ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ (Operation Sindoor) ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಕುರಿತು ಸೇನೆ ಹಲವು ವಿಡಿಯೋಗಳನ್ನು ಹಂಚಿಕೊಂಡಿದೆ. ಪಾಕಿಸ್ತಾನದ ಭೂಪ್ರದೇಶದೊಳಗಿನ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳ ಮೇಲೆ ಭಾರತ ನಡೆಸಿದ ಗುಂಡಿನ ದಾಳಿಯಿಂದ ಪಾಕಿಸ್ತಾನ ರೇಂಜರ್‌ಗಳು ಪಲಾಯನ ಮಾಡುತ್ತಿರುವುದನ್ನು ತೋರಿಸುವ ಆಪರೇಷನ್ ಸಿಂದೂರ್‌ನ ಹೊಸ ದೃಶ್ಯಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಿಡುಗಡೆ ಮಾಡಿದೆ. ಮಂಗಳವಾರ ಸಾರ್ವಜನಿಕವಾಗಿ ಬಿಡುಗಡೆಯಾದ ಈ ವೀಡಿಯೊ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗೆ 2.2 ಕಿಲೋಮೀಟರ್ ವರೆಗಿನ ಮೂರು ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ನಿಖರ ದಾಳಿಗಳು ಮತ್ತು ಗಡಿಯಾಚೆಗಿನ ಪಾಕಿಸ್ತಾನಿ ಸೇನಾ ನೆಲೆಗಳ ನಾಶವನ್ನು ತೋರಿಸುತ್ತದೆ.
ನಾವು ಮೇ 9 ಮತ್ತು 10 ರ ಮಧ್ಯರಾತ್ರಿ ಗಡಿಯ ಬಳಿ ಲಷ್ಕರ್‌ನ ಲೂನಿ ಭಯೋತ್ಪಾದಕ ಉಡಾವಣಾ ಪ್ಯಾಡ್ ಅನ್ನು ನಾಶಪಡಿಸಿದ್ದೇವೆ" ಎಂದು ಜಮ್ಮುವಿನ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಶಶಾಂಕ್ ಆನಂದ್ ಹೇಳಿದರು. "ಆರ್‌ಎಸ್ ಪುರ ಸೆಕ್ಟರ್‌ನ ಎದುರಿನ ಮಸ್ತ್‌ಪುರ್ ಎಂಬ ಮತ್ತೊಂದು ಉಡಾವಣಾ ಪ್ಯಾಡ್ ಅನ್ನು ಸಹ ನಾವು ನಾಶಪಡಿಸಿದ್ದೇವೆ. ನಮ್ಮ ಕಾರ್ಯಾಚರಣೆಯ ಸಮಯದಲ್ಲಿ, ಪಾಕಿಸ್ತಾನಿ ರೇಂಜರ್‌ಗಳು ಓಡಿಹೋಗುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಮೇ 10 ರ ಬೆಳಿಗ್ಗೆ ಭಾರತವು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಇದು ಸೇಡಲ್ಲ, ಇದೇ ನ್ಯಾಯ ; ಪಾಕ್ ಮೇಲಿನ ದಾಳಿಯ ಮತ್ತೊಂದು ವಿಡಿಯೋ ಶೇರ್ ಮಾಡಿದ ಸೇನೆ
ಮೇ 18 ರಂದು ಭಾರತೀಯ ಸೇನೆಯು ಆಪರೇಷನ್ ಸಿಂಧೂರ್‌ನ ಹೊಸ ವಿಡಿಯೋ ಹಂಚಿಕೊಂಡಿತ್ತು. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ (ಪಶ್ಚಿಮ ವಲಯ) ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು 'ನ್ಯಾಯ ಸಿಕ್ಕಿದೆ' ಎಂದು ಪೋಸ್ಟ್ ಮಾಡಿದೆ. ಯೋಜನೆ, ಅಭ್ಯಾಸ ಹಾಗೂ ಕಾರ್ಯಾಚರಣೆ ನಡೆದಿರುವ ಬಗ್ಗೆ ಪೋಸ್ಟ್ ಮಾಡಲಾಗಿದೆ. ಹತ್ತಾರು ವರ್ಷಗಳಿಂದ ಪಾಠ ಕಲಿಯದ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ್ ಸರಿಯಾದ ಪಾಠವಾಗಿದೆ ಎಂದು ಭದ್ರತಾ ಪಡೆಯ ಸಿಬ್ಬಂದಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. 'ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದಾಗಿ ಎಲ್ಲವೂ ಶುರುವಾಯ್ತು. ಕೋಪವು ಜ್ವಾಲಾಮುಖಿಯಂತೆ ಹೆಪ್ಪು ಗಟ್ಟಿತ್ತು. ಈಗ ನಡೆದಿರುವ ಪ್ರತೀಕಾರವಲ್ಲ, ನ್ಯಾಯ ಕೊಡಲಾಗಿದೆ. ಮೇ 9ರಂದು ರಾತ್ರಿ 9 ಗಂಟೆ ಸುಮಾರಿಗೆ ಕದನ ವಿರಾಮ ಉಲ್ಲಂಘಿಸಿದ ಶತ್ರು ಪಡೆಯ ಪೋಸ್ಟ್‌ಗಳನ್ನು ಭಾರತೀಯ ಸೇನೆಯು ಉಡಾಯಿಸಿದೆ. ಆಪರೇನ್ ಸಿಂದೂರ್ ಬರಿಯ ಕಾರ್ಯಾಚರಣೆಯಲ್ಲ. ಪಾಕಿಸ್ತಾನಕ್ಕೆ ಅದೊಂದು ದೊಡ್ಡ ಪಾಠ' ಎಂದಿದ್ದಾರೆ