ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಖಾಸಗಿ ತೈಲ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ (Nayara Energy) ಬುಧವಾರದಿಂದ ದೇಶಾದ್ಯಂತ ತನ್ನ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 5 ರೂ.ಹಾಗೂ ಡೀಸೆಲ್ (Petrol Price Down) ದರವನ್ನು ಲೀಟರ್‌ಗೆ 3 ರೂ. ಇಳಿಕೆ ಮಾಡಿದೆ. ದೇಶಾದ್ಯಂತ ಇರುವ ನಯಾರಾ ಎನರ್ಜಿಯ 7,000ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸೇರಿದಂತೆ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಚಿಲ್ಲರೆ ದರಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರಲಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಭಾರತದ ಒಂದು ಲಕ್ಷಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ, ಆದರೆ ಯಾವುದೇ ಪರಿಷ್ಕರಣೆಯನ್ನು ಘೋಷಿಸಿಲ್ಲ. ರಾಜಧಾನಿ ದೆಹಲಿಯಲ್ಲಿ ಐಒಸಿ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.12 ರೂ. ಹಾಗೂ ಡೀಸೆಲ್ ದರ 95.20 ರೂ. ನಲ್ಲೇ ಮುಂದುವರಿದಿದೆ.
ಇರಾನ್ ಸಂಘರ್ಷದ ನಂತರ ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿ ಏರಿಕೆಯಾದ ನಂತರ ಇಂಧನ ಬೆಲೆಗಳನ್ನು ಹೆಚ್ಚಿಸಿದ ಮೊದಲ ಚಿಲ್ಲರೆ ವ್ಯಾಪಾರಿಗಳಲ್ಲಿ ನಾಯರಾ ಮೊದಲಾಗಿತ್ತು.
Tumkur News: ಪ್ರೇಯಸಿಯ ಜತೆ ಗಲಾಟೆ; ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!
ಇದಕ್ಕೂ ಮೊದಲು ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಕಾರಣ, ಕಳೆದ ಮಾರ್ಚ್ 26ರಂದು ನಯಾರಾ ಎನರ್ಜಿ ಪೆಟ್ರೋಲ್ ದರವನ್ನು 5 ರೂ. ಹಾಗೂ ಡೀಸೆಲ್ ದರವನ್ನು 3 ರೂ. ಹೆಚ್ಚಿಸಿತ್ತು. ಬಳಿಕ ಮೇ ತಿಂಗಳ ದ್ವಿತೀಯಾರ್ಧದಲ್ಲಿ ಸರ್ಕಾರಿ ತೈಲ ಕಂಪನಿಗಳು ಹಂತ ಹಂತವಾಗಿ ಪರಿಷ್ಕರಣೆ ನಡೆಸಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಒಟ್ಟು 7.50 ರೂ. ಏರಿಕೆ ಮಾಡಿದ್ದವು.