ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ರೈಸಿನಾ ಬೆಟ್ಟದ ಬಳಿ ನಿರ್ಮಾಣಗೊಂಡ ಹೊಸ ಕಚೇರಿಗೆ ಸ್ಥಳಾಂತರ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೊಸ ಕಚೇರಿ ರೈಸಿನಾ ಬೆಟ್ಟದ ಬಳಿ ಉದ್ಘಾಟನೆಗೆ ಸಿದ್ಧವಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಈ ಹೊಸ ಕಚೇರಿ ಆವರಣವನ್ನು ಸೇವಾ ತೀರ್ಥ ಎಂದು ಹೆಸರಿಸಲಾಗಿದೆ. ಈ ತಿಂಗಳಾಂತ್ಯದಲ್ಲಿ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ (Central Vista project) ಭಾಗವಾಗಿ ರೈಸಿನಾ ಬೆಟ್ಟದ (Raisina Hill) ಬಳಿ ನಿರ್ಮಿಸಲಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ಹೊಸ ಕಚೇರಿ (Seva Teerth) ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ತಿಂಗಳಾಂತ್ಯದಲ್ಲಿ ಇಲ್ಲಿ ಪ್ರಧಾನಿ ಮೋದಿ ಅವರು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯವನ್ನು ಕಾರ್ಮಿಕರು ಈಗ ನಡೆಸುತ್ತಿದ್ದಾರೆ. ಈ ಹೊಸ ಕಚೇರಿ ಆವರಣವನ್ನು ಸೇವಾ ತೀರ್ಥ ಎಂದು ಹೆಸರಿಸಲಾಗಿದೆ.
ರೈಸಿನಾ ಬೆಟ್ಟದ ಬಳಿ ನಿರ್ಮಾಣ ಹಂತದಲ್ಲಿರುವ ಕಾರ್ಯನಿರ್ವಾಹಕ ಎನ್‌ಕ್ಲೇವ್ ಆವರಣವನ್ನು ಸೇವಾ ತೀರ್ಥ ಎಂದು ಹೆಸರಿಸಲಾಗಿದೆ. ಈ ಆವರಣದಲ್ಲಿ ಮೂರು ಕಟ್ಟಡಗಳಿದ್ದು ಸೇವಾ ತೀರ್ಥ 1ರಲ್ಲಿ ಪ್ರಧಾನ ಮಂತ್ರಿ ಕಚೇರಿ, ಸೇವಾ ತೀರ್ಥ 2ರಲ್ಲಿ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ಸೇವಾ ತೀರ್ಥ 3ರಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸೆಕ್ರೆಟರಿಯೇಟ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಚೇರಿ ಇರಲಿದೆ.
PSLC-C62: ಇಸ್ರೋದ PSLV-C62 ಮಿಷನ್‌ಗೆ ಹಿನ್ನಡೆ; ಕಕ್ಷೆ ತಲುಪುವ ಮೊದಲೇ ಪಿಎಸ್ಎಲ್ ವಿ -ಸಿ62 ವಿಫಲ
ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸಂಸತ್ತಿನ ಕಟ್ಟಡ ಮತ್ತು ಉಪಾಧ್ಯಕ್ಷರ ಎನ್ ಕ್ಲೇವ್ ಈಗಾಗಲೇ ಸಿದ್ಧವಾಗಿದೆ. ಪ್ರಧಾನ ಮಂತ್ರಿ ಕಚೇರಿ ಕಾರ್ಯವು ಬಹುತೇಕ ಪೂರ್ಣಗೊಂಡಿದೆ. ಎಂಟು ಹೊಸ ಸಚಿವರ ಕಚೇರಿಗಳಲ್ಲಿ ಮೂರು ಸಿದ್ಧವಾಗಿದೆ.
Historic shift for India’s governance 🏛️
— Voice Of Bharat 🇮🇳🌍 (@Kunal_Mechrules) January 12, 2026
• PM Modi is set to move the Prime Minister’s Office from the colonial-era South Block to the modern Seva Teerth complex on Makar Sankranti, ending a 78-year chapter.
• The new PMO site unifies key ministries in one purpose-built hub.… pic.twitter.com/igx2OsTq0W
ಪ್ರಧಾನ ಮಂತ್ರಿ ಕಚೇರಿಯನ್ನು ಈ ಹಿಂದೆ ಕಾರ್ಯನಿರ್ವಾಹಕ ಎನ್ ಕ್ಲೇವ್ ಎಂದು ಕರೆಯಲಾಗುತ್ತಿತ್ತು. ಬಳಿಕ ಅದನ್ನು ಸೇವಾ ತೀರ್ಥ ಎಂದು ಹೆಸರಿಸಲಾಗಿದೆ. ಪ್ರಧಾನ ಮಂತ್ರಿ ನಿವಾಸವನ್ನು ಕೂಡ ಹೊಸ ಕಚೇರಿಯ ಬಳಿ ನಿರ್ಮಿಸಲಾಗುತ್ತಿದ್ದು, ಅದು ಸಿದ್ಧವಾದ ಬಳಿಕ ಪ್ರಧಾನಿಯವರು 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಿಂದ ಸ್ಥಳಾಂತರಗೊಳ್ಳಲಿದ್ದಾರೆ.
ಸೇವಾ ತೀರ್ಥದಲ್ಲಿ ಗಣ್ಯರನ್ನು ಭೇಟಿಗೆ ಉನ್ನತ ದರ್ಜೆಯ ಕೊಠಡಿಗಳಿವೆ. ಇವು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರತಿಬಿಂಬದಂತಿದೆ. ಕ್ಯಾಬಿನೆಟ್ ಸಭೆಗಳಿಗಾಗಿ ಹೊಸ ಕೊಠಡಿಯನ್ನು ವಿನ್ಯಾಸಗೊಳಿಸಲಾಗಿದ್ದು, ಪ್ರಧಾನ ಮಂತ್ರಿ ಕಚೇರಿ ತೆರೆದ ಮಹಡಿ ಮಾದರಿಯನ್ನು ಹೊಂದಿದೆ.
ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯಗೊಂಡ ಬಳಿಕ ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಸಚಿವಾಲಯಗಳೊಂದಿಗೆ ಪ್ರಧಾನ ಮಂತ್ರಿ ಕಚೇರಿಯು ದಕ್ಷಿಣ ಬ್ಲಾಕ್‌ನಲ್ಲಿದ್ದರೆ ಗೃಹ ಮತ್ತು ಹಣಕಾಸು ಸಚಿವಾಲಯಗಳು ಉತ್ತರ ಬ್ಲಾಕ್ ನಲ್ಲಿಟ್ಟು. ಈಗ ಅವುಗಳನ್ನು ಕರ್ತವ್ಯ ಭವನಕ್ಕೆ ಸ್ಥಳಾಂತರಿಸಲಾಗಿದೆ.
Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್, ಟಿಕೆಟ್ ದರ ಏರಿಕೆ
ವಸಾಹತುಶಾಹಿ ಪರಂಪರೆಯನ್ನು ನೆನಪಿಸುವ ನಾರ್ತ್ ಮತ್ತು ಸೌತ್ ಬ್ಲಾಕ್‌ಗಳನ್ನು ಸುಮಾರು 5,000 ವರ್ಷಗಳಷ್ಟು ಪುರಾತನವಾದ ಭಾರತೀಯ ನಾಗರಿಕತೆಯನ್ನು ಪ್ರದರ್ಶಿಸುವ ಬೃಹತ್ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. ಇದು ಮುಂದಿನ ವರ್ಷದಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ.