ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುವಾಹಟಿ ಹತ್ಯಾಕಾಂಡ ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ; ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಯತ್ನದ ವೇಳೆ ಶೂಟೌಟ್‌

Guwahati Encounter: ಅಸ್ಸಾಂನ ಗುವಾಹಟಿ ನಗರದ ಲಚಿತ್‌ ನಗರದ ಹೊಟೇಲ್‌ ಬಿಲಾಸ್‌ ಇನ್‌ನಲ್ಲಿ ಅಕ್ಟೋಬರ್‌ 26ರ ರಾತ್ರಿ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತ್ಯೆಗೈದ ದುಷ್ಕರ್ಮಿ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ದಿಸ್ಪುರ, ನ. 4: ಅಸ್ಸಾಂನ ಗುವಾಹಟಿ ನಗರದ ಲಚಿತ್‌ ನಗರದ ಹೊಟೇಲ್‌ ಬಿಲಾಸ್‌ ಇನ್‌ನಲ್ಲಿ ಅಕ್ಟೋಬರ್‌ 26ರ ರಾತ್ರಿ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತ್ಯೆಗೈದ ದುಷ್ಕರ್ಮಿ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಬುಧವಾರ (ನವೆಂಬರ್‌ 4) ಮುಂಜಾನೆ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯ್ತು ಎಂದು ಮೂಲಗಳು ತಿಳಿಸಿವೆ (Guwahati Encounter). ಹೊಟೇಲ್‌ ಗುತ್ತಿಗೆಗೆ ಸಂಬಂಧಿಸಿದ ವಿವಾದವೊಂದರ ಹಿನ್ನೆಲೆಯಲ್ಲಿ ಘನಕಾಂತ ಗೊಗೋಯಿ ಈ ಕೃತ್ಯ ಎಸಗಿದ್ದ. ಇದೀಗ ಆತನೇ ಹತನಾಗಿದ್ದಾನೆ.

ʼʼಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹಟಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಸಿಬ್‌ಸಾಗರ್‌ಗೆ ಕರೆದೊಯ್ಯುತ್ತಿದ್ದಾಗ ಮುಂಜಾನೆ 3:12ರ ಸುಮಾರಿಗೆ ಎನ್‌ಕೌಂಟರ್‌ ನಡೆದಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿಯಲ್ಲಿ ನಡೆದ ಎನ್‌ಕೌಂಟರ್:



"ಗೌರಿಸಾಗರವನ್ನು ತಲುಪಿದಾಗ ಘನಕಾಂತ ಗೊಗೋಯಿ ಶೌಚಕ್ಕೆ ತೆರಳಬೇಕೆಂದು ಮನವಿ ಮಾಡಿದ್ದ. ವಾಹನದಿಂದ ಇಳಿದ ನಂತರ ತನಿಖಾ ಅಧಿಕಾರಿಯ ಬಳಿಯಿದ್ದ ಸರ್ಕಾರಿ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದ. ಆಗ ಇಬ್ಬರ ನಡುವೆ ಜಗಳ ನಡೆಯಿತು" ಎಂದು ಸಿಬ್‌ಸಾಗರ್‌ನ ಹಿರಿಯ ಪೊಲೀಸ್ ಅಧೀಕ್ಷಕಿ ಪಾಪೋರಿ ಚೆಟಿಯಾ ತಿಳಿಸಿದ್ದಾರೆ.

ಗುವಾಹಟಿ ಖಾಸಗಿ ಹೊಟೇಲ್‌ನಲ್ಲಿ ರಕ್ತದೋಕುಳಿ; ಭೀಕರ ಗುಂಡಿನ ದಾಳಿಗೆ 6 ಮಂದಿ ಬಲಿ

"ಈ ಸಂದರ್ಭದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಹಿರಿಯ ಅಧಿಕಾರಿಯನ್ನು ರಕ್ಷಿಸಲು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿದರು. ಗಾಯಗೊಂಡ ಗೊಗೊಯ್‌ ಅನ್ನು ಕೂಡಲೇ ಸಿಬ್‌ಸಾಗರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಗಾಯಗೊಂಡ ಅಧಿಕಾರಿಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅವರು ವಿವರಿಸಿದ್ದಾರೆ.

ಅಕ್ಟೋಬರ್ 26ರಂದು ಗೊಗೊಯ್ 6 ಜನರ ಮೇಲೆ ಗುಂಡು ಹಾರಿಸಿದ್ದ. ಇದರಲ್ಲಿಆತ ಗುತ್ತಿಗೆ ಪಡೆದಿದ್ದ ಹೊಟೇಲ್‌ ಬಿಲಾಸ್ ಇನ್ ಮಾಲಕರೂ ಸೇರಿದ್ದಾರೆ. ಹೊಟೇಲ್‌ನ ಗುತ್ತಿಗೆಗೆ ಸಂಬಂಧಿಸಿದ ವಿವಾದವು ಈ ಗುಂಡಿನ ದಾಳಿಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಘನಕಾಂತ ಗೊಗೋಯಿಯನ್ನು ಘಟನೆ ನಡೆದ ಅಕ್ಟೋಬರ್‌ 26ರಂದೇ ಬಂಧಿಸಲಾಯಿತು. ಒಂದು ವಾರ ಪೊಲೀಸ್ ಕಸ್ಟಡಿಯಲ್ಲಿದ್ದ ನಂತರ ಮಂಗಳವಾರ (ಅಕ್ಟೋಬರ್‌ 3) ಗುವಾಹಟಿ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಶಿವಸಾಗರ ಜಿಲ್ಲೆಯ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಆತ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

"ಗುವಾಹಟಿಯಿಂದ ಸಿಬ್‌ಸಾಗರ್‌ಗೆ ಯಾವುದೇ ಅಡಚಣೆಯಿಲ್ಲದೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದೆವು. ಆದರೆ ಗೊಗೊಯ್‌ನಿಂದ ಪೊಲೀಸ್ ತಂಡಕ್ಕೆ ಅಪಾಯವಿತ್ತು. ನಮ್ಮ ಪ್ರಯತ್ನಗಳ ಹೊರತಾಗಿಯೂ ತಂಡದ ಸದಸ್ಯರನ್ನು ರಕ್ಷಿಸಿಕೊಳ್ಳಲು ನಮ್ಮ ಸಿಬ್ಬಂದಿ ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು" ಎಂದು ಪಾಪೋರಿ ಚೆಟಿಯಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಪಾಪಿಯ ಎನ್‌ಕೌಂಟರ್‌

ಸಿಬ್‌ಸಾಗರ್‌ನಲ್ಲಿ ನಡೆದ ವಂಚನೆ ಮತ್ತು ದಾಖಲೆಗಳ ಕೃತಕ ಸೃಷ್ಟಿ (ಫೋರ್ಜರಿ) ಪ್ರಕರಣವೊಂದರಲ್ಲಿ ಗೊಗೊಯ್ ಕೂಡ ಆರೋಪಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾದ ಬಳಿಕ, ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದರ ವಿಚಾರಣೆಗಾಗಿ ಸಿಬ್‌ಸಾಗರ್‌ಗೆ ಕರೆದೊಯ್ಯಲಾಗುತ್ತಿತ್ತು.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author