ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೋಟಾರ್ ಇನ್ಶೂರೆನ್ಸ್ ಅನುಭವ ಹೆಚ್ಚಿಸಲು ಮೌಲ್ಯ-ಆಧಾರಿತ ಆಡ್-ಆನ್ ಕವರ್ ಆದ 'ಲಿಬರ್ಟಿ ಅಶ್ಯೂರ್' ಅನ್ನು ಪ್ರಾರಂಭಿಸಿದ ಲಿಬರ್ಟಿ ಜನರಲ್ ಇನ್ಶೂರೆನ್ಸ್

ಲಿಬರ್ಟಿ ಅಧಿಕೃತ ರಿಪೇರಿ ಅಂಗಡಿಗಳಲ್ಲಿ ವಾಹನ ದುರಸ್ತಿ ಮಾಡಿದಾಗ, ಆದ್ಯತೆಯ ದುರಸ್ತಿ ಮತ್ತು ಡೆಲಿವರಿ, ಕಾರ್ಯಕೌಶಲದ ಬಗ್ಗೆ ಆರು ತಿಂಗಳ ಭರವಸೆ, ಉಚಿತ ಎಂಜಿನ್ ಟ್ಯೂನ್-ಅಪ್, ಉಚಿತ ಹವಾನಿಯಂತ್ರಣ ಪರಿಶೀಲನೆ, ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಮತ್ತು 15,000 ರೂ.ಗಿಂತ ಹೆಚ್ಚಿನ ಕ್ಲೈಮ್‌ಗಳಿಗೆ ವ್ಹೀಲ್ ಅಲೈನ್‌ಮೆಂಟ್ ಮತ್ತು ಬ್ಯಾಲೆನ್ಸ್ ಸೇರಿದಂತೆ ಹಲವಾರು ಮೌಲ್ಯ ವರ್ಧಿತ ಪ್ರಯೋಜನಗಳನ್ನು ಲಿಬರ್ಟಿ ಅಶ್ಯೂರ್ ಒದಗಿಸುತ್ತದೆ.

ಮುಂಬೈ: ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಇತ್ತೀಚೆಗೆ ಲಿಬರ್ಟಿ ಅಶ್ಯೂರ್ ಅನ್ನು ಬಿಡುಗಡೆ ಮಾಡಿದ್ದು, ಇದು ಖಚಿತವಾದ ನೆರವು ಮತ್ತು ತ್ವರಿತ, ಹೆಚ್ಚು ವಿಶ್ವಾಸಾರ್ಹ ಸೇವೆಯ ಮೂಲಕ ಖಾಸಗಿ ಕಾರು ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಹೊಸ ಆಡ್-ಆನ್ ಕವರ್ ಆಗಿದೆ. ಕ್ಲೈಮ್‌ಗಳು ಮತ್ತು ಬ್ರೇಕ್‌ಡೌನ್ ಸಂದರ್ಭಗಳಲ್ಲಿ ಗ್ರಾಹಕರು ಎದುರಿ ಸುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅನುಕೂಲತೆ, ಕುಂಠಿತ ಡೌನ್‌ಟೈಮ್ ಮತ್ತು ವರ್ಧಿತ ರಿಪೇರಿ ಬೆಂಬಲದ ಮೇಲೆ ಕೇಂದ್ರೀಕರಿಸುವ ಮೂಲಕ ಆಡ್-ಆನ್ ಲಿಬರ್ಟಿಯ ಮೋಟಾರ್ ಇನ್ಶೂರೆನ್ಸ್ ಪ್ರತಿಪಾದನೆಯನ್ನು ಎತ್ತಿ ಹಿಡಿಯುತ್ತದೆ.

ಲಿಬರ್ಟಿ ಅಧಿಕೃತ ರಿಪೇರಿ ಅಂಗಡಿಗಳಲ್ಲಿ ವಾಹನ ದುರಸ್ತಿ ಮಾಡಿದಾಗ, ಆದ್ಯತೆಯ ದುರಸ್ತಿ ಮತ್ತು ಡೆಲಿವರಿ, ಕಾರ್ಯಕೌಶಲದ ಬಗ್ಗೆ ಆರು ತಿಂಗಳ ಭರವಸೆ, ಉಚಿತ ಎಂಜಿನ್ ಟ್ಯೂನ್-ಅಪ್, ಉಚಿತ ಹವಾನಿಯಂತ್ರಣ ಪರಿಶೀಲನೆ, ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಮತ್ತು 15,000 ರೂ.ಗಿಂತ ಹೆಚ್ಚಿನ ಕ್ಲೈಮ್‌ಗಳಿಗೆ ವ್ಹೀಲ್ ಅಲೈನ್‌ಮೆಂಟ್ ಮತ್ತು ಬ್ಯಾಲೆನ್ಸ್ ಸೇರಿದಂತೆ ಹಲವಾರು ಮೌಲ್ಯ ವರ್ಧಿತ ಪ್ರಯೋಜನಗಳನ್ನು ಲಿಬರ್ಟಿ ಅಶ್ಯೂರ್ ಒದಗಿಸುತ್ತದೆ. ಇದರೊಂದಿಗೆ, ಆಡ್-ಆನ್ ಕಡ್ಡಾಯ ಕಡಿತಗೊಳಿಸುವಿಕೆಯ ಮನ್ನಾವನ್ನು ಒದಗಿಸುವುದರಿಂದ ಕ್ಲೈಮ್ ಸಮಯದಲ್ಲಿ ಗ್ರಾಹಕರಿಗೆ ಉಂಟಾಗಬಹುದಾದ ದುಬಾರಿ ವೆಚ್ಚಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಈ ಆಡ್-ಆನ್‌ನಲ್ಲಿ ಆನ್‌ಸೈಟ್ ರಿಪೇರಿ, ಫ್ಲಾಟ್ ಟೈರ್ ಸಪೋರ್ಟ್ ಮತ್ತು ಪ್ರಮುಖ ಬ್ರೇಕ್‌ಡೌನ್ ಸಂದರ್ಭದಲ್ಲಿ ವಾಹನ ಸ್ಥಳಾಂತರದಂತಹ ಸಂಯೋಜಿತ ವಾಹನ ಸಹಾಯ ಸೇವೆಗಳು ಸಹ ಸೇರಿವೆ. ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ, ಲಿಬರ್ಟಿ ಅಶ್ಯೂರ್ ಚಾರ್ಜ್ ಖಾಲಿಯಾದ ಸಂದರ್ಭ ದಲ್ಲಿ ವಾಹನವನ್ನು ಸಮೀಪದ ಅಧಿಕೃತ ಚಾರ್ಜಿಂಗ್ ಸ್ಟೇಷನ್ ಅಥವಾ ರಿಪೇರಿ ಸೌಲಭ್ಯಕ್ಕೆ ಸ್ಥಳಾಂತರಿಸಲು ಬೆಂಬಲವನ್ನು ಒದಗಿಸುವ ಮೂಲಕ ಇದು ಸಾಂಪ್ರದಾಯಿಕ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ನಿರಂತರ ಸಹಾಯವನ್ನು ಖಚಿತಪಡಿಸುತ್ತದೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಲಿಮಿಟೆಡ್‌ನ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕ ಪರಾಗ್ ವೇದ್, "ಗ್ರಾಹಕರಿಗೆ ಹೆಚ್ಚು ಅಗತ್ಯವಿರುವಾಗ ಮೋಟಾರ್ ಇನ್ಶೂರೆನ್ಸ್ ಇಂದಿನ ದಿನಗಳಲ್ಲಿ ರಕ್ಷಣೆಯೊಂದೇ ಅಲ್ಲದೇ ನೈಜ ಆನ್-ಗ್ರೌಂಡ್ ಬೆಂಬಲವನ್ನು ನೀಡುವುದನ್ನು ಪರಿಗಣಿಸಬೇಕು. ನಮ್ಮ ಇತ್ತೀಚಿನ ಉತ್ಪನ್ನ ಕೊಡುಗೆಯಾದ ಲಿಬರ್ಟಿ ಅಶ್ಯೂರ್ ಈ ಬದಲಾವಣೆಯನ್ನು ಪ್ರತಿಫಲಿಸುತ್ತದೆ.

ಇದು ಆದ್ಯತೆಯ ಸೇವೆ, ಗುಣಮಟ್ಟದ ಭರವಸೆ ಮತ್ತು ಮಾಲೀಕತ್ವದ ಪ್ರಯಾಣವನ್ನು ಸರಳ ಗೊಳಿಸುವ ಮತ್ತು ಗ್ರಾಹಕರ ವಿಶ್ವಾಸವನ್ನು ಬಲಪಡಿಸುವ ಅರ್ಥಪೂರ್ಣ ಮೌಲ್ಯ ಸೇರ್ಪಡೆ ಗಳನ್ನು ಒಟ್ಟುಗೂಡಿಸುತ್ತದೆ. ಡೌನ್‌ಟೈಮ್ ಅನ್ನು ಕುಂಠಿತಗೊಳಿಸುವ ಮೂಲಕ, ರಿಪೇರಿ-ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ಥಿರವಾದ ಸೇವಾ ಮಾನದಂಡ ಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಲಿಬರ್ಟಿ ಅಶ್ಯೂರ್ ಸಹಾಯ ಮಾಡುತ್ತದೆ. ಗ್ರಾಹಕರು ಹೆಚ್ಚಿನ ಮನಶ್ಯಾಂತಿಯಿಂದ ವೇಗವಾಗಿ ರಸ್ತೆಗೆ ಮರಳಲು ನೆರವಾಗುತ್ತದೆ” ಎಂದು ಹೇಳಿದರು.

ಲಿಬರ್ಟಿ ಅಶ್ಯೂರ್, ಲಿಬರ್ಟಿ ಜನರಲ್ ಇನ್ಶೂರೆನ್ಸ್‌ನ ಖಾಸಗಿ ಕಾರು ಪ್ಯಾಕೇಜ್ ಪಾಲಿಸಿ, ಬಂಡಲ್ಡ್ ಕವರ್, ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಪಾಲಿಸಿ ಮತ್ತು ದೀರ್ಘಕಾಲಿಕ ಖಾಸಗಿ ಕಾರು ಪಾಲಿಸಿಗಳೊಂದಿಗೆ ಅನ್ವಯವಾಗುವ ಕರಾರುಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಈ ಬಿಡುಗಡೆಯೊಂದಿಗೆ, ಲಿಬರ್ಟಿ ಜನರಲ್ ಇನ್ಶೂರೆನ್ಸ್ ತನ್ನ ಗ್ರಾಹಕರಿಗೆ ಆದ್ಯತೆಯನ್ನು ನೀಡುವ ಸಂಪ್ರದಾಯವನ್ನು ಮುಂದುವರಿಸುವುದರೊಂದಿಗೆ ಮೋಟಾರು ವಿಮೆಯಲ್ಲಿ ನಂಬಿಕೆ, ವಿಶ್ವಾ ಸಾರ್ಹತೆ ಮತ್ತು ಸೇವಾ ಶ್ರೇಷ್ಠತೆಯನ್ನು ಸಧೃಡಗೊಳಿಸುವ ಮೂಲಕ ದೈನಂದಿನ ಸಂಚಾರವನ್ನು ಹೆಚ್ಚಿಸುವ ಪ್ರಾಯೋಗಿಕ ನಾವೀನ್ಯತೆಗಳನ್ನು ಒದಗಿಸುತ್ತದೆ.

*

 ಲಿಬರ್ಟಿ ಅಧಿಕೃತ ದುರಸ್ತಿ ಅಂಗಡಿಗಳ ಮೂಲಕ ಆದ್ಯತೆಯ ದುರಸ್ತಿ ಬೆಂಬಲ

 ಅರ್ಹ ಕ್ಲೈಮ್‌ಗಳ ಮೇಲೆ ಕಡ್ಡಾಯ ಕಡಿತಗೊಳಿಸುವಿಕೆಯ ಮನ್ನಾ

 ಇವಿ ಬೆಂಬಲ ಸೇರಿದಂತೆ ಅಂತರ್ನಿರ್ಮಿತ ವಾಹನ ಮತ್ತು ರಸ್ತೆಬದಿಯ ಸಹಾಯ

 ಡೌನ್‌ಟೈಮ್ ಮತ್ತು ಅನಾನುಕೂಲತೆಯನ್ನು ಕುಂಠಿತಗೊಳಿಸಲು ಮೌಲ್ಯವರ್ಧಿತ ಸೇವೆಗಳು