Khalistani Terrorist: 1995ರಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಖಾಲಿಸ್ತಾನಿ ಉಗ್ರ ಅರೆಸ್ಟ್
Khalistani Terrorist: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಗುಂಪಿನ ಸದಸ್ಯನನ್ನು ಪಂಜಾಬ್‌ನ ಅಮೃತಸರದ ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ.


ಅಮೃತಸರ: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ (Khalistani) ಗುಂಪಿನ ಸದಸ್ಯನನ್ನು ಪಂಜಾಬ್‌ನ (Punjab) ಅಮೃತಸರದ (Amritsar) ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ. ಮಂಗತ್ ಸಿಂಗ್‌ನ ವಿರುದ್ಧ ಕೊಲೆ ಯತ್ನ, ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (TADA) ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಆರೋಪಗಳಿವೆ. 1993ರಲ್ಲಿ ಈ ಕೇಸಿನಲ್ಲಿ ಎಫ್‌ಐಆರ್ ದಾಖಲಾಗಿತ್ತು.1993ರಲ್ಲಿ ಬಂಧನಕ್ಕೊಳಗಾದ ಆತ, 1995ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆನಂತರ ಆತ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Pahalgam terror attack: ಪಹಲ್ಗಾಮ್ ಉಗ್ರರ ದಾಳಿ- ರಾತ್ರೋರಾತ್ರಿ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗೆ ಸಮನ್ಸ್; ಒಂದು ವಾರಗಳ ಗಡುವು
ದರೋಡೆ ಮತ್ತು ದಬ್ಬಾಳಿಕೆಯ ಪ್ರತ್ಯೇಕ ಪ್ರಕರಣದಲ್ಲೂ ಆತ ಬೇಕಾಗಿದ್ದ. ಮಂಗತ್ ಸಿಂಗ್‌ನ ಸಹೋದರ ಸಂಗತ್ ಸಿಂಗ್ ನಿಷೇಧಿತ ಖಲಿಸ್ತಾನ್ ಕಮಾಂಡೋ ಫೋರ್ಸ್‌ನ ಮುಖ್ಯಸ್ಥನಾಗಿದ್ದ. 1990ರಲ್ಲಿ ಪಂಜಾಬ್ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಅವನು ಹತನಾಗಿದ್ದ.
ಎರಡು ದಿನಗಳ ಹಿಂದೆಯಷ್ಟೇ ಜೈಲಿನಲ್ಲಿರುವ ‘ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್‌ನ ( Amritpal Singh) ಏಳು ಸಹಚರರನ್ನು ಶುಕ್ರವಾರ ಅಮೃತಸರದ ಅಜ್ನಾಲಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಮಾರ್ಚ್ 25 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಏಳು ಜನರನ್ನು ಈ ಹಿಂದೆ ಅಸ್ಸಾಂನ ದಿಬ್ರುಗಢ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಪಂಜಾಬ್ ಪೊಲೀಸರು ಬೇರೊಂದು ಪ್ರಕರಣದಲ್ಲಿ ಇವರನ್ನು ಬಂಧಿಸಿದ್ದರು. ಬಂಧಿತ ಏಳು ಜನರನ್ನು ಬಿಗಿ ಭದ್ರತೆಯಲ್ಲಿ ಅಜ್ನಾಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023 ರಲ್ಲಿ ಅಮೃತಸರದ ಹೊರವಲಯದಲ್ಲಿರುವ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ. ದಿಬ್ರುಗಢ ಸೆಂಟ್ರಲ್ ಜೈಲಿನಿಂದ ಕಾನೂನುಬದ್ಧ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಂಧಿತರನ್ನು ಅಜ್ನಾ ನ್ಯಾಯಾಲಯಕ್ಕೆ ಕರೆತರಲಾಗಿದೆ.