ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Garuda App: ತಿರುಪತಿ ಭಕ್ತರಿಗಾಗಿ ಹೊಸ App

ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬರುವ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ತಿರುಮಲ ಬೆಟ್ಟಕ್ಕೆ ಭೇಟಿ ನೀಡುವ ಸಾಮಾನ್ಯ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲದ ಅನುಭವ ಒದಗಿಸುವ ನಿಟ್ಟಿನಲ್ಲಿ ಟಿಟಿಡಿ ಎಲ್ಲ ಸೇವೆಗಳನ್ನು ಭಕ್ತರ ಬೆರಳ ತುದಿಗೆ ತರುತ್ತಿದೆ. ಇದಕ್ಕಾಗಿ ‘ಗರುಡ’ ಎಂಬ ಹೊಸ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.

ತಿರುಪತಿ ಭಕ್ತರಿಗಾಗಿ ಹೊಸ App

-

Profile
Ashok Nayak Oct 10, 2026 5:27 PM

ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬರುವ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ತಿರುಮಲ ಬೆಟ್ಟಕ್ಕೆ ಭೇಟಿ ನೀಡುವ ಸಾಮಾನ್ಯ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲದ ಅನುಭವ ಒದಗಿಸುವ ನಿಟ್ಟಿನಲ್ಲಿ ಟಿಟಿಡಿ ಎಲ್ಲ ಸೇವೆಗಳನ್ನು ಭಕ್ತರ ಬೆರಳ ತುದಿಗೆ ತರುತ್ತಿದೆ. ಇದಕ್ಕಾಗಿ ‘ಗರುಡ’ ಎಂಬ ಹೊಸ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.

ದಿನನಿತ್ಯ ತಿರುಪತಿಗೆ ಬರುವ ಸಾವಿರಾರು ಭಕ್ತರಿಗೆ ಈ ಆಪ್‌ನ ಮೂಲಕ ಟಿಟಿಡಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ಮಾರ್ಗದರ್ಶಿಯನ್ನು ಪರಿಚಯಿಸುತ್ತಿದೆ. ಭಕ್ತರು ಇತರರ ಮೇಲೆ ಅವಲಂಬಿತ ರಾಗದೇ ಸ್ವತಂತ್ರವಾಗಿ ಮಾಹಿತಿಯನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಈ ಅತ್ಯಾಧು ನಿಕ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Kartavya App: ನೌಕರರಿಗೆ ತಲೆನೋವಾದ 'ಕರ್ತವ್ಯ App'

‘ಗರುಡ’ ಆಪ್ ಶನಿವಾರದಿಂದ ಭಕ್ತರಿಗೆ ಸಂಪೂರ್ಣವಾಗಿ ಲಭ್ಯವಿರುತ್ತದೆ. ತಿರುಮಲದಲ್ಲಿ ಲಭ್ಯವಿರುವ ಎಲ್ಲ ಸೇವೆಗಳ ಕುರಿತಾದ ಸಮಗ್ರ ವಿವರಗಳನ್ನು ಒಳಗೊಂಡಿದೆ. ದರ್ಶನದ ಸರತಿ ಸಾಲುಗಳು, ಲಡ್ಡು ಮತ್ತು ಜಲ ಪ್ರಸಾದಂ ಕೌಂಟರ್‌ಗಳು, ಆಹಾರ ಮಳಿಗೆಗಳು, ಪೊಲೀಸ್ ಠಾಣೆಗಳು, ಬಸ್ ನಿಲ್ದಾಣಗಳು, ಉಚಿತ ಬಸ್ ಪಾಯಿಂಟ್‌ಗಳು, ಆರೋಗ್ಯ ಕೇಂದ್ರಗಳು ಮತ್ತು ಲಗೇಜ್, ಮೊಬೈಲ್ ಠೇವಣಿ ಕೌಂಟರ್‌ಗಳಂತಹ ವಿವಿಧ ಸ್ಥಳಗಳಿಗೆ ಹೋಗಲು ಈ ಆಪ್ ಮಾರ್ಗದರ್ಶನ ನೀಡಲಿದೆ,

ಸಮಗ್ರ ಮಾಹಿತಿಯನ್ನು ಕೆಲವೇ ಸೆಕೆಂಡುಗಳಲ್ಲಿ ಪಡೆಯಬಹುದು. ಈ ಅಪ್ಲಿಕೇಶನ್ ಆಫ್‌ʼಲೈನ್‌ ನಲ್ಲಿಯೂ ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಸಿಗ್ನಲ್ ಸಮಸ್ಯೆಗಳು ಅಥವಾ ಭಕ್ತರ ಮೊಬೈಲ್ ಫೋನ್ʼನಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯಿದ್ದರೂ ಸಹ ಆಪ್ ನಿರಂತರ ಸೇವೆಯನ್ನು ಖಚಿತಪಡಿಸಲಿದೆ.