ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊಸ ಗೆಳತಿಗಾಗಿ ಅಣ್ಣನನ್ನೇ ದೂರ ಮಾಡಿದ್ರಾ ಹಾರ್ದಿಕ್‌ ಪಾಂಡ್ಯ?

hardik and krunal: ಈ ಹಿಂದೆ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದ ಹಾರ್ದಿಕ್‌ 2024 ರಲ್ಲಿ ಅವರಿಂದ ಬೇರೆಯಾಗಿದ್ದರು. ಬಳಿಕ ಹಾರ್ದಿಕ್‌ ಹೆಸರು ಮಹಿಕಾ ಜೊತೆ ಕೇಳಿ ಬಂದಿತ್ತು. ಬಳಿಕ ಹಾರ್ದಿಕ್‌ ತಮ್ಮ ರಿಲೇಶನ್‌ಶಿಪ್‌ ಕುರಿತು ಪೋಸ್ಟ್‌ ಹಾಕಿ ಕನ್ಪರ್ಮ್‌ ಮಾಡಿದ್ದರು. ಮಾಹಿಕಾ ಶರ್ಮಾ ಅವರು ಭಾರತೀಯ ಫ್ಯಾಷನ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿಕೊಂಡಿದ್ದಾರೆ.

ಹೊಸ ಗೆಳತಿಗಾಗಿ ಅಣ್ಣನನ್ನೇ ದೂರ ಮಾಡಿದ್ರಾ ಹಾರ್ದಿಕ್‌ ಪಾಂಡ್ಯ?

hardik and krunal -

Abhilash BC
Abhilash BC Mar 11, 2026 4:36 PM

ಮುಂಬಯಿ, ಮಾ.11: ಟೀಮ್‌ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಹಾಗೂ ಅವರ ಸಹೋದರ ಕೃನಾಲ್ ಪಾಂಡ್ಯ(hardik and krunal) ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಹಾರ್ದಿಕ್‌ ಹೊಸ ಗೆಳತಿ ಮಹಿಕಾ ಶರ್ಮಾ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಹಾರ್ದಿಕ್‌ ಹಾಗೂ ಕೃನಾಲ್ ಪಾಂಡ್ಯ ಇಬ್ಬರ ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಇಬ್ಬರೂ ಒಟ್ಟಿಗೆ ಇರುವ ಯಾವುದೇ ಪೋಸ್ಟ್‌ಗಳು ಇತ್ತೀಚಿನ ದಿನಗಳಲ್ಲಿ ಹಂಚಿಕೊಂಡಿಲ್ಲ. ಇದಕ್ಕೆ ಪುಷ್ಟಿ ಎಂಬಂತೆ ಭಾರತ ತಂಡವು 2026ರ ಟಿ20 ವಿಶ್ವಕಪ್ ಗೆದ್ದಾಗ ಅಹಮದಾಬಾದ್‌ನಲ್ಲಿ ನಡೆದ ಭರ್ಜರಿ ಸಂಭ್ರಮಾಚರಣೆಯಲ್ಲಿ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಹಾರ್ದಿಕ್‌ಗೆ ಅಭಿನಂದನಾ ಸಂದೇಶವನ್ನು ಅವರಿಬ್ಬರೂ ಪೋಸ್ಟ್ ಮಾಡಿಲ್ಲ. ಹೊಸ ಗೆಳತಿ ಮತ್ತು ಫ್ಯಾಷನ್ ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗಿನ ಹಾರ್ದಿಕ್‌ನ ವಿಶೇಷ ಬಾಂಧವ್ಯ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. 25 ವರ್ಷದ ಮಹೀಕಾ ಟಿ 20 ವಿಶ್ವಕಪ್‌ನಾದ್ಯಂತ 32 ವರ್ಷದ ಹಾರ್ದಿಕ್ ಜೊತೆ ಪ್ರಯಾಣಿಸುತ್ತಿದ್ದರು ಮತ್ತು ಕ್ರೀಡಾಂಗಣದಲ್ಲಿ ಅವರಿಗೆ ಉತ್ಸಾಹದಿಂದ ಹುರಿದುಂಬಿಸುತ್ತಿದ್ದರು. ಹಾರ್ದಿಕ್ ತನ್ನ ಎಲ್ಲಾ ಪ್ರವಾಸಗಳಲ್ಲಿ ಮಹೀಕಾ ಅವರೊಂದಿಗಿನ ಪೋಸ್ಟ್‌ ಹಂಚಿಕೊಂಡಿದ್ದಾರೆ.

WPL 2026: ಚೊಚ್ಚಲ ಅರ್ಧಶತಕ ಬಾರಿಸಿದ ಗೌತಮಿ ನಾಯಕ್‌ಗೆ ಹಾರ್ದಿಕ್‌ ಪಾಂಡ್ಯ ವಿಶೇಷ ಸಂದೇಶ!

ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನ ಬಳಿಕ ಹಾರ್ದಿಕ್‌ ಹಾಗೂ ಕೃನಾಲ್‌ ಸಂಬಂಧ ಹಳಸಿದೆ ಎನ್ನಲಾಗಿದೆ. ನತಾಶ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಅಂತರ ಉಂಟುಮಾಡಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಹಾರ್ದಿಕ್ ಪಾಂಡ್ಯ ಅಥವಾ ಕೃನಾಲ್ ಪಾಂಡ್ಯ ಇಬ್ಬರೂ ವದಂತಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ.

ಹಾರ್ದಿಕ್‌ ಗೆಳತಿ ಮಹಿಕಾ ಯಾರು?

ಈ ಹಿಂದೆ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದ ಹಾರ್ದಿಕ್‌ 2024 ರಲ್ಲಿ ಅವರಿಂದ ಬೇರೆಯಾಗಿದ್ದರು. ಬಳಿಕ ಹಾರ್ದಿಕ್‌ ಹೆಸರು ಮಹಿಕಾ ಜೊತೆ ಕೇಳಿ ಬಂದಿತ್ತು. ಬಳಿಕ ಹಾರ್ದಿಕ್‌ ತಮ್ಮ ರಿಲೇಶನ್‌ಶಿಪ್‌ ಕುರಿತು ಪೋಸ್ಟ್‌ ಹಾಕಿ ಕನ್ಪರ್ಮ್‌ ಮಾಡಿದ್ದರು. ಮಾಹಿಕಾ ಶರ್ಮಾ ಅವರು ಭಾರತೀಯ ಫ್ಯಾಷನ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿಕೊಂಡಿದ್ದಾರೆ. ಫ್ಯಾಷನ್ ಕ್ಷೇತ್ರದಲ್ಲಿ ಅವರು ಈಗಾಗಲೇ ಕೆಲವು ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡಿದ್ದಾರೆ.