ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೀರಿಲ್ಲ, ಆಹಾರವಿಲ್ಲ, ಶೌಚಾಲಯವಿಲ್ಲ... ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಿಲುಕಿಕೊಂಡವರ ಹಾಹಾಕಾರ ಕೇಳುವವರಿಲ್ಲ

ಮುಂಬೈ- ಪುಣೆ ಎಕ್ಸ್‌ಪ್ರೆಸ್‌ವೇಯ ಖಂಡಾಲಾ ಘಾಟ್ ವಿಭಾಗದ ಅಡೋಶಿ ಸುರಂಗದ ಬಳಿ ಟ್ಯಾಂಕರ್ ಅಪಘಾತದಿಂದ ಉಂಟಾದ 32 ಗಂಟೆಗಳ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡವರು ನೀರು, ಆಹಾರ, ಶೌಚಾಲಯಕ್ಕಾಗಿ ಪರದಾಡಿದ ಘಟನೆ ನಡೆಯಿತು. ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಮುಂಜಾನೆ ಸಂಚಾರ ಪುನರಾರಂಭವಾದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.

ಸಂಗ್ರಹ ಚಿತ್ರ

ಮುಂಬೈ: ಮುಂಬೈ- ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ (Mumbai- Pune Expressway) ಟ್ಯಾಂಕರ್ ಅಪಘಾತದಿಂದ (tanker accident) ಉಂಟಾದ 32 ಗಂಟೆಗಳ ಟ್ರಾಫಿಕ್ ಜಾಮ್ (traffic jam) ನಲ್ಲಿ ಸಿಲುಕಿಕೊಂಡವರು ನೀರು, ಆಹಾರ, ಶೌಚಾಲಯಕ್ಕಾಗಿ ಪರದಾಡಿದ ಘಟನೆ ನಡೆಯಿತು. ಖಂಡಾಲಾ ಘಾಟ್ ವಿಭಾಗದ ಅಡೋಶಿ ಸುರಂಗದ ಬಳಿ ಪ್ರೊಪೈಲೀನ್ ಅನಿಲವನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ವೊಂದು ಉರುಳಿ ಬಿದ್ದಿದೆ. ಇದರ ಪರಿಣಾಮ ಸುಮಾರು 32 ಗಂಟೆಗಳ ಕಾಲ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ಒಂದು ದಿನಕ್ಕೂ ಹೆಚ್ಚು ಕಾಲ ರಸ್ತೆಯಲ್ಲಿ ಸಿಲುಕಿಕೊಂಡರು.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಅಧಿಕಾರಿಗಳು ಸಂಚಾರವನ್ನು ಪುನರಾರಂಭಿಸಲು ಸೂಚನೆ ನೀಡಿದರು. ಇದಕ್ಕೂ ಮೊದಲು ಟ್ಯಾಂಕರ್ ನಿಂದ ಅನಿಲ ವರ್ಗಾವಣೆ ಕಾರ್ಯವನ್ನು ಪೂರ್ಣಗೊಳಿಸಿ ಟ್ಯಾಂಕರ್ ಅನ್ನು ಸ್ಥಳದಿಂದ ತೆಗೆಯಲಾಯಿತು. ಪೊಲೀಸರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಟ್ರಾಫಿಕ್ ವಿಲೇವಾರಿಯಾಗುವಂತೆ ನೋಡಿಕೊಂಡರು. ಕೆಲವು ಗಂಟೆಗಳ ಬಳಿಕ ವಾಹನ ಸಂಚಾರ ಕಾರ್ಯ ಸ್ಥಿರಗೊಂಡಿತ್ತು.

ಸಂಸತ್‌ನಲ್ಲಿ ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್‌ ಸಂಚು? ಏಕಾಏಕಿ ಮೋದಿ ಭಾಷಣ ನಿಂತಿದ್ಯಾಕೆ?

ಈ ಕುರಿತು ಮಾಹಿತಿ ನೀಡಿದ ಹೆದ್ದಾರಿ ಪೊಲೀಸ್ ಅಧಿಕಾರಿಯೊಬ್ಬರು, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಅನೇಕರು ತಮ್ಮ ಯೋಜನೆಗಳು ಮುಂದೂಡಿದರು, ಕೆಲವರು ಪರ್ಯಾಯ ದಾರಿ ಆಯ್ಕೆ ಮಾಡಿಕೊಂಡರು. ಹೀಗಾಗಿ ಕೆಲವೇ ಗಂಟೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಯಿತು. ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ತಿಳಿಸಿದ್ದಾರೆ.



ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ 94.5 ಕಿಲೋಮೀಟರ್ ಉದ್ದವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿ ಅತಿಯಾದ ಸಂಚಾರ ದಟ್ಟಣೆ ಉಂಟಾಯಿತು. ಕೇರಳದ ಕೊಚ್ಚಿಯಿಂದ ಗುಜರಾತ್‌ನ ಸೂರತ್‌ಗೆ ಹೋಗುತ್ತಿದ್ದ ಟ್ಯಾಂಕರ್ ಮಂಗಳವಾರ ಪಲ್ಟಿಯಾಗಿದ್ದು, ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಇದರ ಪರಿಣಾಮ ಸಂಜೆ 5.15 ರ ಸುಮಾರಿಗೆ ಹೆದ್ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಮುಂಬೈಗೆ ಹೋಗುವ ಸಂಪೂರ್ಣ ಕ್ಯಾರೇಜ್‌ವೇಯನ್ನು ಸ್ಥಗಿತಗೊಳಿಸಿದರು.

ದೀರ್ಘಕಾಲ ರಸ್ತೆಯನ್ನು ತಡೆ ಮಾಡಿದ್ದರಿಂದ ಪುಣೆ ಮತ್ತು ಮುಂಬೈ ನಡುವಿನ ಹಲವಾರು ಬಸ್ ಸೇವೆಗಳು ರದ್ದಾಗಿದ್ದು, ಅನೇಕ ಪ್ರಯಾಣಿಕರು ಟರ್ಮಿನಲ್‌ಗಳಲ್ಲಿ ಮತ್ತು ಹೆದ್ದಾರಿಯಲ್ಲಿ ಸಿಲುಕಿಕೊಂಡರು. ಸ್ಥಳದಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ವಿಶೇಷ ರಾಸಾಯನಿಕ ಪ್ರತಿಕ್ರಿಯೆ ತಂಡ ಉಪಸ್ಥಿತರಿದ್ದು ಸಂಪೂರ್ಣ ಪರಿಸ್ಥಿತಿಯನ್ನು ನಿಯಂತ್ರಿಸಿತ್ತು.

Assault Case: ಮುಸ್ಲಿಂ ದಂಪತಿಯ ಸಹಾಯಕ್ಕೆ ಬಂದ ಹಿಂದೂ ಯುವಕನ ಮೇಲೆ ಎಸ್‌ಡಿಪಿಐ ಕಾರ್ಯಕರ್ತರಿಂದ ಹಲ್ಲೆ

ಘಟನೆ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತನಿಖೆಗೆ ಆದೇಶಿಸಿದ್ದಾರೆ. ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಶಿಫಾರಸುಗಳನ್ನೂ ಸಲ್ಲಿಸುವಂತೆ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author