ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Engineer Rashid: ಜೈಲಿನಿಂದಲೇ ಸ್ಪರ್ಧಿಸಿ ಚುನಾವಣೆಗೆ ಗೆದ್ದಿದ್ದ ಸಂಸದ ಇಂಜಿನಿಯರ್ ರಶೀದ್ ಹೈಡ್ರಾಮಾ! ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಹಾಗೂ ಸಂಸದನಾಗಿ ತನ್ನ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸಂಸದ ಶೇಖ್ ಅಬ್ದುಲ್ ರಶೀದ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ತಿಹಾರ್‌ ಜೈಲಿನಲ್ಲಿ ಇಂಜಿನಿಯರ್ ರಶೀದ್ ಉಪವಾಸ ಸತ್ಯಾಗ್ರಹ

Engineer Rashid

Profile Vishakha Bhat Jan 31, 2025 12:37 PM

ಶ್ರೀನಗರ: ತಿಹಾರ್ ಜೈಲಿನಲ್ಲಿ (Tihar Jail) ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸ್ವತಂತ್ರ ಸಂಸದ ಶೇಖ್ ಅಬ್ದುಲ್ ರಶೀದ್ (Engineer Rashid) ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾನೆ. ಆತನಿಗೆ ಬೆಂಬಲ ಸೂಚಿಸಲು ಶ್ರೀನಗರದ ಪ್ರತಾಪ್ ಪಾರ್ಕ್‌ನಲ್ಲಿ ರಶೀದ್ ಪಕ್ಷವಾದ ಅವಾಮಿ ಇತ್ತೆಹಾದ್ ಪಾರ್ಟಿ (ಎಐಪಿ) ಸದಸ್ಯರೂ ಉಪವಾಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಲೋಕ ಸಭಾ ಸ್ಪೀಕರ್‌ ಅವರಿಗೂ ಪತ್ರ ಬರೆದಿರುವ ರಶೀದ್‌ ತಾನೊಬ್ಬ ಸಂಸದ ತನ್ನ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾನೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವ್ಯಂಗ್ಯವಾಡಿದ್ದಾನೆ.



ಇಂಜಿನಿಯರ್ ರಶೀದ್ ಎಂದೇ ಜನಪ್ರಿಯನಾಗಿ ಕರೆಯಲ್ಪಡುವ ರಶೀದ್, 2017ರ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ 2019 ರಿಂದ ತಿಹಾರ್‌ ಜೈಲಿನಲ್ಲಿದ್ದಾನೆ. 2017ರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎ ಶೇಖ್‌ ಅಬ್ದುಲ್‌ ರಶೀದ್‌ ವಿರುದ್ಧ ಯುಎಪಿಎ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಲ್ಲಿ ಎನ್‌ಐಎ ಆತನನ್ನು ಬಂಧಿಸಿತ್ತು. ಜನವರಿ 22 ರಂದು, ರಶೀದ್ ತನ್ನ ಜಾಮೀನು ಅರ್ಜಿಯ ತೀರ್ಪು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಅದು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ ಪ್ರಮುಖ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬಾರಾಮುಲ್ಲಾ ಕ್ಷೇತ್ರದಿಂದ ಸೋಲಿಸುವ ಮೂಲಕ ಸುದ್ದಿಯಾಗಿದ್ದ. ನಂತರ ಪ್ರಮಾಣ ವಚನ ಸ್ವೀಕರಿಸಲು ಎನ್‌ಐಎ ಅನುಮತಿ ನೀಡಿತ್ತು. ಜುಲೈ 5 ರಂದು, ಲೋಕಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ರಶೀದ್‌ಗೆ ಕಸ್ಟಡಿ ಪೆರೋಲ್ ನೀಡಿತ್ತು.

ಈ ಸುದ್ದಿಯನ್ನೂ ಓದಿ : Delhi Riots Case: ದೆಹಲಿ ಗಲಭೆ ಪ್ರಕರಣ- ಉಮರ್ ಖಾಲಿದ್‌ಗೆ ಏಳು ದಿನಗಳ ಮಧ್ಯಂತರ ಜಾಮೀನು

ಜೈಲಿನಲ್ಲಿದ್ದುಕೊಂಡೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಈತ 2,04142 ಅಂತರದಿಂದ ಜಯ ಗಳಿಸಿದ್ದ.