಲ್ಲಿ ಗೀರುಗಳು ಕಂಡುಬಂದ ಹಿನ್ನೆಲೆಯಲ್ಲಿ, ದುರಸ್ತಿ ಮತ್ತು ತಾಂತ್ರಿಕ ಅನುಮತಿಗಳ ನಂತರ ವಿಮಾನ ಕಾರ್ಯಾಚರಣೆ ಪುನರಾರಂಭಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಇಂಡಿಗೋದಲ್ಲಿ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ.
ANTF: ಹೆರಾಯಿನ್ ಸಮೇತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಂಡಿಗೋ ಎಂಜಿನಿಯರ್
ವಿಮಾನ ನಿಲ್ದಾಣದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಿದ ಮಹಿಳೆ
ವಿಮಾನ ರದ್ದಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಕೋಪಗೊಂಡು ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯು ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದರು. ಆದರೆ, ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳೆ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಜಗಳವಾಡಿದ್ದು, ಸಾರ್ವಜನಿಕ ವಸ್ತುವನ್ನು ಹಾನಿಗೊಳಿಸಿದ್ದಾರೆ. ಈ ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಮಹಿಳೆಯೊಬ್ಬರು ಇಂಡಿಗೋ ವಿಮಾನ 6E 7352 ರಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಬೇಕಿತ್ತು. ವಿಮಾನ ರದ್ದಾದ ನಂತರ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಮಹಿಳೆ ಗದ್ದಲ ನಡೆಸಿದ್ದಾರೆ. ಆಕೆಯ ಮಗ ಅಸ್ವಸ್ಥರಾಗಿದ್ದರಿಂದ ಭೇಟಿ ಮಾಡಬೇಕಾಗಿತ್ತು. 3 ಗಂಟೆಗಳ ಕಾಲ ಕಾದ ನಂತರವೂ ಆಕೆಗೆ ರದ್ದತಿಯ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.