ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯರಾತ್ರಿಯವರೆಗೆ ಎಲ್ಲಾ ಇಂಡಿಗೋ ವಿಮಾನಗಳು ರದ್ದು

IndiGo Flights Cancellations Live: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿಭಾರಿ ಅಡಚಣೆ ಉಂಟಾಗಿದ್ದು, ಶುಕ್ರವಾರ ಬೆಳಿಗ್ಗೆ 9 ಗಂಟೆಯವರೆಗೆ ಇಂಡಿಗೋ 320 ವಿಳಂಬಿತ ವಿಮಾನಗಳು ಮತ್ತು 92 ರದ್ದತಿಗಳನ್ನು ವರದಿ ಮಾಡಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೂರು ದಿನಗಳಲ್ಲಿ 700ಕೂ ಅಧಿಕ ನಿಗದಿತ ಆಗಮನ ಮತ್ತು ನಿರ್ಗಮನಗಳನ್ನು ಹೊಂದಿತ್ತು.

ಇಂದು ಮಧ್ಯರಾತ್ರಿಯವರೆಗೆ ಎಲ್ಲಾ ಇಂಡಿಗೋ ವಿಮಾನಗಳು ರದ್ದು!

-

Abhilash BC
Abhilash BC Dec 5, 2025 12:03 PM

ನವದೆಹಲಿ, ಡಿ.5: ಇಂಡಿಗೋ ವಿಮಾನ(IndiGo flight)ಗಳ ಹಾರಾಟದಲ್ಲಿ ಸತತ ನಾಲ್ಕನೇ ದಿನ(ಶುಕ್ರವಾರ (ಡಿಸೆಂಬರ್ 5, 2025) ವೂ ಅಡಚಣೆಗಳು ಮುಂದುವರಿದಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿಯವರೆಗೆ ಎಲ್ಲಾ ಇಂಡಿಗೋ ವಿಮಾನಗಳು ರದ್ದುಗೊಳಿಸಲಾಗಿದೆ. ಆರಂಭದಲ್ಲಿ ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಮಧ್ಯಾಹ್ನದವರೆಗೂ ಎಲ್ಲಾ ನಿರ್ಗಮನಗಳಲ್ಲಿಯೂ ನಿಲುಗಡೆ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಅಡಚಣೆಗಳು ಹೆಚ್ಚುತ್ತಲೇ ಇದ್ದ ಕಾರಣ ಇದೀಗ ಮಧ್ಯರಾತ್ರಿಯವರೆಗೆ ಎಲ್ಲಾ ಇಂಡಿಗೋ ವಿಮಾನಗಳು ರದ್ದುಗೊಳಿಸಲಾಗಿದೆ. ದೆಹಲಿಯಿಂದ ಪ್ರತಿದಿನ ಸುಮಾರು 235 ಇಂಡಿಗೋ ವಿಮಾನ ಪ್ರಯಾಣಿಸುತ್ತಿತ್ತು.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿಭಾರಿ ಅಡಚಣೆ ಉಂಟಾಗಿದ್ದು, ಶುಕ್ರವಾರ ಬೆಳಿಗ್ಗೆ 9 ಗಂಟೆಯವರೆಗೆ ಇಂಡಿಗೋ 320 ವಿಳಂಬಿತ ವಿಮಾನಗಳು ಮತ್ತು 92 ರದ್ದತಿಗಳನ್ನು ವರದಿ ಮಾಡಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೂರು ದಿನಗಳಲ್ಲಿ 700ಕೂ ಅಧಿಕ ನಿಗದಿತ ಆಗಮನ ಮತ್ತು ನಿರ್ಗಮನಗಳನ್ನು ಹೊಂದಿತ್ತು.

ಶುಕ್ರವಾರ ಸಂಜೆ 6 ಗಂಟೆಯವರೆಗೆ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಕಳೆದ ಮೂರು ದಿನಗಳಲ್ಲಿ ಪ್ರಮುಖ ನಗರಗಳಲ್ಲಿ ನೂರಾರು ವಿಮಾನಗಳ ಹಾರಾಟ ರದ್ದತಿಗೆ ಕಾರಣವಾಗಿರುವ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಅಡಚಣೆಗಳ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.

ಇಂಡಿಗೋ ವೈಫಲ್ಯದ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ನೀತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, "ಸರ್ಕಾರದ ಈ ಏಕಸ್ವಾಮ್ಯ ಮಾದರಿಯ ಬೆಲೆ ಇಂಡಿಗೋ ವೈಫಲ್ಯ. ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಯಲ್ಲಿ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಾರೆ. ಭಾರತವು ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ, ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ 550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಸಂಚಾರ ರದ್ದು; ಊಟ, ನೀರಿಲ್ಲದೆ ಪ್ರಯಾಣಿಕರ ಪರದಾಟ



‘ವಿಮಾನ ಕೆಲಸದ ಸಮಯದ ಮಿತಿಗಳು’ ಎಂಬ (ಎಫ್‌ಡಿಟಿಎಲ್‌) ಹೊಸ ನಿಯಮವನ್ನು ನ.1ರಿಂದ ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಓರ್ವ ಸಿಬ್ಬಂದಿ ದಿನಕ್ಕೆ 8 ಗಂಟೆ, ವಾರಕ್ಕೆ 35 ಗಂಟೆ, ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ 1,000 ಗಂಟೆಗಳ ಹಾರಾಟ ಮಾತ್ರ ನಡೆಸಬೇಕು. ವಾರದಲ್ಲಿ 2 ಬಾರಿಯಷ್ಟೇ ರಾತ್ರಿ ವೇಳೆ ಪೈಲಟ್‌ ವಿಮಾನವನ್ನು ಲ್ಯಾಂಡ್‌ ಮಾಡಬಹುದು. ಎಫ್‌ಡಿಟಿಎಲ್‌ ಅಳವಡಿಕೆಯಿಂದಾಗಿ ಪೈಲಟ್‌ಗಳ ಕೆಲಸದ ಅವಧಿಗೆ ಹೊಸ ಮಿತಿ ಹೇರಲಾಗಿದ್ದು, ಇಂಡಿಗೋ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ.