ಇಸ್ಲಮಾಬಾದ್: ಆಪರೇಷನ್ ಸಿಂದೂರ(Operation Sindoor) ಮೂಲದ ಭಾರತ ಕೊಟ್ಟ ತಿರುಗೇಟಿನಿಂದ ಚೇತರಿಕೊಳ್ಳುವ ಮುನ್ನವೇ ಪಾಕ್‌ಗೆ ಭಾರತ ಮತ್ತೊಂದು ಹೊಡೆತ ಕೊಟ್ಟಿದೆ. ಲಾಹೋರ್, ಕರಾಚಿ, ರಾವಲ್ಪಿಂಡಿ, ಗೋಕ್ಟಿ, ಸಿಯಾ ಕೋಟ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಇಂದು ಭಾರತ ಎರಡನೇ ಹಂತದ ದಾಳಿ(Drone Attack on Pak) ನಡೆಸಿವೆ. ಈ ದಾಳಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಪ್ರಶಂಸೆ ವ್ಯಕ್ತಪಡಿದ್ದು, ಮತ್ತೆ ತಾಳ್ಮೆ ಪರೀಕ್ಷಿಸಿದರೆ ಪರಿಣಾಮ ನೆಟ್ಟಗಿರಲ್ಲ. ಆಪರೇಷನ್ ಸಿಂದೂರ ಮುಂದುವರಿದಿದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿನ್ನೆ ನಮ್ಮ ಸೇನೆ ತೆಗೆದುಕೊಂಡ ಕ್ರಮ ಮತ್ತು ಅವರು ತೋರಿಸಿದ ಧೈರ್ಯ ಮತ್ತು ಶೌರ್ಯಕ್ಕಾಗಿ ನಾನು ಸಶಸ್ತ್ರ ಪಡೆಗಳನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ತಟಸ್ಥಗೊಳಿಸಲಾಗಿದೆ, ಇದು ನಮಗೆ ಹೆಮ್ಮೆಯ ವಿಷಯ" ಎಂದು ಅವರು ಹೇಳಿದರು.
ಭಾರತದ ಈ ಸಂಯಮದ ಲಾಭ ಪಡೆಯಲು ಯಾರಾದರೂ ಪ್ರಯತ್ನಿಸಿದರೆ, ಅವರು ನಿನ್ನೆ ನಡೆದಂತಹ ಕಠಿಣ ಕ್ರಮ ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಭಾರತದ ರಕ್ಷಣೆ ವಿಚಾರಕ್ಕೆ ಬಂದಾಗ ಯಾವ ಮಟ್ಟ ಕ್ರಮಕ್ಕೂ ಭಾರತ ತಯಾರಾಗಿದೆ. ಆಪರೇಷನ್ ಸಿಂದೂರ್ ಬೆನ್ನಲ್ಲೇ ಇಂದು ಮತ್ತೆ ಭಾರತೀಯ ಸೇನೆ ಪಾಕ್ ಸೇನಾ ಪ್ರಧಾನ ಕಚೇರಿ, ಕ್ರಿಕೆಟ್ ಸ್ಟೇಡಿಯಂ, ವಾಯುನೆಲೆ, ಸೇನಾ ನೆಲೆಗಳ ಮೇಲೆ ಡ್ರೋನ್ ಡೆಡ್ಲಿ ಅಟ್ಯಾಕ್ ನಡೆಸಿವೆ. ಭಾರತದ ಈ ದಾಳಿ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಇನ್ನು ದಾಳಿ ಬೆನ್ನಲ್ಲೇ ಪಾಕಿಸ್ತಾನ ತಾನು ಏನು ಸುಮ್ಮನೆ ಕುಳಿತಿಲ್ಲ. ಭಾರತದ 25 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಕೊಚ್ಚಿಕೊಂಡಿದೆ. ಆ ಮೂಲಕ ಭಾರತ ಡೆಡ್ಲಿ ಅಟ್ಯಾಕ್ ನಡೆಸಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದೆ.
ಈ ಸುದ್ದಿಯನ್ನೂ ಓದಿ:Operation Sindoor: ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಭಾರತದ ಡ್ರೋನ್ ದಾಳಿ, ಪಿಎಸ್‌ಎಲ್ ಪಂದ್ಯ ರದ್ದು
ದಾಳಿ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಸೇನೆ, ಭಾರತದ 25 ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಇಸ್ರೇಲಿ ನಿರ್ಮಿತ ಹರೋಪ್ ಡ್ರೋನ್‌ಗಳಿಂದ ಭಾರತ ದಾಳಿ ನಡೆಸಿತ್ತು. ಅವುಗಳನ್ನು ಪುಡಿಗಟ್ಟಲಾಗಿದೆ. ಪಾಕಿಸ್ತಾನದ ನಾನಾ ಕಡೆಗಳಿಂದ ಡ್ರೋನ್‌ಗಳ ಅವಶೇಷಗಳನ್ನು ವಶಕ್ಕೆ ಪಡೆಯಲಾಗಿವೆ.ಪಾಕಿಸ್ತಾನದ ಸಶಸ್ತ್ರ ಪಡೆಗಳು ತಮ್ಮ ಸಾಫ್ಟ್-ಕಿಲ್ (ತಾಂತ್ರಿಕ) ಮತ್ತು ಹಾರ್ಡ್-ಕಿಲ್ (ಶಸ್ತ್ರಸಜ್ಜಿತ) ಕೌಶಲ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಭಾರತ ಕಳುಹಿಸಿದ್ದ 25 ಇಸ್ರೇಲ್ ನಿರ್ಮಿತ ಹರೋಪ್ ಡ್ರೋನ್‌ಗಳನ್ನು ಹೊಡೆದುರುಳಿಸಿವೆ" ಎಂದು ಸೇನೆ ತಿಳಿಸಿದೆ.