ಅಹಮದಾಬಾದ್: ನಿರಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕನ ಶ್ವಾಸನಾಳದಲ್ಲಿ ಎಲ್‌ಇಡಿ ಬಲ್ಬ್ (LED bulb in child’s windpipe) ಸಿಲುಕಿಕೊಂಡಿದ್ದ ಆಘಾತಕಾರಿ ಘಟನೆ ನಡೆದಿದೆ. ಇದನ್ನು ಕಂಡು ವೈದ್ಯರೇ ದಂಗಾಗಿ ಹೋಗಿದ್ದಾರೆ. ಗುಜರಾತ್‌ನ (Gujarat) ವಡೋದರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಗುವಿನ ಕುಟುಂಬಸ್ಥರು ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಭೇಟಿ ನೀಡಿದ್ದಾರೆ. ಆ ಮಗು ತೀವ್ರ ಜ್ವರ ಮತ್ತು ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಲೇ ಇತ್ತು. ವಾರಗಳ ಕಾಲ ಚಿಕಿತ್ಸೆ ಫಲಕಾರಿಯಾಗದ ನಂತರ, ವೈದ್ಯರು ಆರಂಭದಲ್ಲಿ ಸಾಮಾನ್ಯ ಉಸಿರಾಟದ ಸೋಂಕು ಆಗಿರಬಹುದು ಎಂದು ಊಹಿಸಿದ್ದರು. ಆದರೆ, ಅದು ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಸಣ್ಣ ಎಲ್ಇಡಿ ಬಲ್ಬ್ ಎಂಬುದನ್ನು ಬಳಿಕ ಪತ್ತೆಮಾಡಿದರು.
ವಡೋದರಾದ ಮಲ್ಸರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಆರಂಭದಲ್ಲಿ ಬಾಲಕನಿಗೆ ನ್ಯುಮೋನಿಯಾಗೆ ಚಿಕಿತ್ಸೆ ನೀಡಿದರು. ಆದರೆ ಅವನ ಸ್ಥಿತಿ ಸುಧಾರಿಸದಿದ್ದಾಗ, ಕುಟುಂಬವು ಅವನನ್ನು ಗೋತ್ರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿತು.
ರೇಜರ್, ಸ್ಟ್ರಾ, ಮೊಬೈಲ್ ಟಾರ್ಚ್; ಮೂರೇ ವಸ್ತು ಬಳಸಿ ರಸ್ತೆಬದಿಯಲ್ಲೇ ಸರ್ಜರಿ ಮಾಡಿದ ವೈದ್ಯರು! ಏನಿದು ಘಟನೆ?
ಆಸ್ಪತ್ರೆಯ ಇಎನ್‌ಟಿ ವಿಭಾಗದ ವೈದ್ಯರು ಕೂಲಂಕಷ ಪರೀಕ್ಷೆ ನಡೆಸಿದಾಗ ಬಾಲಕನ ಶ್ವಾಸನಾಳದಲ್ಲಿ ಅಪರಿಚಿತ ವಸ್ತುವಿನಿಂದಾಗಿ ಬಾಲಕ ಬಳಲುತ್ತಿದ್ದಾನೆ ಎಂದು ಕಂಡುಬಂದಿದೆ. ವೈದ್ಯರು ಬ್ರಾಂಕೋಸ್ಕೋಪಿ ವಿಧಾನವನ್ನು ನಡೆಸಿ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಎಲ್‌ಇಡಿ ಬಲ್ಬ್ ಅನ್ನು ಹೊರತೆಗೆದರು.
ಪರೀಕ್ಷೆಯ ಸಮಯದಲ್ಲಿ ಶ್ವಾಸನಾಳದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಎಕ್ಸ್-ರೇ ಮಾಡಿದಾಗ ಏನೋ ವಸ್ತುವಿದೆ ಎಂಬುದು ಗೋಚರಿಸಿತು. ಹೀಗಾಗಿ ಬ್ರಾಂಕೋಸ್ಕೋಪ್ ಮೂಲಕ ಪರೀಕ್ಷೆ ಮಾಡಲಾಯಿತು. ಈ ವೇಳೆ ಸಣ್ಣ ಲೋಹದ ತುಂಡುವಿನಂತೆ ಕಾಣುವ ವಸ್ತು ಗಮನಕ್ಕೆ ಬಂತು ಎಂದು ಗೋತ್ರಿಯ ಜಿಎಂಇಆರ್ಎಸ್ ಆಸ್ಪತ್ರೆಯ ಇಎನ್‌ಟಿ ಮುಖ್ಯಸ್ಥ ಡಾ. ಹಿರೇನ್ ಸೋನಿ ಹೇಳಿದ್ದಾರೆ.
ಮಗು ಒಂದೂವರೆ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಅದರ ಮೇಲೆ ಚರ್ಮ ಬೆಳೆದಿತ್ತು. ಆಧುನಿಕ ಉಪಕರಣಗಳ ಸಹಾಯದಿಂದ, ಒಂದು ಸೆಂಟಿಮೀಟರ್‌ನ ಬಲ್ಬ್ ಅನ್ನು ತೆಗೆದುಹಾಕಲು ನಮಗೆ ಸಾಧ್ಯವಾಯಿತು. ಮಗುವಿನ ಶ್ವಾಸನಾಳದಲ್ಲಿ ಎಲ್‌ಇಡಿ ಬಲ್ಬ್ ಸಿಕ್ಕಿಹಾಕಿಕೊಂಡಿತ್ತು. ಈಗ, ಬಲ್ಬ್ ಅನ್ನು ಹೊರತೆಗೆದ ನಂತರ, ಮಗು ಆರೋಗ್ಯವಾಗಿದೆ ಎಂದು ಡಾ. ಸೋನಿ ಹೇಳಿದರು.
ಗಾಜಿಯಾಬಾದ್ ತ್ರಿವಳಿ ಸಹೋದರಿಯರ ಆತ್ಮಹತ್ಯಾ ಪ್ರಕರಣ
ಆಟದ ವ್ಯಸನದಿಂದಾಗಿ ಗಾಜಿಯಾಬಾದ್‌ನ ಮೂವರು ಸಹೋದರಿಯರ ಆತ್ಮಹತ್ಯೆ ಇಡೀ ದೇಶವನ್ನೇ ಆಘಾತಗೊಳಿಸಿದೆ. ಈ ಪ್ರಕರಣದ ಕುರಿತು ಮನೋವೈದ್ಯ ಡಾ. ಆಶಿಶ್ ಬನ್ಸಾಲ್ ಅವರು ಮಾತನಾಡಿದರು. ಆನ್‌ಲೈನ್ ಆಟಗಳು ಮಕ್ಕಳ ಮೆದುಳಿನ ಮೇಲೆ ಹೇಗೆ ಆಳವಾದ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ವಿವರಿಸಿದರು.
ಇಂದು, ಮೊಬೈಲ್ ಫೋನ್‌ಗಳು ಮಕ್ಕಳ ಸಾಮಾಜಿಕ ಗುರುತಿನ ಸಾಧನವಾಗಿ ಮಾರ್ಪಟ್ಟಿವೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ಹತ್ತು ಮಕ್ಕಳಲ್ಲಿ ಇಬ್ಬರು ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಡಿಜಿಟಲ್ ಗಡಿಗಳನ್ನು ನಿಗದಿಪಡಿಸುವ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಫೋನ್ ವ್ಯಸನದಿಂದ ಹೇಗೆ ರಕ್ಷಿಸಬಹುದು ಎಂಬುದನ್ನು ಡಾ. ಬನ್ಸಾಲ್ ವಿವರಿಸಿದರು.
ನಮ್ಮ ಮಿದುಳುಗಳು ಡೋಪಮೈನ್ ಎಂಬ ರಾಸಾಯನಿಕವನ್ನು ಹೊಂದಿರುತ್ತವೆ, ಇದು ಪ್ರೇರಣೆ ಮತ್ತು ಸಂತೋಷದೊಂದಿಗೆ ಸಂಬಂಧಿಸಿದೆ. ಬಾಲ್ಯದಲ್ಲಿ ಉತ್ತಮ ಅಂಕಗಳಿಗಾಗಿ ಪ್ರತಿಫಲಗಳಿಂದ ನಾವು ಅನುಭವಿಸುವ ಸಂತೋಷವು ಡೋಪಮೈನ್‌ಗೆ ಸಂಬಂಧಿಸಿದೆ. ಅದೇ ರೀತಿ, ಮಗುವು ಪದೇ ಪದೇ ಮೊಬೈಲ್ ಪರದೆಯನ್ನು ನೋಡಿದಾಗ ಅಥವಾ ಆಟಗಳನ್ನು ಆಡಿದಾಗ, ಮೆದುಳಿಗೆ ಡೋಪಮೈನ್ ನಿರಂತರವಾಗಿ ಸಿಗುತ್ತದೆ ಮತ್ತು ಅದು ವ್ಯಸನಕಾರಿಯಾಗುತ್ತದೆ.