ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meerut Horror : ಮರ್ಚೆಂಟ್‌ ನೇವಿ ಆಫೀಸರ್‌ ಹತ್ಯೆ ಕೇಸ್‌; ಹಂತಕಿ ಪತ್ನಿ, ಆಕೆಯ ಬಾಯ್‌ಫ್ರೆಂಡ್‌ಗೆ ನಡುರಸ್ತೆಯಲ್ಲೇ ಬಿತ್ತು ಗೂಸಾ! ಇಲ್ಲಿದೆ ವಿಡಿಯೊ

ನೇವಿ ಅಧಿಕಾರಿ ಸೌರಭ್ ರಜಪೂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರನ್ನು ಕೋರ್ಟ್ ವಿಚಾರಣೆ ಮುಗಿಸಿ ಕರೆದುಕೊಂಡು ಬರುವಾಗ ಕೋರ್ಟ್ ಆವರಣದ ಹೊರಗೆ ವಕೀಲರ ಗುಂಪೊಂದು ಥಳಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸೌರಭ್ ರಜಪೂತ್ ಕೊಲೆ ಪ್ರಕರಣ; ಆರೋಪಿಗಳಿಗೆ ಥಳಿಸಿದ ವಕೀಲರು

Profile pavithra Mar 20, 2025 11:27 AM

ಲಖನೌ: ಖಾಸಗಿ ಹಡಗಿನ ಕಂಪೆನಿಯಲ್ಲಿ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್(Meerut Horror) ಅನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಲೆ ಮಾಡಿದ್ದಳು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರನ್ನು ವಕೀಲರ ಗುಂಪೊಂದು ಮೀರತ್‍ನ ನ್ಯಾಯಾಲಯದ ಹೊರಗೆ ಥಳಿಸಿದ ಘಟನೆ ನಡೆದಿರುವುದು ವರದಿಯಾಗಿದೆ. ವಕೀಲರ ದಾಳಿಯಿಂದ ಇಬ್ಬರೂ ಆರೋಪಿಗಳನ್ನು ರಕ್ಷಿಸಿದ ಪೊಲೀಸರು ತಕ್ಷಣ ಅವರನ್ನು ಜೈಲಿಗೆ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕೋರ್ಟ್ ಆವರಣದ ಹೊರಗೆ ನಡೆದಿದ್ದೇನು?

ವರದಿಗಳ ಪ್ರಕಾರ, ಮೀರತ್‍ನಲ್ಲಿ ಪತಿ ಸೌರಭ್ ಕುಮಾರ್‌ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಗೆಳೆಯ ಸಾಹಿಲ್ ಶುಕ್ಲಾ ಅವರನ್ನು ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ. ವಿಚಾರಣೆಯ ನಂತರ ಅವರು ಹೊರಗೆ ಹೋಗುವ ವೇಳೆ, ವಕೀಲು ಗುಂಪು ಕಟ್ಟಿಕೊಂಡು ಅವರನ್ನು ಸುತ್ತುವರಿದು ಇಬ್ಬರನ್ನೂ ಹಿಗ್ಗಾಮಗ್ಗಾ ಥಳಿಸಿದ್ದಾರೆ. ವಕೀಲರ ದಾಳಿಯಿಂದ ಆರೋಪಿಗಳನ್ನು ರಕ್ಷಿಸಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಈ ಘಟನೆಯಲ್ಲಿ ವಕೀಲರು ಸಾಹಿಲ್ ಅವನನ್ನು ಎಷ್ಟು ತೀವ್ರವಾಗಿ ಥಳಿಸಿದ್ದಾರೆ ಎಂದರೆ ಅವನ ಬಟ್ಟೆಗಳನ್ನು ಹರಿದುಹಾಕಿದ್ದಾರೆ. ಹೀಗಾಗಿ ಪೊಲೀಸರು ಸಾಹಿಲ್ ಅವನನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಜೈಲಿಗೆ ಕರೆದೊಯ್ದದಿದ್ದಾರೆ.

ಆರೋಪಿಗಿಗೆ ವಕೀಲರು ಥಳಿಸಿದ ವಿಡಿಯೊ ಇಲ್ಲಿದೆ ನೋಡಿ...



ಏನಿದು ಪ್ರಕರಣ?

ಲಂಡನ್‍ನಲ್ಲಿ ಖಾಸಗಿ ಹಡಗಿನ ಕಂಪನಿಯಲ್ಲಿ ನೇವಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ ಫೆಬ್ರವರಿಯಲ್ಲಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಮೀರತ್‍ಗೆ ಭೇಟಿ ನೀಡಿದ್ದರು. ಮಾರ್ಚ್ 4ರಂದು ಮಗಳ ಹುಟ್ಟುಹಬ್ಬದ ಪಾರ್ಟಿಯಂದು ಸೌರಭ್ ಅನ್ನು ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರು ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಿಮೆಂಟ್ ತುಂಬಿ ಶವವನ್ನು ಮುಚ್ಚಿಟ್ಟಿದ್ದಾರೆ. ಸೌರಭ್ ಕಾಣೆಯಾದ ಬಗ್ಗೆ ಅವನ ಮನೆಯವರು ದೂರು ನೀಡಿದ ಕಾರಣ ಪೊಲೀಸರು ಕಾಣೆಯಾಗಿದ್ದ ಸೌರಭ್ ಹುಡುಕಾಟದಲ್ಲಿದ್ದಾಗ ತನಿಖೆಯ ವೇಳೆ ಆತನ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆತನ ಕೊಳೆತ ಅವಶೇಷಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:UP Horror: ನೌಕಾಪಡೆ ಅಧಿಕಾರಿ ಹತ್ಯೆ ಪ್ರಕರಣ; ಸಹೋದರಿಯೊಂದಿಗೆ ಮಾತನಾಡಿದ್ದ ಚಾಟ್‌ ವೈರಲ್‌

ಸೌರಭ್ ರಜಪೂತ್‌ 2016ರಲ್ಲಿ ಗೌರಿಪುರದ ಮುಸ್ಕಾನ್ ಅವಳನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕುಟುಂಬಸ್ಥರು ಇವರಿಬ್ಬರ ವಿವಾಹದಿಂದ ಅಸಮಾಧಾನಗೊಂಡಿದ್ದರಿಂದ ಸೌರಭ್ ಪತ್ನಿ ಹಾಗೂ ಮಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಮದುವೆಯಾದ ಬಳಿಕ ಮರ್ಚೆಂಟ್ ನೇವಿಯಲ್ಲಿ ಕೆಲಸಕ್ಕೆ ಸೇರಿದ್ದು ಬಳಿಕ ಲಂಡನ್‍ನ ಮಾಲ್‌ವೊಂದರ ಮಾರಾಟ ವ್ಯವಸ್ಥಾಪಕ ಹುದ್ದೆಯಲ್ಲಿದ್ದರಂತೆ.