ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

LPG Cylinder: ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಸಿಹಿ ಸುದ್ದಿ; ಸಿಲಿಂಡರ್‌ ಬೆಲೆ ಇಳಿಕೆ

ವಾಣಿಜ್ಯ ಸಿಲಿಂಡರ್‌ ಬೆಲೆಗಳಲ್ಲಿ ಕೊಂಚ ಇಳಿಕೆ ಕಂಡಿದೆ. 19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಬೆಲೆ 7ರೂ ಗಳಷ್ಟು ಇಳಿಕೆ ಕಂಡಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಕೊಂಚ ನೆಮ್ಮದಿ ದೊರೆಕಿದಂತಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಇಳಿಸಿವೆ

ಸಿಲಿಂಡರ್‌ ಬೆಲೆಯಲ್ಲಿ ಕೊಂಚ ಇಳಿಕೆ

LPG Cylinder -

Vishakha Bhat Heggar
Vishakha Bhat Heggar Feb 1, 2025 10:29 AM

ನವದೆಹಲಿ: ಕೇಂದ್ರ ಬಜೆಟ್‌ಗೂ ಮುನ್ನವೇ ಸರ್ಕಾರ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ (LPG Cylinder) ​ ಬೆಲೆ ಇಳಿಕೆ ಮಾಡಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಕೊಂಚ ನೆಮ್ಮದಿ ದೊರೆಕಿದಂತಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 7ರೂಪಾಯಿಗಳಷ್ಟು ಇಳಿಸಿವೆ. . ಪರಿಷ್ಕೃತ ಬೆಲೆಗಳು 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗೆ ಅನ್ವಯಿಸುತ್ತವೆ.

ಹೊಸ ಪರಿಷ್ಕರಣೆಯಲ್ಲಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 7 ರೂ. ಇಳಿಕೆಯಾಗಿದೆ. ಇದರ ಪರಿಣಾಮವಾಗಿ , ಫೆಬ್ರವರಿ 1 ರಿಂದ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ನ ಬೆಲೆ 1,804 ರೂಪಾಯಿಗಳಿಂದ 1,797 ರೂಪಾಯಿಗೆ ಇಳಿದಿದೆ. ಕೋಲ್ಕತ್ತಾದಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,911 ರೂಪಾಯಿಗಳಿಂದ 1,907 ರೂಪಾಯಿಗೆ ಇಳಿದಿದೆ. ಮುಂಬೈನಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ 1,749.50 ರೂಪಾಯಿಗಳಿಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಂದಿನಿಂದ 1,959.50 ರೂಪಾಯಿಗಳಾಗಿವೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಂದು 1,873.50 ರೂಪಾಯಿಗಳಾಗಿವೆ.



ವಾಣಿಜ್ಯ ಸಿಲೆಂಡರ್‌ಗಳನ್ನು ಹೆಚ್ಚಾಗಿ ಹೊಟೆಲ್‌ ಹಾಗೂ ರೆಸ್ಟರೊಂಟ್‌ಗಳಲ್ಲಿ ಬಳಸಲಾಗುತ್ತದೆ. ಇದರಿಂದ ರೆಸ್ಟೋರೆಂಟ್‌ಗಳು ತಮ್ಮ ಆಹಾರ ದರಗಳನ್ನು ಅಲ್ಪ ತಗ್ಗಿಸಬಹುದು.

ಈ ಹಿಂದೆ ಕಳೆದ ಡಿಸೆಂಬರ್‌ನಲ್ಲಿ ಈ ಸಿಲೆಂಡರ್‌ಗಳ ಬೆಲೆಯನ್ನು ಹೆಚ್ಚು ಮಾಡಲಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತಗ್ಗಿಸಲಾಗಿದ್ರೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ದೆಹಲಿಯಲ್ಲಿ 14.2 kg ದೇಶೀಯ ಸಿಲಿಂಡರ್ ಬೆಲೆ 803 ರೂಪಾಯಿನಷ್ಟೇ ಉಳಿದಿದೆ.