ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and kashmir) ಭಾರತದ ಒಂದು ಪ್ರಮುಖ ಭಾಗವಾಗಿದೆ. ಇದು ಒಂದು ಸುಂದರ ಪ್ರದೇಶವಾಗಿದ್ದು, ಇಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅಮೆರಿಕದ ಪ್ರವಾಸಿಗರು ಇಲ್ಲಿಗೆ ಪ್ರವಾಸ ಬರಬಹುದು ಎಂದು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ (US Ambassador Sergio Gor) ಹೇಳಿದರು. ಎರಡು ದಿನಗಳ ಕಾಶ್ಮೀರ (Kashmir) ಪ್ರವಾಸದಲ್ಲಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ( Chief Minister Omar Abdullah) ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಶ್ಲಾಘಿಸಿದರು.
ಜಮ್ಮು ಮತ್ತು ಕಾಶ್ಮೀರದ ಲಡಾಖ್‌ಗೆ ಎರಡು ದಿನಗಳ ಪ್ರವಾಸ ಯೋಜನೆಯಲ್ಲಿರುವ ಗೋರ್ ಅವರು ಶ್ರೀನಗರದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬುಧವಾರ ಭೇಟಿಯಾದರು. ಬಳಿಕ ಅವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರಾಡಳಿತ ಪ್ರದೇಶ ಭಾರತದ ಒಂದು ಪ್ರಮುಖ ಭಾಗ ಎಂದು ಹೇಳಿದರು.
ಕಾವೇರಿ ವಿವಾದದ ನಡುವೆ ತಮಿಳುನಾಡಿನಲ್ಲಿ ಇಂದು ಸಿಎಂ ಡಿಕೆ ಶಿವಕುಮಾರ್- ವಿಜಯ್ ಭೇಟಿ
ನಾನು ಮೊದಲ ಬಾರಿಗೆ ಇಲ್ಲಿಗೆ ಆಗಮಿಸುತ್ತಿದ್ದೇನೆ. ಇದು ನನ್ನ ಊಹೆಗೂ ಮೀರಿ ಸುಂದರವಾಗಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಅಮೆರಿಕದೊಂದಿಗೆ ಕಾಶ್ಮೀರದ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸೆರ್ಗಿಯೊ ಗೋರ್ ಅವರು ಆಪರೇಷನ್ ಸಿಂದೂರ್ ಬಳಿಕ ದಕ್ಷಿಣ ಮತ್ತು ಮಧ್ಯ ಏಷ್ಯಾದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಉನ್ನತ ರಾಜತಾಂತ್ರಿಕರು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇವರ ಈ ಭೇಟಿಯು ಅಮೆರಿಕದ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮಾತನಾಡಿ, ಸೆರ್ಗಿಯೊ ಗೋರ್ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯಿಂದಾಗಿ ಅಮೆರಿಕ-ಭಾರತ ಸಂಬಂಧಗಳಲ್ಲಿ ಇನ್ನಷ್ಟು ಬೆಳವಣಿಗೆ ತರುವ ಕುರಿತು ಚರ್ಚಿಸಲು ಅವಕಾಶ ಸಿಕ್ಕಿತು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಅಮೆರಿಕ ಏನು ಮಾಡಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಇಲ್ಲಿ ಕೆಲವು ಪರಂಪರೆಯ ಸಮಸ್ಯೆಗಳಿವೆ ಎಂಬುದು ಸ್ಪಷ್ಟವಾಗಿದೆ. ಆದರೆ ನಮ್ಮ ಮಾತುಕತೆಯು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಬಯಸುವುದಾಗಿ ಹೇಳಿದರು.
ವಾಷಿಂಗ್ಟನ್, ನವದೆಹಲಿ ಮತ್ತು ಶ್ರೀನಗರ ನಡುವೆ ಮಾತುಕತೆ ಮುಂದುವರಿಯುತ್ತದೆ ಎಂದ ಅವರು, ವಾಷಿಂಗ್ಟನ್ ಇಲ್ಲಿನ ಬೆಳವಣಿಗೆ ಮೇಲೆ ಎಚ್ಚರಿಕೆ ಇರಿಸಿದೆ. ಇಲ್ಲಿಗೆ ತನ್ನ ಯಾತ್ರಿಕರನ್ನು ಕಳುಹಿಸಲು ಎದುರು ನೋಡುತ್ತಿದೆ. ಈ ಬಗ್ಗೆ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದರು.
ಇಲ್ಲಿಗೆ ಅಮೆರಿಕ ಯಾವುದೇ ದೊಡ್ಡ ಘೋಷಣೆ ಮಾಡಲು ಸಾಧ್ಯವಿಲ್ಲವಾದರೂ ಆಡಳಿತವು ಅದನ್ನು ಪರಿಶೀಲಿಸಬಹುದು ಎಂದ ಗೋರ್, ಈ ಪ್ರದೇಶವನ್ನು ಸುರಕ್ಷಿತವಾಗಿಡಲು ಮತ್ತು ಅದನ್ನು ಹೆಚ್ಚು ಸುರಕ್ಷಿತವಾಗಿಸಲು ಕೆಲವು ಅದ್ಭುತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದ್ದರಿಂದ ಯುನೈಟೆಡ್ ಸ್ಟೇಟ್ಸ್ ಹೊರಡಿಸಿರುವ ಪ್ರಯಾಣ ಎಚ್ಚರಿಕೆಯನ್ನು ಮರು ಪರಿಶೀಲಿಸಲು ಕಾಯುತ್ತಿರುವುದಾಗಿ ತಿಳಿಸಿದರು.
ಇದು ಸುಂದರವಾದ ಪ್ರದೇಶ. ಬಹಳಷ್ಟು ಅಮೆರಿಕನ್ನರು ಇಲ್ಲಿಗೆ ಬಂದು ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಬಯಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ವಿಶೇಷವಾಗಿ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವುದರಿಂದ ಅಮೆರಿಕ ಈ ನಿಟ್ಟಿನಲ್ಲಿ ತನ್ನ ನಿಯಮ ಸಡಿಲಿಸಬಹುದು. ಇದರಿಂದ ಇದು ವಿದೇಶಿ ಸಂದರ್ಶಕರಿಗೆ ಸುರಕ್ಷಿತ ತಾಣವಾಗಿ ಬಿಂಬಿಸುವ ಪ್ರಯತ್ನಗಳಿಗೆ ಉತ್ತೇಜನ ದೊರೆಯುವುದು ಎಂದರು.
‘ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗʼ ಎಂದ ಅಮೆರಿಕದ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್!
ಜಮ್ಮು ಮತ್ತು ಕಾಶ್ಮೀರದ ಲಡಾಖ್‌ಗೆ ಭೇಟಿ ನೀಡಿದ ಬಳಿಕ ಗೋರ್ ಅವರು ಶುಕ್ರವಾರ ಲೇಹ್‌ನಲ್ಲಿ ಬೌದ್ಧ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಲಿದ್ದಾರೆ.