ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಪಾಪಿಯ ಎನ್‌ಕೌಂಟರ್‌; ಪೊಲೀಸರ ಬಂದೂಕು ಕಸಿದು ಗುಂಡು ಹಾರಿಸಲು ಯತ್ನಿಸಿದ ವೇಳೆ ಶೂಟೌಟ್‌

ಅತ್ಯಾಚಾರ ಮತ್ತು ಕೊಲೆ ಆರೋಪಿಯೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಗೈಘಾಟಾದಲ್ಲಿ ನಡೆದಿದೆ. 17 ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧ ನಡೆದ ಸ್ಥಳದಲ್ಲಿ ಘಟನೆಯನ್ನು ಮರುಸೃಷ್ಟಿಸುವ ವೇಳೆ ಆರೋಪಿಯು ಪೊಲೀಸರಿಂದ ಬಂದೂಕು ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದಾಗ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಅತ್ಯಾಚಾರ, ಕೊಲೆ ಆರೋಪಿಯ ಎನ್‌ಕೌಂಟರ್‌

ಸಂಗ್ರಹ ಚಿತ್ರ -

ಪಶ್ಚಿಮ ಬಂಗಾಳ: ಅತ್ಯಾಚಾರ ಮತ್ತು ಕೊಲೆ ಆರೋಪಿಯೊಬ್ಬ (physical abuse and murder case) ಪೊಲೀಸರಿಂದ ಬಂದೂಕು ಕಿತ್ತುಕೊಂಡು ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಅವನನ್ನು ಎನ್‌ಕೌಂಟರ್‌ (encounter) ಮಾಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಗೈಘಾಟಾದಲ್ಲಿ (crime news) ನಡೆದಿದೆ. ಕಳೆದ ಮೂರು ತಿಂಗಳಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಕಳೆದ ಜುಲೈ ತಿಂಗಳಲ್ಲಿ ಕೂಡ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ್ದರು.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಗೈಘಾಟಾದಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರಹ್ಲಾದ್ ದಾಸ್ (23) ಎಂಬಾತನನ್ನು ಪೊಲೀಸರು ಸೋಮವಾರ ರಾತ್ರಿ ಅಪರಾಧ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಘಟನೆಯನ್ನು ಮರುಸೃಷ್ಟಿಸುತ್ತಿದ್ದಾಗ ಆರೋಪಿ ಪೊಲೀಸ್ ಅಧಿಕಾರಿಯೊಬ್ಬರ ಸರ್ವಿಸ್ ರಿವಾಲ್ವರ್ ಅನ್ನು ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇಸ್ರೇಲ್‌ನಲ್ಲಿ ರಾಜಕೀಯ ಸಮರ: ನೆತನ್ಯಾಹು ವಿರುದ್ಧ ವಿರೋಧ ಪಕ್ಷಗಳ ಪೈಪೋಟಿ

ಪ್ರಹ್ಲಾದ್ ದಾಸ್ ತನ್ನನ್ನು ಕರೆತಂದಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಬಂದೂಕನ್ನು ಕಸಿದುಕೊಂಡು ಅವರತ್ತ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಆತನ ಮೇಲೆ ಮರು ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಆತ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪ್ರಹ್ಲಾದ್ ದಾಸ್ ನನ್ನು ಚಾಂದ್ಪಾರಾ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಘಟನೆಯಲ್ಲಿ ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ. ಆರೋಪಿಯು ಪೊಲೀಸ್ ಅಧಿಕಾರಿಯೊಬ್ಬರ ರಿವಾಲ್ವರ್ ಅನ್ನು ಹೇಗೆ ಕಸಿದುಕೊಳ್ಳಲು ಸಾಧ್ಯವಾಯಿತು ಮತ್ತು ಎನ್‌ಕೌಂಟರ್‌ಗೆ ಕಾರಣವಾದ ಘಟನೆಗಳ ಸರಣಿ ಏನು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಹ್ಲಾದ್ ದಾಸ್ ಸಾವಿನ ಸುದ್ದಿಯಿಂದ ಆತನ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಂಡರು.

ಗೈಘಾಟಾದಲ್ಲಿ ಕಳೆದ ಜುಲೈ ತಿಂಗಳಲ್ಲಿ ಇಂತಹ ಇನ್ನೊಂದು ಘಟನೆ ನಡೆದಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರವಾಸ್ ಮೊಂಡಲ್ ಕೂಡ ಇದೇ ರೀತಿಯ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದನು.

ಮೊಂಡಲ್ ತನ್ನನ್ನು ಕರೆದೊಯ್ಯುತ್ತಿದ್ದ ಅಧಿಕಾರಿಯೊಬ್ಬರ ರಿವಾಲ್ವರ್ ಅನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸುವಾಗ ಗುಂಡು ಹಾರಿಸಿದನು. ಆಗ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಅವನು ಸಾವನ್ನಪ್ಪಿದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.

ಪ್ರಹ್ಲಾದ್ ದಾಸ್ ಹತ್ಯೆ ಬಳಿಕ ಪ್ರತಿಕ್ರಿಯಿಸಿರುವ ಬಾಲಕಿಯ ತಾಯಿ, ಇದು ಒಳ್ಳೆಯ ವಿಷಯ ಎಂದು ಹೇಳಿದರೆ ಬಾಲಕಿಯ ತಂದೆ, ಪೊಲೀಸರು ಕಾನೂನು ರೀತಿಯಲ್ಲಿ ಈ ರೀತಿ ಮಾಡಿದ್ದರೆ ಅದು ಸರಿಯಾದ ಕೆಲಸ. ನನ್ನ ಮಗಳು ನನಗೆ ಮರಳಿ ಸಿಗುತ್ತಾಳೆಯೇ? ನಾನೇನು ಹೇಳಲಿ ಎಂದರು.

ಚೆನ್ನೈ ಜೈಲಿನ ಬಳಿಕ ಮತ್ತೊಂದು ತಮಿಳುನಾಡಿನ ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳು; 16 ಮಂದಿ ನಾಪತ್ತೆ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಪಂಚಾಯತ್ ಸಚಿವ ದಿಲೀಪ್ ಘೋಷ್, ಕಾನೂನನ್ನು ಉಲ್ಲಂಘಿಸುವವರು ಪರಿಣಾಮಗಳನ್ನು ಎದುರಿಸಲೇಬೇಕು. ಕಾನೂನು ಜಾರಿ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಮರುಸ್ಥಾಪಿಸಲು ಪೊಲೀಸರ ಈ ಕ್ರಮ ಅಗತ್ಯವಾಗಿತ್ತು ಎಂದು ಹೇಳಿದರು.