ಚಂಡೀಗಢ: ಪಂಜಾಬ್‌ನ ಪಟಿಯಾಲದಲ್ಲಿ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಸೇನಾ ಅಧಿಕಾರಿ ಮತ್ತು ಅವರ ಮಗನನ್ನು ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಮಾರ್ಚ್ 13 ರಂದು ರಸ್ತೆಬದಿಯ ಉಪಾಹಾರ ಗೃಹದ ಹೊರಗೆ ನಡೆದಿದೆ. ಪೊಲೀಸರು ಸೇನಾಧಿಕಾರಿಯನ್ನು ಥಳಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ದೆಹಲಿಯ ಸೇನಾ ಪ್ರಧಾನ ಕಚೇರಿಯಲ್ಲಿ ನಿಯೋಜಿತರಾಗಿರುವ ಕರ್ನಲ್ ಪುಷ್ಪಿಂದರ್ ಬಾತ್ ಅವರ ಮೇಲೆ ಹಲ್ಲೆ (Assault Case) ನಡೆದಿದೆ ಎನ್ನಲಾಗಿದೆ. ಪುಷ್ಪಿಂದರ್ ಬಾತ್ ಸೇನಾ ಸಮವಸ್ತ್ರದಲ್ಲಿ ಇರಲಿಲ್ಲ. ನಾಗರಿಕ ಉಡುಪಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಕರ್ನಲ್ ಪುಷ್ಪಿಂದರ್ ಬಾತ್ ಅವರನ್ನು ತಮ್ಮ ವಾಹನವನ್ನು ಬೇರೆಡೆ ಸ್ಥಳಾಂತರಿಸಲು ಹೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ.
ಪೊಲೀಸ್ ಸಿಬ್ಬಂದಿ ಕರ್ನಲ್ ಬಾತ್ ಅವರನ್ನು ಹೊಡೆದಿದ್ದಾರೆ. ಆಗ ಕರ್ನಲ್ ಕೆಳಗೆ ಬಿದ್ದಿದ್ದಾರೆ. ನಂತರ ಪೊಲೀಸ್ ಪುಷ್ಪಿಂದರ್ ಅವರನ್ನು ಕಾಲಿನಿಂದ ಒದಿದ್ದಾರೆ. ಅವರ ಮಗ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ಅವನ ಮೇಲೂ ಹಲ್ಲೆ ನಡೆಸಿದರು. ಪೊಲೀಸ್ ಸಿಬ್ಬಂದಿ ಸೇನಾಧಿಕಾರಿಯ ಮೇಲೆ ಹಲ್ಲೆ ಮಾಡಲು ಬೇಸ್‌ಬಾಲ್ ಬ್ಯಾಟ್‌ಗಳನ್ನು ಬಳಸಿದ್ದಾರೆಂದು ವರದಿಯಾಗಿದೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಡಾ.ನಾನಕ್ ಸಿಂಗ್ ಮಾತನಾಡಿ, 12 ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊಚ್ಚಿಯ ತೃಕ್ಕಾಕರದಲ್ಲಿರುವ ಕೆಎಂಎಂ ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಕೆಡೆಟ್‌ಗಳಿಗೆ ಕ್ಯಾಂಪ್ ಆಯೋಜಿಸಿದ್ದ ವೇಳೆ ಸೇನಾ ಅಧಿಕಾರಿ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರು. ಪೊಲೀಸರು ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಕೆಎಂಎಂ ಕಾಲೇಜಿನಲ್ಲಿ ನಡೆದ ಎನ್‌ಸಿಸಿ ಕೆಡೆಟ್ ಶಿಬಿರದಲ್ಲಿ 21 ಕೇರಳ ಎನ್‌ಸಿಸಿ ಬೆಟಾಲಿಯನ್‌ನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಕರ್ನೇಲ್ ಸಿಂಗ್ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದರು. ಡಿಸೆಂಬರ್ 23 ರ ರಾತ್ರಿ 60 ಕ್ಕೂ ಹೆಚ್ಚು ಕೆಡೆಟ್‌ಗಳು ಕಲುಶಿತ ಆಹಾರ ಸೇವನೆಯ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಬಳಲುತ್ತಿದ್ದರು ಎಂದು ವರದಿಯಾದ ನಂತರ ಉದ್ವಿಗ್ನತೆ ಉಂಟಾಗಿತ್ತು. ಈ ಪರಿಸ್ಥಿತಿಯ ನಡುವೆ ಹಲ್ಲೆಯ ಘಟನೆ ಸಂಭವಿಸಿತ್ತು.
ಈ ಸುದ್ದಿಯನ್ನೂ ಓದಿ: Physical Assault: ಕರ್ನಲ್ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ: ಸೇನಾ ಬ್ರಿಗೇಡಿಯರ್ ವಿರುದ್ಧ ಎಫ್‌ಐಆರ್
ಶಿಬಿರವನ್ನು ಆಯೋಜಿಸುವ ಕಾಲೇಜಿಗೆ ಅತಿಕ್ರಮವಾಗಿ ಪ್ರವೇಶಿಸಿದ ನಂತರ, ನಿಲ್ಲಿಸಿ, ಬೆದರಿಕೆ ಹಾಕಿದರು, ನಂತರ ರಾತ್ರಿ 11.30 ರ ಸುಮಾರಿಗೆ ಶಿಬಿರದ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಕರ್ನೆಯಿಲ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು.