Physical Assault: ಕರ್ನಲ್ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ: ಸೇನಾ ಬ್ರಿಗೇಡಿಯರ್ ವಿರುದ್ಧ ಎಫ್‌ಐಆರ್
ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ ಸೇನಾ ಬ್ರಿಗೇಡಿಯರ್ ಒಬ್ಬರ ಮೇಲೆ ಕಿರಿಯ ಅಧಿಕಾರಿಯ ಪತ್ನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಮೇಘಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿಲ್ಲಾಂಗ್‌ನಲ್ಲಿ ಕರ್ನಲ್ ಆಗಿರುವ ಅಧಿಕಾರಿಯ ಪತ್ನಿ ಕಳೆದ ಸೋಮವಾರ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಯ ಅನುಚಿತ ಹೇಳಿಕೆಗಳು, ಮತ್ತು ಬೆದರಿಕೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಶಿಲ್ಲಾಂಗ್: ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ ಸೇನಾ ಬ್ರಿಗೇಡಿಯರ್ ಒಬ್ಬರ ಮೇಲೆ ಕಿರಿಯ ಅಧಿಕಾರಿಯ ಪತ್ನಿ ಲೈಂಗಿಕ ಕಿರುಕುಳ (Physical Assault) ಆರೋಪ ಮಾಡಿದ್ದಾರೆ. ಮೇಘಾಲಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. , ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಭಾರತೀಯ ಸೇನೆಯಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಶಿಲ್ಲಾಂಗ್‌ನಲ್ಲಿ ಕರ್ನಲ್ ಆಗಿರುವ ಅಧಿಕಾರಿಯ ಪತ್ನಿ ಕಳೆದ ಸೋಮವಾರ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಯ ಅನುಚಿತ ಹೇಳಿಕೆಗಳು, ಮತ್ತು ಬೆದರಿಕೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಮಾರ್ಚ್ 8 ರಂದು ಅಧಿಕಾರಿಗಳ ಮೆಸ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬ್ರಿಗೇಡಿಯರ್ ತನ್ನ ಬಗ್ಗೆ ಪದೇ ಪದೇ ಅನುಚಿತ ಹೇಳಿಕೆಗಳನ್ನು ಬಳಸುತ್ತಿದ್ದರು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ನಾನು ಸಾಧ್ಯವಾದಷ್ಟು ಅವರ ಬಳಿ ಮಾತನಾಡುವುದನ್ನು ತಪ್ಪಿಸಲು ಬಯಸಿದ್ದೆ ಆದರೆ ಅವರು ಅನುಚಿತವಾಗಿ ವರ್ತಿಸಿದ್ದಾರೆ ಹಾಗೂ ನನ್ನ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬ್ರಿಗೇಡಿಯರ್ ತನ್ನ ಪತಿಯನ್ನು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದರು. ಆರೋಪಿ ತನ್ನ ನೆರೆಹೊರೆಯವನು ಎಂದು ಹೇಳುತ್ತಾ, ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ. ಏಪ್ರಿಲ್ 13, 2024 ರಂದು ಸಹೋದ್ಯೋಗಿಯೊಬ್ಬರು ಆಯೋಜಿಸಿದ್ದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ತನ್ನ ಉಡುಪಿನ ಬಗ್ಗೆ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಅವರು ತಮ್ಮ ದೂರಿನಲ್ಲಿ ಮತ್ತೊಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಎರಡು ತಿಂಗಳ ನಂತರ ನಮ್ಮ ಮನೆಯಲ್ಲಿ ನಾವು ಔತಣಕೂಟ ಆಯೋಜಿಸಿದ್ದೆವು ಆಗ ಆರೋಪಿ ನನ್ನ ಪತಿಯ ಎದರುರೇ ನನ್ನ ಕೈಯನ್ನು ಹಿಡಿದುಕೊಂಡಿದ್ದರು ಮಹಿಳೆ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕಾಲೇಜು ಪ್ರಿನ್ಸಿಪಾಲ್ ಅರೆಸ್ಟ್
ಈ ಘಟನೆಗಳಿಂದ ತಾನು ಆಘಾತಕ್ಕೊಳಗಾಗಿದ್ದೇನೆ, ಇದರಿಂದಾಗಿ ಪೊಲೀಸರೊಂದಿಗೆ ಮೊದಲು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಮಹಿಳೆ ಹೇಳಿದರು. ಆಕೆಯ ಆರೋಪಗಳ ಆಧಾರದ ಮೇಲೆ, ಪೊಲೀಸರು ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ದಾಖಲಿಸಿದ್ದಾರೆ.