ಬೆಂಗಳೂರು: ಮಾನಸ ಸರೋವರಕ್ಕೆ (Manasa sarovara) ಪ್ರವಾಸ ಹೋಗಿದ್ದ ಕರ್ನಾಟಕ ಮೂಲದ ಟೆಕ್ಕಿ (Karnataka techie) ನೇಪಾಳ ಪ್ರವಾಹದ (Nepal flood) ವೇಳೆ ನಾಪತ್ತೆಯಾಗಿದ್ದಾರೆ. ಕೊನೆಯದಾಗಿ ಅವರು ನೇಪಾಳ- ಚೀನಾ ಗಡಿಯಲ್ಲಿ (Nepal-china bordar) ಕಾಣಿಸಿಕೊಂಡಿದ್ದರು. ಈಶಾ ಫೌಂಡೇಶನ್ (Isha Foundation) ಆಯೋಜಿಸಿದ್ದ ಪ್ಯಾಕೇಜ್ ಪ್ರವಾಸದಲ್ಲಿ (Tour package) ಕರ್ನಾಟಕದ ರಾಕೇಶ್ ನಾಯಕ್ (45) ಕೂಡ ತೆರಳಿದ್ದು, ಹಠಾತ್ ಪ್ರವಾಹದ (Nepal flash floods) ಬಳಿಕ ನಾಪತ್ತೆಯಾಗಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರಾಕೇಶ್ ಸುಮಾರು ಹತ್ತು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು ಎಂದು ಅವರ ಕುಟುಂಬ ತಿಳಿಸಿದೆ.
ರಾಕೇಶ್ ಆಗಸ್ಟ್ 26ರಂದು ರಾತ್ರಿ 9.10 ರ ಸುಮಾರಿಗೆ ನೇಪಾಳ ಮತ್ತು ಚೀನಾ ಗಡಿಯ ಸಮೀಪವಿರುವ ವಲಸೆ ಕಚೇರಿಗೆ ಬಂದಿದ್ದನು. ಸುಮಾರು 20 ನಿಮಿಷಗಳ ಅನಂತರ ಆ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಪ್ರವಾಹ ಬಂದಾಗ ರಾಕೇಶ್ ಕಚೇರಿಯೊಳಗೆ ಇದ್ದನು. ಬಳಿಕ ಆತನೊಂದಿಗೆ ಯಾವುದೇ ಸಂವಹನ ಸಾಧ್ಯವಾಗಿಲ್ಲ ಎಂದು ರಾಕೇಶ್ ತಂದೆ, ನಿವೃತ್ತ ರೈಲ್ವೆ ಅಧಿಕಾರಿ ಶಿವಪ್ರಸಾದ್ ತಿಳಿಸಿದ್ದಾರೆ.
ವಿನಾಕಾರಣ ಬಂಧಿಸುವ ಚಾಳಿ ಸರಿಯಲ್ಲ: ಹೈ
ರಾಕೇಶ್ ಇತರರೊಂದಿಗೆ ಸುರಕ್ಷಿತರಾಗಿದ್ದಾರೆ ಎಂದು ಆರಂಭದಲ್ಲಿ ನಮಗೆ ತಿಳಿಸಲಾಗಿತ್ತು. ಆದರೆ ಈವರೆಗೆ ಆತನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಕೊನೆಯದಾಗಿ ಮಗನೊಂದಿಗಿನ ಆಗಸ್ಟ್ 12ರಂದು ಮಾತನಾಡಿದ್ದು, ಮಾನಸ ಸರೋವರ ಪ್ರವಾಸಕ್ಕೂ ಮೊದಲು ರಾಕೇಶ್ ದೆಹಲಿಯಿಂದ ಕರೆ ಮಾಡಿದ್ದಾಗಿ ಅವರು ಹೇಳಿದರು.
ರಾಕೇಶ್ ನಾಯಕ್ ಪತ್ನಿಯೊಂದಿಗೆ ಮಾತನಾಡಲು ಬೇರೆ ಸಿಮ್ ಕಾರ್ಡ್ ಬಳಸುತ್ತಿದ್ದನು. ಯಾಕೆಂದರೆ ನಿಯಮಿತ ಸಿಮ್ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆತ ತನ್ನ ಪತ್ನಿಯೊಂದಿಗೆ ಕೊನೆಯದಾಗಿ ಆಗಸ್ಟ್ 25ರಂದು ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ.
ರಾಕೇಶ್ ಅವರ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ಭಾರತೀಯ ರಾಯಭಾರ ಕಚೇರಿ ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಐಎಫ್‌ಎಸ್ ಅಧಿಕಾರಿಯೊಬ್ಬರು ಚೀನಾ ಗಡಿಯಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ನಾವು ರಾಯಭಾರ ಕಚೇರಿ ಅಧಿಕಾರಿಯೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ. ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಆದರೆ ಏನಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಶಿವಪ್ರಸಾದ್ ತಿಳಿಸಿದರು.
ನಾಪತ್ತೆಯಾದವರನ್ನು ಹುಡುಕಲು ಇಶಾ ಫೌಂಡೇಶನ್ ಕೂಡ ಪ್ರಯತ್ನಿಸುತ್ತಿದೆ. ಪರಿಸ್ಥಿತಿಯನ್ನು ಪರಿಶೀಲಿಸಲು ಫೌಂಡೇಶನ್ ತನ್ನ ಪ್ರತಿನಿಧಿಗಳನ್ನು ಪೀಡಿತ ಪ್ರದೇಶದ ಕಡೆಗೆ ಕಳುಹಿಸಿಕೊಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ ಎಂದರು.
ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ಪಾಲಿಕೆಯಿಂದಲೇ ಸ್ವಚ್ಛತೆ: 25 ವರ್ಷಗಳ ಯಶಸ್ಸಿನ ಸಂಭ್ರಮ ಆಚರಣೆ
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಿಲುಕಿರುವ ಕರ್ನಾಟಕದ ಕನಿಷ್ಠ 13 ಜನರಲ್ಲಿ ರಾಕೇಶ್ ನಾಯಕ್ ಕೂಡ ಸೇರಿದ್ದಾರೆ. ಅಲ್ಲಿರುವ ಹನ್ನೊಂದು ಜನರು ಬೆಂಗಳೂರು ನಗರ ವ್ಯಾಪ್ತಿಯವರು ಎನ್ನಲಾಗಿದೆ.