ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Infosys: ಮೊಹಾಲಿಯಲ್ಲಿ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರ ವಿಸ್ತರಣೆ

ವಿಸ್ತರಣೆಯ ಭಾಗವಾಗಿ ಇನ್ಫೋಸಿಸ್ ಹೊಸ ಸಾಫ್ಟ್ ವೇರ್ ಅಭಿವೃದ್ಧಿ ಬ್ಲಾಕ್ ಗಳನ್ನು ಅಭಿವೃದ್ಧಿಪಡಿಸಲಿದೆ. ಇದರ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಮಾರು 3,50,000 ಚದರಡಿಯ ಬಿಲ್ಟ್-ಅಪ್ ಪ್ರದೇಶ ಮತ್ತು ಸುಮಾರು 3,000 ಉದ್ಯೋಗಿಗಳು ಕುಳಿತುಕೊಳ್ಳಲು ವಿಶಾಲ ಸ್ಥಳದ ನಿರ್ಮಾಣವನ್ನೂ ಮಾಡಲಾಗು ತ್ತಿದೆ.

ಮೊಹಾಲಿಯಲ್ಲಿ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರ ವಿಸ್ತರಣೆ

-

Ashok Nayak
Ashok Nayak Mar 12, 2026 3:38 PM

ಹೊಸದಾಗಿ 3,50,000 ಚದರಡಿಯಲ್ಲಿ ಸಮಗ್ರ ಅಭಿವೃದ್ಧಿ ಕ್ಯಾಂಪಸ್ ಮೂಲಕ ತನ್ನ ಪ್ರಾದೇಶಿಕ ಉಪಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತಿರುವ ಇನ್ಫೋಸಿಸ್

ಬೆಂಗಳೂರು: ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹೆಯಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಇನ್ಫೋಸಿಸ್ (NSE, BSE, NYSE: INFY) ಮೊಹಾಲಿಯಲ್ಲಿ ರುವ ತನ್ನ ಡೆವಲಪ್ ಮೆಂಟ್ ಸೆಂಟರ್ (DC) ಯನ್ನು ವಿಸ್ತರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ವಿಸ್ತರಣೆ ಯೋಜನೆಗೆ ಅಧಿಕೃತವಾಗಿ ಭೂಮಿಪೂಜೆಯನ್ನು ನೆರವೇರಿಸಲಾಗಿದ್ದು, ಈ ಮೂಲಕ ಉತ್ತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತಿದೆ.

ಈ ವಿಸ್ತರಣೆಯೊಂದಿಗೆ ಇನ್ಫೋಸಿಸ್ ನಾವೀನ್ಯತೆಯನ್ನು ಹೆಚ್ಚಿಸುವುದು, ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವುದು ಮತ್ತು ಪ್ರೋತ್ಸಾಹಿಸುವುದು ಹಾಗೂ ಪಂಜಾಬ್ ನ ಆರ್ಥಿಕ & ತಾಂತ್ರಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಪುನರು ಚ್ಚರಿಸುತ್ತದೆ.

ಈ ಮಹತ್ವದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಂಜಾಬಿನ ಮುಖ್ಯಮಂತ್ರಿ ಎಸ್. ಭಗವಂತ್ ಸಿಂಗ್ ಮಾನ್, ಬಂಡವಾಳ ಉತ್ತೇಜನ, ಇಂಧನ ಮತ್ತು ಸ್ಥಳೀಯ ಆಡಳಿತ ಸಚಿವರಾದ ಸಂಜೀವ್ ಅರೋರ ಭಾಗಿಯಾಗಿದ್ದರು.

ಇದೇ ವೇಳೆ, ಇನ್ಫೋಸಿಸ್ ನ ಮುಖ್ಯ ಹಣಕಾಸು ಅಧಿಕಾರಿ ಜಯೇಶ್ ಸಂಘ್ರಜ್ಕಾ, ಕಾರ್ಯಕಾರಿ ಉಪಾಧ್ಯಕ್ಷ ಸುನೀಲ್ ಕುಮಾರ್ ಧಾರೇಶ್ವರ್, ಹಿರಿಯ ಉಪಾಧ್ಯಕ್ಷ ನೀಲಾದ್ರಿ ಪ್ರಸಾದ್ ಮಿಶ್ರಾ ಸೇರಿದಂತೆ ಇನ್ಫೋಸಿಸ್ ಮತ್ತು ಪಂಜಾಬ್ ಸರ್ಕಾರದ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: T20 World Cup: ʻಡ್ಯಾರಿಲ್‌ ಮಿಚೆಲ್‌ ಬಳಿ ಅರ್ಷದೀಪ್‌ ಸಿಂಗ್‌ ಕ್ಷಮೆ ಕೇಳುವ ಅಗತ್ಯವಿರಲಿಲ್ಲʼ-ಗೌತಮ್‌ ಗಂಭೀರ್‌ ಅಚ್ಚರಿ ಹೇಳಿಕೆ!

ವಿಸ್ತರಣೆಯ ಭಾಗವಾಗಿ ಇನ್ಫೋಸಿಸ್ ಹೊಸ ಸಾಫ್ಟ್ ವೇರ್ ಅಭಿವೃದ್ಧಿ ಬ್ಲಾಕ್ ಗಳನ್ನು ಅಭಿವೃದ್ಧಿಪಡಿಸಲಿದೆ. ಇದರ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಮಾರು 3,50,000 ಚದರಡಿಯ ಬಿಲ್ಟ್-ಅಪ್ ಪ್ರದೇಶ ಮತ್ತು ಸುಮಾರು 3,000 ಉದ್ಯೋಗಿಗಳು ಕುಳಿತುಕೊಳ್ಳಲು ವಿಶಾಲ ಸ್ಥಳದ ನಿರ್ಮಾಣವನ್ನೂ ಮಾಡಲಾಗು ತ್ತಿದೆ. ಈ ಮೂಲಕ ಉದ್ಯಮಕ್ಕೆ ತಕ್ಕಂತೆ AI ನೇತೃತ್ವದ ಪರಿಹಾರಗಳನ್ನು ವಿನ್ಯಾಸ ಗೊಳಿಸುವ, ಸಹ-ರಚಿಸುವ ಮತ್ತು ನಿಯೋಜನೆ ಮಾಡುವ ಇನ್ಫೋಸಿಸ್ ಸಾಮರ್ಥ್ಯವನ್ನು ಬಲಪಡಿಸಲಾಗುತ್ತಿದೆ.

ಡಿಸಿ ವಿಸ್ತರಣೆಯ ಪ್ರಮುಖ ಅಂಶಗಳು:

  • ಅತ್ಯುತ್ಕೃಷ್ಟ ದಕ್ಷತೆಯ ಕಟ್ಟಡ, ನೈಸರ್ಗಿಕವಾದ ಉತ್ತಮ ಬೆಳಕಿನ ಒಳಾಂಗಣಗಳು, ಎಲ್ಇಡಿ ಆಧಾರಿತ ಬೆಳಕಿನ ವ್ಯವಸ್ಥೆ, ಆಕ್ಯುಪೆನ್ಸಿ ಸೆನ್ಸಾರ್ ವ್ಯವಸ್ಥೆ ಇರಲಿದೆ.
  • ವಲಯ-ಆಧಾರಿತ HVAC ನಿಯಂತ್ರಣಗಳಿಂದ ಬೆಂಬಲಿತವಾದ ಸುಧಾರಿತ ರೇಡಿಯೆಂಟ್ ಕೂಲಿಂಗ್ ಮತ್ತು ಹೀಟಿಂಗ್ ವ್ಯವಸ್ಥೆ.
  • ಮೆಂಬರೇನ್ ಬಯೋರಿಯಾಕ್ಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಸಮಗ್ರ ನೀರಿನ ಉಳಿತಾಯ ಮತ್ತು ಶೇ.100 ರಷ್ಟು ತ್ಯಾಜ್ಯ ನೀರಿನ ಮರುಬಳಕೆ ವ್ಯವಸ್ಥೆ.
  • ಹೀಟ್ –ಹೈಲ್ಯಾಂಡ್ ಪರಿಣಾಮಗಳನ್ನು ಕಡಿಮೆ ಮಾಡಲು ವ್ಯಾಪಕವಾದ ಹಸಿರು ಲ್ಯಾಂಡ್ ಸ್ಕೇಪ್, ತ್ಯಾಜ್ಯ ಮಟ್ಟ ಕಡಿಮೆ ಮಾಡಲು ಮಾಡ್ಯುಲರ್ ವ್ಯವಸ್ಥೆಗಳೊಂದಿಗೆ ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳ ಬಳಕೆ.
  • ನಿರಂತರ ಮೇಲ್ವಿಚಾರಣೆ ಮತ್ತು ಕಾರ್ಯಕ್ಷಮತೆಯ ಆಪ್ಟಿಮೈಸೇಶನ್ ಅನ್ನು ಸಕ್ರಿಯಗೊಳಿಸುವ ಸ್ಮಾರ್ಟ್ ಕಟ್ಟಡ ತಂತ್ರಜ್ಞಾನಗಳ ಅಳವಡಿಕೆ

ಪ್ರಸ್ತುತ ಇನ್ಫೋಸಿಸ್ ಮೊಹಾಲಿಯಲ್ಲಿ ಸುಮಾರು 1,000 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ, ರೀಟೇಲ್ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳ ಜಾಗತಿಕ ಗ್ರಾಹಕರಿಗೆ ಸುಧಾರಿತ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದೆ. ವಿಸ್ತರಿತ ಕ್ಯಾಂಪಸ್ ಕ್ಲೌಡ್, AI, ಅಪ್ಲಿಕೇಶನ್ ಡೆವಲಪ್ ಮೆಂಟ್ ಮತ್ತು ಡಿಜಿಟಲ್ ರೂಪಾಂತರದಲ್ಲಿನ ಇನ್ಫೋಸಿಸ್ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಮೂಲಕ ಕಂಪನಿಯು ತನ್ನ ಜಾಗತಿಕ ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಗಳನ್ನು ಇನ್ನೂ ಉತ್ತಮ ರೀತಿಯಲ್ಲಿ ಪೂರೈಸಲು ಹಾಗೂ AI ಆಧಾರಿತ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪಂಜಾಬ್ ನ ಮುಖ್ಯಮಂತ್ರಿ ಎಸ್.ಭಗವಂತ್ ಸಿಂಗ್ ಮಾನ್ ``ಇನ್ಫೋಸಿಸ್ ನ ಮೊಹಾಲಿ ಡಿಸಿಯ ವಿಸ್ತರಣೆಯು ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಉದಯೋನ್ಮುಖ ಕೇಂದ್ರವಾಗಿ ಪಂಜಾಬ್ ನ ಸ್ಥಾನವನ್ನು ಬಲಪಡಿಸು ತ್ತದೆ. ಈ ಹೂಡಿಕೆಯು ಪಂಜಾಬ್ ಮತ್ತು ನೆರೆಯ ರಾಜ್ಯಗಳ ಯುವಕರಿಗೆ ಗಮನಾರ್ಹ ವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ರಾಜ್ಯದ ಐಟಿ ಪರಿಸರ ವ್ಯವಸ್ಥೆ ಯನ್ನು ಬಲಪಡಿಸುತ್ತದೆ. ಈ ಪ್ರದೇಶದಲ್ಲಿ ತಂತ್ರಜ್ಞಾನ ಆಧಾರಿತ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಇನ್ಫೋಸಿಸ್ ನ ನಿರಂತರ ಪ್ರಯತ್ನಗಳನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ಅಭಿಪ್ರಾಯಪಟ್ಟರು.

ಇನ್ಫೋಸಿಸ್ ನ ಮುಖ್ಯ ಹಣಕಾಸು ಅಧಿಕಾರಿ ಜಯೇಶ್ ಸಂಘ್ರಜ್ಕಾ ಮಾತನಾಡಿ, ``ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ತಲುಪಿಸಲು ನಮ್ಮ AI-ಮೊದಲ ಕಾರ್ಯತಂತ್ರವನ್ನು ಮುನ್ನಡೆಸುವಲ್ಲಿ ಪ್ರಮುಖ ಮೈಲಿಗಲ್ಲು ಸ್ಥಾಪಿಸುವ ಮೂಲಕ ಮೊಹಾಲಿಯಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಣೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ಸಮಗ್ರ ಅಭಿವೃದ್ಧಿಯು ಬಲವಾದ ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಳ್ಳಲು, ಕಾರ್ಯಾಚರಣೆಯ ಚುರುಕುತನವನ್ನು ಹೆಚ್ಚಿಸಲು ಮತ್ತು ನಮ್ಮ ಉದ್ಯೋಗಿಗಳಿಗೆ ಹೊಂದಿಕೊಳ್ಳುವ ಹೈಬ್ರಿಡ್ ಕೆಲಸದ ವಾತಾವರಣವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಈ ವಿಸ್ತರಣೆಯು ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮತ್ತು ಪ್ರದೇಶದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಪಂಜಾಬ್ ನ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ’’ ಎಂದರು.