ಹೊಸ ವರ್ಷದ ಮಧ್ಯರಾತ್ರಿ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯ! ವೈರಲ್ ಆಗ್ತಿರೋ ಟ್ರೆಂಡ್ ಬಗ್ಗೆ ಮಾಹಿತಿ ಇಲ್ಲಿದೆ
12 Grapes eating Trends : ಕೆಲವರು ಹೊಸ ವರ್ಷವನ್ನು ಸರಳವಾಗಿ ಆಚರಿಸಿದರೆ ಇನ್ನು ಕೆಲವರು ಮಧ್ಯರಾತ್ರಿ 12ರ ಹೊತ್ತಿಗೆಲ್ಲ ಪಬ್, ಡಿಸ್ಕೊ ಕ್ಲಬ್ ಇತರೆಗಳಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ. ಭಾರ ತೀಯ ಕಾಲಮಾನಕ್ಕೆ ಯುಗಾದಿ ಹೊಸವರ್ಷ ಆಗಿದ್ದರೂ ಕೂಡ ಜನವರಿ 1ನ್ನು ಹೊಸ ವರ್ಷ ಎಂದು ಸೆಲಬ್ರೇಟ್ ಮಾಡುವವರು ನಗರ ಪ್ರದೇಶಗಳಲ್ಲಿ ಇದ್ದಾರೆ. ಅಂತೆಯೇ ಹೊಸ ವರ್ಷದ ದಿನದಂದು ಮಧ್ಯ ರಾತ್ರಿಯಲ್ಲಿ 12 ದ್ರಾಕ್ಷಿ ತಿನ್ನುವ ಸಂಪ್ರದಾಯ ಒಂದು ಸ್ಪೇನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಇದೆ ಎಂಬ ಮಾಹಿತಿ ಇತ್ತೀಚೆಗಷ್ಟೇ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ನವದೆಹಲಿ, ಡಿ. 31: 2025ರ ಅಂತಿಮ ಕಾಲಘಟ್ಟದಲ್ಲಿ ನಾವಿಂದು ಇದ್ದು ಹೊಸ ವರ್ಷಕ್ಕೆ (New year 2026) ಅತೀ ಸಮೀಪದಲ್ಲಿದ್ದೇವೆ. ಕ್ಯಾಲೆಂಡರ್ ಬದಲಾದಂತೆ ನಮ್ಮ ಜೀವನದಲ್ಲಿ ಹೊಸ ವರ್ಷ ಹರುಷದ ಹಾದಿ ತರಲಿ ಎಂಬ ಕಾರಣಕ್ಕೆ ಹೊಸ ವರ್ಷದಂದು ದೇವಸ್ಥಾನಗಳಿಗೆ ಹೋಗು ವುದು, ಪೂಜೆ ಪುನಸ್ಕಾರ ಎಲ್ಲ ಮಾಡುವುದು ಇದೆ. ಅಂತೆಯೇ ಡಿ.31ರ ರಾತ್ರಿಯಂದು ಹೊಸ ವರ್ಷದ ಸಲಬ್ರೇಶನ್ ಎಲ್ಲ ಕಡೆ ಇರಲಿದ್ದು ಈ ದಿನ ಪಾರ್ಟಿಗಳು ಕೂಡ ನಡೆಯುತ್ತದೆ. ಕೆಲವರು ಈ ಹೊಸ ವರ್ಷವನ್ನು ಸರಳವಾಗಿ ಆಚರಿಸಿದರೆ ಇನ್ನು ಕೆಲವರು ಮಧ್ಯರಾತ್ರಿ 12ರ ಹೊತ್ತಿಗೆಲ್ಲ ಪಬ್, ಡಿಸ್ಕೊ ಕ್ಲಬ್ ಇತರೆಗಳಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ. ಭಾರತೀಯ ಕಾಲ ಮಾನಕ್ಕೆ ಯುಗಾದಿ ಹೊಸವರ್ಷ ಆಗಿದ್ದರೂ ಕೂಡ ಜನವರಿ 1ನ್ನು ಹೊಸ ವರ್ಷ ಎಂದು ಸೆಲಬ್ರೇಟ್ ಮಾಡುವವರು ನಗರ ಪ್ರದೇಶಗಳಲ್ಲಿ ಇದ್ದಾರೆ. ಅಂತೆಯೇ ಹೊಸ ವರ್ಷದ ದಿನದಂದು ಮಧ್ಯ ರಾತ್ರಿಯಲ್ಲಿ 12 ದ್ರಾಕ್ಷಿ ತಿನ್ನುವ ಸಂಪ್ರದಾಯ ಒಂದು ಸ್ಪೇನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಇದೆ ಎಂಬ ಮಾಹಿತಿ ಇತ್ತೀಚೆಗಷ್ಟೇ ವೈರಲ್ ಆಗಿದೆ.
ಸ್ಪೇನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಜನರು ಮಧ್ಯರಾತ್ರಿಯ ಕೊನೆಯ 12 ಸೆಕೆಂಡು ಗಳಲ್ಲಿ 12 ದ್ರಾಕ್ಷಿಯನ್ನು ತಿನ್ನುತ್ತಾರಂತೆ. ಈ ಒಂದು ಆಚರಣೆ ಎನ್ನುವುದು ಆ ದೇಶಗಳ ಸಂಪ್ರದಾಯದ ಒಂದು ಭಾಗವಾಗಿದೆ. ಇದು ಜೀವನದಲ್ಲಿ ಅದೃಷ್ಟ ತರುತ್ತದೆ ಮತ್ತು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ ಎಂದು ಸ್ಪ್ಯಾನಿಷ್ ಸಂಪ್ರದಾಯದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಜನರು ತಮ್ಮ ಸ್ವ ಇಚ್ಛೆಯಿಂದ ಇದನ್ನು ಪಾಲಿಸುತ್ತಿದ್ದಾರೆ.
ವರದಿ ಒಂದರ ಪ್ರಕಾರ , ಈ ದ್ರಾಕ್ಷಿ ತಿನ್ನುವ ಸಂಪ್ರದಾಯವು ಸ್ಪೇನ್ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳಲ್ಲಿ ಮೊದಲು ಪ್ರಾರಂಭವಾಯಿತು ಎಂದು ತಿಳಿದು ಬಂದಿದೆ. ಹೊಸ ವರ್ಷದ ಪ್ರತಿ ತಿಂಗಳನ್ನು ಸಂಕೇತಿಸುವ ರೀತಿ ಒಟ್ಟು 12 ದ್ರಾಕ್ಷಿಯನ್ನು ಒಂದಾದ ಮೇಲೊಂದರಂತೆ ಸೇವಿಸುವ ಮೂಲಕ ತಮ್ಮ ಇಷ್ಟಾರ್ಥ ಇಡೇರಿಕೆಗೆ ಪ್ರಾರ್ಥನೆ ಮಾಡುತ್ತಾರೆ. ಈ ಪ್ರಾರ್ಥನೆ ನೆರವೇರಲಿದೆ ಎಂದು ಜನರು ನಂಬಿದ್ದಾರೆ. ಈ ಆಚರಣೆಯನ್ನು ಜನರು ಮಾಡುವಾಗ ಪಾರ್ಟಿಗಳು ಹಾಗೂ ಪಟಾಕಿಗಳನ್ನು ಸಿಡಿಸುವುದಿಲ್ಲ. ಪ್ರತಿ ದ್ರಾಕ್ಷಿಯನ್ನು ಎಚ್ಚರಿಕೆಯಿಂದ ಅಗಿಯುವುದು, ಸ್ಥಿರವಾಗಿ ಉಸಿರಾಡುವುದು ಮತ್ತು ಪ್ರತಿ ದ್ರಾಕ್ಷಿಯ ಮೇಲೆ ಗಮನ ಕೇಂದ್ರೀಕರಿಸುವುದರಿಂದಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಆಚರಣೆಯಿಂದ ಮನಸ್ಸು ಕೂಡ ಶಾಂತವಾಗಿ ಇರಲಿದೆ.
New Year 2026: ಹೊಸ ವರ್ಷಾಚರಣೆ ಬಿಗಿ, ರಾಜಧಾನಿಯ ಈ ರಸ್ತೆಗಳಲ್ಲಿ ಸಂಚಾರ ಬಂದ್
ಆರೋಗ್ಯ ಪ್ರಯೋಜನಗಳು ಏನು?
- ದ್ರಾಕ್ಷಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ತ್ವಚೆಯ ಮೇಲಿನ ಸುಕ್ಕುಗಳನ್ನು ತಡೆದು, ಚರ್ಮವು ಹೊಳೆಯುವಂತೆ ಮಾಡುತ್ತದೆ.
- ಇದರಲ್ಲಿರುವ ವಿಟಮಿನ್ ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ.
- ದ್ರಾಕ್ಷಿಗಳಲ್ಲಿ ನೀರು, ನಾರು ಮತ್ತು ನೈಸರ್ಗಿಕ ಸಕ್ಕರೆಗಳಲ್ಲಿ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ಕರುಳಿನ ಆರೋಗ್ಯಯುತ ಬ್ಯಾಕ್ಟೀರಿಯಾವನ್ನು ಬೆಂಬಲಿಸುವ ರೋಗನಿರೋಧಕ ಶಕ್ತಿ ಮತ್ತು ಮನಸ್ಥಿತಿಯನ್ನು ಹೆಚ್ಚಿಸುತ್ತವೆ.
- ದ್ರಾಕ್ಷಿಯಲ್ಲಿ ಲುಟೀನ್ ಮತ್ತು ಝೀಕ್ಸಾಂಥಿನ್ ಎಂಬ ಆಂಟಿಆಕ್ಸಿಡೆಂಟ್‌ಗಳಿವೆ. ಇವು ವಯಸ್ಸಾದಂತೆ ಬರುವ ಕಣ್ಣಿನ ಪೊರೆ ಮತ್ತು ಇತರ ದೃಷ್ಟಿ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿ.
- ಊಟದ ನಂತರದ ಅಜೀರ್ಣವಾಗುವುದು ತಡೆಯುತ್ತದೆ.
- ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಬೆಂಬಲಿಸುತ್ತದೆ.
- ನಿಯಮಿತವಾಗಿ ದ್ರಾಕ್ಷಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಏಕಾಗ್ರತೆ ಸುಧಾರಿಸುತ್ತದೆ.
ಒಟ್ಟಿನಲ್ಲಿ ಈ ಒಂದು ಆಚರಣೆಯನ್ನು ಸ್ಪೇನ್ , ಅಮೇರಿಕಾದಲ್ಲಿ ಮಾತ್ರವೇ ಆಚರಿಸಬೇಕು ಎಂಬ ಯಾವ ನಿಯಮವು ಇಲ್ಲ. ಹೀಗಾಗಿ ಮನಸ್ಸಿದ್ದರೆ ಯಾರು ಬೇಕಾದರು ಈ ಆಚರಣೆ ಮಾಡಬಹುದು. ಮಧ್ಯರಾತ್ರಿಯ ಸಮಯದಲ್ಲಿ 12 ದ್ರಾಕ್ಷಿಯನ್ನು ನಿಧಾನವಾಗಿ ತಿನ್ನುವ ಮೂಲಕ ನೀವು ಕೂಡ ಈ ಹೊಸ ವರ್ಷವನ್ನು ಬಹಳ ವಿನೂತನವಾಗಿ ಆಚರಿಸಬಹುದು.