ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜೀನಾಮೆ ನೀಡಿದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ನಾಯಕನ ಯೂಟರ್ನ್‌; ಅಷ್ಟಕ್ಕೂ ಆಗಿದ್ದೇನು?

Congress Assam’s President’s Resignation: ಅಸ್ಸಾಂ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೂಪೇನ್ ಬೋರಾ ಅವರ ರಾಜೀನಾಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವಾಗ ತೆಗೆದುಕೊಂಡಿರುವ ಈ ನಿರ್ಧಾರವು ಪಕ್ಷದೊಳಗಿನ ಅಸಮಾಧಾನವನ್ನು ಹೊರ ತಂದಿದೆ.

ಅಸ್ಸಾಂ ಕಾಂಗ್ರೆಸ್ ನಾಯಕ ಭೂಪೇನ್ ಬೋರಾ (ಸಂಗ್ರಹ ಚಿತ್ರ)

ಗುವಾಹಟಿ, ಫೆ.16: ಅಸ್ಸಾಂ ಕಾಂಗ್ರೆಸ್ ಘಟಕ ಸೋಮವಾರ (ಫೆಬ್ರವರಿ 16) ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಬೆಳಗ್ಗೆ ಮಾಜಿ ಅಧ್ಯಕ್ಷ ಭೂಪೇನ್ ಬೋರಾ (Bhupen Borah) ಪಕ್ಷ ತೊರೆಯುವುದಾಗಿ ತಿಳಿಸಿ ಕೆಲವೇ ಗಂಟೆಯಲ್ಲಿ ಯೂಟರ್ನ್‌ ಹೊಡೆದರು. ಇದು ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬೆಳಕ್ಕೆ ಪಕ್ಷ ತೊರೆಯುವುದಾಗಿ ಘೋಷಿಸಿದ ಭೂಪೇನ್ ಬೋರಾ 32 ವರ್ಷಗಳ ದೀರ್ಘ ರಾಜಕೀಯಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದರು. ʼʼನನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದೇನೆʼʼ ಎಂದು ಪ್ರಕಟಿಸಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವ ವೇಳೆ ಅವರ ಈ ನಡೆ ಸಂಕಷ್ಟದಲ್ಲಿರುವ ಕಾಂಗ್ರೆಸ್‌ಗೆ ಆಘಾತ ಮೂಡಿಸಿತ್ತು.

ಈ ವಿಚಾರದಲ್ಲಿ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಿದರು. ಪಕ್ಷದ ನಾಯಕ ಗೌರವ್ ಗೊಗೊಯಿ ಅವರೊಂದಿಗೆ ನಡೆದ ಸಭೆಯ ಬಳಿಕ ಸಂಧಾನ ಯಶಸ್ವಿಯಾಗಿ ಬೋರಾ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

ʼʼಅಸ್ಸಾಂನ ಕಾಂಗ್ರೆಸ್ ಘಟಕದಲ್ಲಿ ನಡೆಯುತ್ತಿರುವ ಅನೇಕ ವಿಚಾರಗಳು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದಿರಲಿಲ್ಲ. ಇದಕ್ಕಾಗಿ ನಾನು ಅವರಿಗೆ ಪತ್ರ ಬರೆಯಬೇಕಾಯಿತು. ಇಂದು ನನ್ನ ಪಕ್ಷದ ನಾಯಕರು ನನ್ನನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಈ ವಿಷಯವನ್ನು ಚರ್ಚಿಸಿದ್ದೇನೆ. ಮತ್ತೊಮ್ಮೆ ಆಲೋಚಿಸಲು ಒಂದು ದಿನ ಕಾಲಾವಕಾಶ ಕೇಳಿದ್ದೇನೆ. ನಾಳೆ ಜಿತೇಂದ್ರ ಸಿಂಗ್ ಅವರನ್ನು ಮತ್ತೆ ಭೇಟಿ ಮಾಡಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆʼʼ ಎಂದು ಬೋರಾ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ತುಂಬಿದ 1000 ದಿನ, ನಾಳೆ ಹಾವೇರಿಯಲ್ಲಿ ಸಾಧನಾ ಸಮಾವೇಶ

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಜಿತೇಂದ್ರ ಸಿಂಗ್, ಈ ಬೆಳವಣಿಗೆ ಭಿನ್ನಾಭಿಪ್ರಾಯದ ಕಾರಣದಿಂದ ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ. ʼʼಭೂಪೇನ್ ಬೋರಾ ನಮ್ಮ ಹಿರಿಯ ನಾಯಕರು. ಕೆಲವೊಮ್ಮೆ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳಿರುವುದು ಸಾಮಾನ್ಯ. ಆದರೆ ನಮ್ಮದು ಪ್ರಜಾಪ್ರಭುತ್ವ ಪಕ್ಷ. ಇದು ಇತರ ಪಕ್ಷಗಳಂತೆ ಅಲ್ಲ. ಅಲ್ಲಿ ಜನರು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕುʼʼ ಎಂದು ಅವರು ಲೇವಡಿ ಮಾಡುತ್ತಾ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ರಾಜೀನಾಮೆ ಘೋಷಿಸುವ ವೇಳೆ ಭೂಪೇನ್ ಬೋರಾ, ಸಂಘಟನಾ ವಿಚಾರಗಳಲ್ಲಿ ಪಕ್ಷವು ಸಮಯೋಚಿತ ಹಾಗೂ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ರ‍್ಯಾಲಿಗೆ ಯಾರು ಹಾಜರಾಗಬೇಕು, ಯಾರು ಹಾಜರಾಗಬಾರದು ಎಂಬುದನ್ನೂ ನಿರ್ಧರಿಸಲು ಪಕ್ಷಕ್ಕೆ ಆಗುತ್ತಿಲ್ಲ ಎಂದು ಅವರು ಹೇಳಿದ್ದರು. ಜತೆಗೆ, ಪಕ್ಷದೊಳಗಿನ ಸಮನ್ವಯದ ಕೊರತೆಯೇ ಇದಕ್ಕೆ ಕಾರಣ ಎಂದು ದೂರಿದ್ದರು.

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್: ಕಾಂಗ್ರೆಸ್ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂದು ಜೋಶಿ ಕಿಡಿ

ಅವರು ಯಾವುದೇ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು ಮತ್ತು ನಾಯಕತ್ವದ ಬಗ್ಗೆ ಅವರು ದೂರಿದ್ದರು. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಮುಂದುವರಿಯುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದರು.

ಎರಡು ಬಾರಿ ಶಾಸಕರಾಗಿದ್ದ ಅವರ ರಾಜೀನಾಮೆಯನ್ನು ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತೀಕ್ಷ್ಣವಾಗಿ ಟೀಕಿಸಿದರು. ಅವರು ಕಾಂಗ್ರೆಸ್ ಅನ್ನು ವಂಶಪಾರಂಪರ್ಯ ರಾಜಕೀಯದ ಬಗ್ಗೆ ಟೀಕಿಸಿದರು. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕುಟುಂಬದಿಂದ ಯಾರೂ ಏಳಿಗೆ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಈ ರಾಜೀನಾಮೆ ಸಾಂಕೇತಿಕ ಸಂದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.