ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಕೈಜೋಡಿಸಿದ ಜೋರ್ಡಾನ್

ಪ್ರಧಾನಿ ನರೇಂದ್ರ ಮೋದಿ ಅವರು ಅಮ್ಮನ್‌ನಲ್ಲಿ ದೊರೆ ಅಬ್ದುಲ್ಲಾ II ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು. ಎರಡು ರಾಷ್ಟ್ರಗಳು ರಕ್ಷಣಾ, ವ್ಯಾಪಾರ, ಇಂಧನ ಮತ್ತು ಡಿಜಿಟಲ್ ವಲಯಗಳಲ್ಲಿ ಪರಸ್ಪರ ಸಹಕಾರ ನೀಡಲು ಒಪ್ಪಿಕೊಂಡಿವೆ.

ವ್ಯಾಪಾರ, ಇಂಧನ ಸೇರಿದಂತೆ ಭಾರತ- ಜೋರ್ಡಾನ್ ನಡುವೆ ಐದು ಒಪ್ಪಂದ

(ಸಂಗ್ರಹ ಚಿತ್ರ) -

ಅಮ್ಮನ್‌: ಭಯೋತ್ಪಾದನೆ (Terrorism) ನಿಗ್ರಹ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ (agreement) ಭಾರತ ಮತ್ತು ಜೋರ್ಡಾನ್ (India-Jordan agreemen) ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ದೊರೆ ಅಬ್ದುಲ್ಲಾ II (King Abdullah II) ಅವರನ್ನು ಸೋಮವಾರ ಅಮ್ಮನ್‌ನಲ್ಲಿ (Amman) ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರಿಬ್ಬರು ಎರಡು ರಾಷ್ಟ್ರಗಳ ನಡುವಿನ ರಕ್ಷಣಾ, ವ್ಯಾಪಾರ, ಇಂಧನ ಮತ್ತು ಡಿಜಿಟಲ್ ವಲಯಗಳಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಂದಕ್ಕೆ ಸಹಿ ಹಾಕಿ ಅಂತಿಮಗೊಳಿಸಿದರು. 37 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಜೋರ್ಡಾನ್ ಗೆ ಭೇಟಿ ನೀಡಿದ್ದಾರೆ.

ಅಮ್ಮನ್‌ನಲ್ಲಿ ಸೋಮವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ ಅಬ್ದುಲ್ಲಾ II ಅವರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಐದು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದರು. ಈ ವೇಳೆ ಭಯೋತ್ಪಾದನೆ ನಿಗ್ರಹ, ಗಾಜಾ ಸೇರಿದಂತೆ ಪ್ರಾದೇಶಿಕ ಅಭಿವೃದ್ಧಿ ಮತ್ತು ದ್ವಿಪಕ್ಷೀಯ ಸಹಕಾರಕ್ಕೆ ಭಾರತ ಮತ್ತು ಜೋರ್ಡಾನ್ ಒಪ್ಪಿಕೊಂಡಿತು.

ತೈಲ ಹಗರಣ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಬಂಧನ

ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಭಯೋತ್ಪಾದನೆ ನಿಗ್ರಹ, ರಸಗೊಬ್ಬರ, ಕೃಷಿ, ನವೀಕರಿಸಬಹುದಾದ ಇಂಧನ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಎರಡು ರಾಷ್ಟ್ರಗಳ ನಡುವೆ ಮಾತುಕತೆ ನಡೆಯಿತು.

ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ರಾಜ ಅಬ್ದುಲ್ಲಾ II ಅವರ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ,ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ಬೆಂಬಲವಾಗಿರುವುದಾಗಿ ಭರವಸೆ ನೀಡಿದರು.

ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ತಮ್ಮ ಪ್ರವಾಸದ ಮೊದಲ ಹಂತದಲ್ಲಿ ಜೋರ್ಡಾನ್‌ಗೆ ಭೇಟಿ ನೀಡಿದರು. ಭಾರತೀಯ ಪ್ರಧಾನಿಯೊಬ್ಬರು 37 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೋರ್ಡಾನ್‌ಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವವನ್ನು ಸಂಭ್ರಮಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರನ್ನು ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ಅವರು ಅಮ್ಮನ್‌ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಬಳಿಕ ಮೋದಿ ಅವರು ಹುಸೇನಿಯಾ ಅರಮನೆಯಲ್ಲಿ ರಾಜ ಅಬ್ದುಲ್ಲಾ II ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅನಂತರ ನಿಯೋಗ ಮಟ್ಟದ ಮಾತುಕತೆ ನಡೆಸಿ, ಎರಡು ದೇಶಗಳ ನಡುವಿನ ಸಂಬಂಧಗಳು, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.



ಭಯೋತ್ಪಾದನೆಯ ಎಲ್ಲಾ ರೂಪ ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸಿದ ರಾಜ ಅಬ್ದುಲ್ಲಾ II ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

ಎರಡು ರಾಷ್ಟ್ರಗಳ ನಡುವೆ ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರ, ಪೆಟ್ರಾ ಮತ್ತು ಎಲ್ಲೋರಾ ನಡುವಿನ ಅವಳಿ ಒಪ್ಪಂದ, 2025-2029 ವರ್ಷಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ನವೀಕರಣ, ಡಿಜಿಟಲ್ ಪರಿಹಾರ ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರ ಸೇರಿದೆ.

Bigg Boss Kannada 12: ಸೀಕ್ರೆಟ್ ರೂಮ್ ಬಗ್ಗೆ ರಘುಗೆ ಸಿಕ್ತಾ ಸುಳಿವು? ಗಿಲ್ಲಿ ಬಳಿ ಹೇಳಿದ್ದೇನು?

ಪ್ರಸ್ತುತ ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 2.8 ಬಿಲಿಯನ್‌ ಡಾಲರ್ ನಿಂದ 5 ಬಿಲಿಯನ್‌ ಡಾಲರ್ ಗೆ ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿರುವುದಾಗಿ ಪ್ರಧಾನಿ ಮೋದಿ ಅವರು ರಾಜ ಅಬ್ದುಲ್ಲಾ II ಅವರಿಗೆ ತಿಳಿಸಿದ್ದಾರೆ.

ಜೋರ್ಡಾನ್‌ನ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ನಡುವಿನ ಸಹಯೋಗಕ್ಕೂ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದಾರೆ.