ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಮನ್ ಕಿ ಬಾತ್' ಒಂದು ಸುಂದರ ತೀರ್ಥಯಾತ್ರೆ: 139ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

Man Ki Baat: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಅನ್ನು ಒಂದು ಸುಂದರ ತೀರ್ಥಯಾತ್ರೆ ಎಂದು ಬಣ್ಣಿಸಿದ್ದಾರೆ. ಇದು ಸಾಮಾನ್ಯ ಜನರ ಕೊಡುಗೆಗಳನ್ನು ಸಂಭ್ರಮಿಸುತ್ತದೆ ಎಂದು ಹೇಳಿದರು. 'ಮನ್ ಕಿ ಬಾತ್'ನ 139ನೇ ಸಂಚಿಕೆಯಲ್ಲಿ ಮಾತನಾಡಿದ ಅವರು 12 ವರ್ಷಗಳ ವಿಜಯದಶಮಿಯಂದು ಇದನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮವೊಂದು ಸುಂದರವಾದ ತೀರ್ಥಯಾತ್ರೆ (pilgrimage). ಇದು ಸಾಮಾನ್ಯ ಭಾರತೀಯರ ಕೊಡುಗೆಗಳನ್ನು ಸಂಭ್ರಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 139ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಅವರು, 12 ವರ್ಷಗಳ ಹಿಂದೆ ವಿಜಯದಶಮಿಯಂದು ಪ್ರಾರಂಭವಾದ ಈ ಕಾರ್ಯಕ್ರಮವು ಸಾಮಾನ್ಯ ಭಾರತೀಯರ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಕೊಡುಗೆಗಳನ್ನು ಗುರುತಿಸಲು ಒಂದು ಅವಕಾಶವನ್ನು ಒದಗಿಸಿದೆ ಎಂದು ತಿಳಿಸಿದರು.

ವಿಜಯದಶಮಿಯ ಶುಭ ಸಂದರ್ಭದಲ್ಲಿ 12 ವರ್ಷಗಳ ಹಿಂದೆ ನಾವು 'ಮನ್ ಕಿ ಬಾತ್' ಅನ್ನು ಪ್ರಾರಂಭಿಸಿದೆವು. ಅಂದಿನಿಂದ ನಮ್ಮ ಈ ಪಯಣ ನಿರಂತರವಾಗಿ ಸಾಗಿದೆ. ಇದರಲ್ಲಿ ಎಲ್ಲರೂ ನನ್ನ ಸಹಪ್ರಯಾಣಿಕರಾಗಿದ್ದೀರಿ ಮತ್ತು ಮಾರ್ಗದರ್ಶಕರಾಗಿಯೂ ಇದ್ದೀರಿ ಎಂದು ತಿಳಿಸಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಕಲಬುರಗಿ ತೊಗರಿ ಬೇಳೆ ಕಂಪು; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ



ದೇಶಾದ್ಯಂತ ಇರುವ ಜನರ ಕಠಿಣ ಪರಿಶ್ರಮ, ಧೈರ್ಯ, ಬದ್ಧತೆ, ಸಮರ್ಪಣಾ ಭಾವ ಮತ್ತು ಅವರ ಸೇವಾ ಮನೋಭಾವವನ್ನು ಎತ್ತಿ ತೋರಿಸಲು ಈ ಕಾರ್ಯಕ್ರಮವು ತಮಗೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ ಅವರು, ನನ್ನ ಪಾಲಿಗೆ 'ಮನ್ ಕಿ ಬಾತ್' ಎಂಬುದು ನಮ್ಮ ದೇಶದ ಸಾಮಾನ್ಯ ಜನರ ಕಠಿಣ ಪರಿಶ್ರಮ, ಧೈರ್ಯ, ಬದ್ಧತೆ, ಸಮರ್ಪಣಾ ಭಾವ ಮತ್ತು ಸೇವಾ ಮನೋಭಾವವನ್ನು ಸಂಭ್ರಮಿಸಲು ಸಿಕ್ಕ ಒಂದು ಅದ್ಭುತ ಅವಕಾಶವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಅನೇಕ ಶತಮಾನಗಳಿಂದ ತೀರ್ಥಯಾತ್ರೆಯ ಸಂಪ್ರದಾಯವಿದೆ. ನನ್ನ ಮಟ್ಟಿಗೆ, 'ಮನ್ ಕಿ ಬಾತ್' ಒಂದು ತೀರ್ಥಯಾತ್ರೆಯೇ ಸರಿ. ಇದು ದೇಶದ ಜನರ ಪ್ರಯತ್ನಗಳನ್ನು ಹತ್ತಿರದಿಂದ ಅರಿಯಲು ಮತ್ತು ಅವರ ಕೊಡುಗೆಗಳಿಗೆ ಗೌರವ ಸಲ್ಲಿಸಲು ಕೈಗೊಂಡ ಒಂದು ಪಯಣವಾಗಿದೆ ಎಂದ ಅವರು, ಈ ವೇಳೆ ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಸಮುದಾಯಗಳು ಕೈಗೊಂಡಿರುವ ಉಪಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಕೊಡೈಕೆನಾಲ್ ರಸ್ತೆಯಲ್ಲಿ ದಿಢೀರ್ ಪ್ರವಾಹ: ಬೆಳ್ಳಿ ಜಲಪಾತ ಉಕ್ಕಿ ಹರಿದು ಪ್ರವಾಸಿಗರ ಸಂಚಾರ ಅಸ್ತವ್ಯಸ್ತ!

ಪಂಜಾಬ್‌ನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಉಪಕ್ರಮ ಮತ್ತು ಉತ್ತರಾಖಂಡದಲ್ಲಿ ಹೆವಾಲ್ ನದಿಯನ್ನು ಪುನರುಜ್ಜೀವನಗೊಳಿಸಲು ಮತ್ತು ನೈಸರ್ಗಿಕ ಜಲಮೂಲಗಳನ್ನು ಮರುಸ್ಥಾಪಿಸಲು ಅಲ್ಲಿನ ಸಮುದಾಯಗಳು ನಡೆಸಿದ ಪ್ರಯತ್ನವನ್ನು ಕೂಡ ಅವರು ಶ್ಲಾಘಿಸಿದರು.

ವಿದ್ಯಾ ಇರ್ವತ್ತೂರು

View all posts by this author