Operation Sindoor: ಇದು ಸೇಡಲ್ಲ, ಇದೇ ನ್ಯಾಯ ; ಪಾಕ್ ಮೇಲಿನ ದಾಳಿಯ ಮತ್ತೊಂದು ವಿಡಿಯೋ ಶೇರ್ ಮಾಡಿದ ಸೇನೆ
ಆಪರೇಷನ್ ಸಿಂದೂರ್ (Operation Sindoor) ಅಡಿಯಲ್ಲಿ ನಡೆಸಲಾದ ಮಿಲಿಟರಿ ಕಾರ್ಯಾಚರಣೆಯ ಹೊಸ ದೃಶ್ಯಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಸೇನೆಯ ವೆಸ್ಟರ್ನ್ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ ಪಾಕಿಸ್ತಾನಿ ಪ್ರದೇಶ ಮತ್ತು ಗಡಿಯುದ್ದಕ್ಕೂ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಶೆಲ್ ದಾಳಿ ಮತ್ತು ಕ್ಷಿಪಣಿ ದಾಳಿಯ ದೃಶ್ಯಗಳಿವೆ.


ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಅಡಿಯಲ್ಲಿ ನಡೆಸಲಾದ ಮಿಲಿಟರಿ ಕಾರ್ಯಾಚರಣೆಯ ಹೊಸ ದೃಶ್ಯಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಇದು ನ್ಯಾಯವಾಗಿದೆಯೇ ಹೊರತು 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತೀಕಾರವಲ್ಲ ಎಂದು ಹೇಳಿದೆ. ಸೇನೆಯ ವೆಸ್ಟರ್ನ್ ಕಮಾಂಡ್ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮೇ 7 ಮತ್ತು ನಂತರದ ದಾಳಿಗಳ ಭಾಗವಾಗಿ ಪಾಕಿಸ್ತಾನದ ಭೂಪ್ರದೇಶದ ಮೇಲೆ ಮಿಲಿಟರಿ ಗುಂಡು ಹಾರಿಸುವುದನ್ನು ತೋರಿಸಲಾಗಿದೆ.
ಸೇನೆಯ ವೆಸ್ಟರ್ನ್ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ ಪಾಕಿಸ್ತಾನಿ ಪ್ರದೇಶ ಮತ್ತು ಗಡಿಯುದ್ದಕ್ಕೂ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಶೆಲ್ ದಾಳಿ ಮತ್ತು ಕ್ಷಿಪಣಿ ದಾಳಿಯ ದೃಶ್ಯಗಳಿವೆ. ಒಬ್ಬ ಸೈನಿಕನ ಧ್ವನಿ ಕೂಡ ಕೇಳಿ ಬಂದಿದೆ. ಇದು ಕೋಪವಲ್ಲ, ಬದಲಾಗಿ ನೆನಪಿನಲ್ಲಿ ಉಳಿಯುವ ಪಾಠ ಕಲಿಸುವ ಸಂಕಲ್ಪ. ಇದು ಪ್ರತೀಕಾರವಲ್ಲ ನ್ಯಾಯ ಎಂದು ಹೇಳುವುದನ್ನು ಕೇಳಬಹುದು.
#StrongAndCapable#OpSindoor
— Western Command - Indian Army (@westerncomd_IA) May 18, 2025
Planned, trained & executed.
Justice served.@adgpi@prodefencechan1 pic.twitter.com/Hx42p0nnon
ಯೋಜನೆ, ತರಬೇತಿ, ಕಾರ್ಯರೂಪ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ 25 ಪ್ರವಾಸಿಗರು ಸೇರಿದಂತೆ 26 ನಾಗರಿಕರು ಸಾವನ್ನಪ್ಪಿದ ಕೇವಲ ಎರಡು ವಾರಗಳ ನಂತರ, ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು . ಈ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಮೇ 10 ರಂದು ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಯಿತು.
ಈ ಸುದ್ದಿಯನ್ನೂ ಓದಿ: Jyoti Malhotra: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಯುಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೆರೆ; ಯಾರಳಿವಳು? ಏನಿವಳ ಹಿನ್ನೆಲೆ?
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನದ ನಡುವೆ ಇರುವ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ , ಅಮೆರಿಕದ ಕಂಪನಿಯೊಂದು ತೆಗೆದ ಉಪಗ್ರಹ ಫೋಟೋಗಳು ವೈರಲ್ ಆಗಿದ್ದವು. ಪಾಕಿಸ್ತಾನದ 11 ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮೂಲಕ ಉಗ್ರರ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಬಹಾವಲ್ಪುರದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು 2015 ರಿಂದ ಕಾರ್ಯನಿರ್ವಹಿಸುತ್ತಿರುವ ಮರ್ಕಜ್ ಸುಭಾನ್ ಅಲ್ಲಾಹ್ ಅನ್ನು ಗುರಿಯಾಗಿಸಿಕೊಂಡವು, ಇದು ಜೈಶ್-ಎ-ಮೊಹಮ್ಮದ್ (ಜೆಎಂ) ನ ತರಬೇತಿ ಮತ್ತು ಬೋಧನೆಗಾಗಿ ಪ್ರಮುಖ ಕೇಂದ್ರವಾಗಿದೆ ಎಂದು ತಿಳಿದು ಬಂದಿತ್ತು.