ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಧ್ಯಪ್ರಾಚ್ಯ ಸಂಕಷ್ಟದ ನಡುವೆಯೂ ದೇಶದಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ: ಕೇಂದ್ರದಿಂದ ಸ್ಪಷ್ಟನೆ

India Has Adequate Fertiliser Stocks: ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ರಸಗೊಬ್ಬರ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ಸರಬರಾಜು ವ್ಯತ್ಯಯಗೊಂಡಿವೆ. ಆದರೆ ಭಾರತದಲ್ಲಿ ಸಾಕಷ್ಟು ರಸಗೊಬ್ಬರ ಸಂಗ್ರಹವಿದೆ ಎಂದು ಕೇಂದ್ರ ತಿಳಿಸಿದೆ.

ಮಧ್ಯಪ್ರಾಚ್ಯ ಸಂಕಷ್ಟದ ನಡುವೆಯೂ ದೇಶಕ್ಕಿಲ್ಲ ಕಳವಳ

ಸಾಂದರ್ಭಿಕ ಚಿತ್ರ -

Priyanka P
Priyanka P Mar 14, 2026 8:30 PM

ನವದೆಹಲಿ, ಮಾ. 14: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವು (Middle East crisis) ಜಾಗತಿಕವಾಗಿ ಅಗತ್ಯ ವಸ್ತುಗಳ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗುವ ಆತಂಕವನ್ನು ಮೂಡಿಸಿದ್ದರೂ, ಭಾರತದಲ್ಲಿ ಸಾಕಷ್ಟು ರಸಗೊಬ್ಬರ (Fertilizer) ಸಂಗ್ರಹವಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 2026ರ ಬಿತ್ತನೆ ಬೆಳೆ ಸುಗಮವಾಗಿ ನಡೆಯಲು ಅಗತ್ಯವಾದ ಪ್ರಮುಖ ಪೋಷಕಾಂಶಗಳ ಹೆಚ್ಚಿನ ಪ್ರಮಾಣದ ಸಂಗ್ರಹವನ್ನು ಭಾರತ ಈಗಾಗಲೇ ಭದ್ರಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ರಸಗೊಬ್ಬರ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದ ಮೂಲಕ ಮೂಲಕ ಸಾಗುವ ಸರಬರಾಜು ವ್ಯತ್ಯಯಗೊಂಡಿದೆ. ಇದರಿಂದ ಯೂರಿಯಾ ಮತ್ತು ಅಮೋನಿಯಾ ಮುಂತಾದ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದು, ದೊಡ್ಡ ಖರೀದಿದಾರ ರಾಷ್ಟ್ರಗಳಿಗೆ ಆಮದು ವೆಚ್ಚವೂ ಹೆಚ್ಚಾಗಿದೆ.

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಹೆಚ್ಚಾಗುವ ಸಾಧ್ಯತೆಯನ್ನು ಮುಂಚಿತವಾಗಿ ಊಹಿಸಿ, ಸರ್ಕಾರವು ಆಮದು ಪ್ರಕ್ರಿಯೆಯನ್ನು ವೇಗಗೊಳಿಸುವ ಹಾಗೂ ದೇಶೀಯ ನಿರ್ವಹಣಾ ವೇಳಾಪಟ್ಟಿ ಬದಲಿಸುವ ಕ್ರಮ ಕೈಗೊಂಡಿದೆ.

ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?

ಮಾರ್ಚ್ 13ರ ಸ್ಥಿತಿಗತಿಗಳ ಪ್ರಕಾರ, ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ ಭಾರತದಲ್ಲಿ ರಸಗೊಬ್ಬರ ಸಂಗ್ರಹ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಸಂಗ್ರಹದ ಮಟ್ಟವು ಬೇಸಗೆ ಬೆಳೆಗಳಿಗೆ ಸಿದ್ಧತೆ ನಡೆಸುತ್ತಿರುವ ರೈತರಿಗೆ ಸಾಕಷ್ಟು ಭದ್ರತೆ ಒದಗಿಸುವ ಮಟ್ಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಯೂರಿಯಾ ದಾಸ್ತಾನು ಪ್ರಸ್ತುತ ಸುಮಾರು 62 ಲಕ್ಷ ಟನ್‌ಗಳಷ್ಟಿದ್ದು, ಕಳೆದ ವರ್ಷಕ್ಕಿಂತ ಸರಿಸುಮಾರು 10 ಲಕ್ಷ ಟನ್‌ಗಳು ಹೆಚ್ಚಾಗಿದೆ. ಡಿಎಪಿ ದಾಸ್ತಾನು 25 ಲಕ್ಷ ಟನ್‌ಗಳಷ್ಟಿದ್ದು, ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಎನ್‌ಪಿಕೆ ದಾಸ್ತಾನು ದಾಖಲೆಯ 56 ಲಕ್ಷ ಟನ್‌ಗಳನ್ನು ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 31 ಲಕ್ಷ ಟನ್‌ಗಳಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ದೇಶೀಯ ಉತ್ಪಾದನೆಯೂ ಪೂರೈಕೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 25 ಲಕ್ಷ ಟನ್ ಯೂರಿಯಾ ಉತ್ಪಾದನೆಯಾಗುತ್ತದೆ. ಆದರೆ ಮಾರ್ಚ್‌ನಲ್ಲಿ ಉತ್ಪಾದನೆ ಸುಮಾರು 17 ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆ ಇದೆ.

ಮಧ್ಯಪ್ರಾಚ್ಯದ ಅನಿಶ್ಚಿತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂಚಿತ ಖರೀದಿ ತಂತ್ರವನ್ನು ಅನುಸರಿಸಿದೆ. ಹೆಚ್ಚು ಬಳಕೆಯಾಗುವ ಮತ್ತು ನೈಸರ್ಗಿಕ ಅನಿಲದ ಮೇಲೆ ಅವಲಂಬಿತವಾಗಿರುವ ಯೂರಿಯಾ ರಸಗೊಬ್ಬರದ ಜಾಗತಿಕ ಟೆಂಡರ್‌ ಅನ್ನು ಮುಂಚಿತವಾಗಿ ಹೊರಡಿಸಲಾಗಿದೆ.

ಮೋದಿಯನ್ನು ಪ್ರೀತಿಸುತ್ತೇನೆ, ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ ಎಂದ ಡೊನಾಲ್ಡ್ ಟ್ರಂಪ್

ಫೆಬ್ರವರಿ ಮಧ್ಯದಲ್ಲಿ ಆರ್ಡರ್ ಮಾಡಲಾದ 13.5 ಲಕ್ಷ ಟನ್ ಯೂರಿಯಾದಲ್ಲಿ ಸುಮಾರು ಶೇ. 90ರಷ್ಟು ಸರಕುಗಳು ಮಾರ್ಚ್ ಅಂತ್ಯದೊಳಗೆ ಭಾರತೀಯ ಬಂದರಿಗೆ ತಲುಪುವ ನಿರೀಕ್ಷೆ ಇದೆ. ಸಾಮಾನ್ಯ ಸಾಗಣೆ ಮಾರ್ಗಗಳಲ್ಲಿ ಅಪಾಯಗಳಿದ್ದರೂ, ಭಾರತದ ಸರಬರಾಜು ಮಾರ್ಗಗಳು ಸ್ಥಿರವಾಗಿವೆ ಎಂದು ಮೂಲಗಳು ಹೇಳಿವೆ.

ರಷ್ಯಾ ಮತ್ತು ಮೊರೊಕ್ಕೊದಿಂದ ಯೂರಿಯಾ, ಡಿಎಪಿ ಮತ್ತು ಎನ್‌ಪಿಕೆ ಪೂರೈಕೆಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗದ ಮೂಲಕ ನಿರಂತರವಾಗಿ ಬರುತ್ತಿವೆ. ಅಧಿಕೃತ ಮಾಹಿತಿಯ ಪ್ರಕಾರ, 2026ರ ಫೆಬ್ರವರಿವರೆಗೆ ಭಾರತವು 98 ಲಕ್ಷ ಟನ್ ಸಿದ್ಧ ರಸಗೊಬ್ಬರಗಳನ್ನು ಆಮದು ಮಾಡಿಕೊಂಡಿದೆ. ಮುಂದಿನ ಮೂರು ತಿಂಗಳಲ್ಲಿ ಇನ್ನೂ 17 ಲಕ್ಷ ಟನ್ ಸರಕು ತಲುಪುವ ಸಾಧ್ಯತೆ ಇದ.