ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Open Prisons: ಇಲ್ಲಿ ಕತ್ತಲೆ ಕೋಣೆಗಳಿಲ್ಲ...ಕೈದಿಗಳಿಗೆ ಸ್ಟ್ರಿಕ್ಟ್‌ ರೂಲ್ಸ್‌ ಇಲ್ಲ... ಹೊರಗಡೆ ಹೋಗೋಕೂ ನಿರ್ಬಂಧವಿಲ್ಲ... ಇದು ಓಪನ್‌ ಜೈಲು!

Open Prisons: ಒಂದು ಕಾರಾಗೃಹ ಹೇಗಿರಬಹುದು ಊಹಿಸಿಕೊಳ್ಳಿ. ಕತ್ತಲೆ ಮತ್ತು ಇಕ್ಕಟ್ಟಾದ ಕೋಣೆ, ಆಯ್ಕೆಯೇ ಇಲ್ಲದ ಊಟ, ಯಾವಾಗ ಏನಾಗಬಹುದು ಎಂಬ ಭಯ ತುಂಬಿದ ವಾತಾವರಣ... ಕಾರಾಗೃಹದ ಈ ಪರಿಕಲ್ಪನೆಯನ್ನು ಬದಲಿಸುವ ಒಂದು ವ್ಯವಸ್ಥೆಯನ್ನು ತರಲು ಹೈಕೋರ್ಟ್ ಮುಂದಾಗಿದ್ದು, ಮುಕ್ತ ಕಾರಾಗೃಹವನ್ನು ಪರಿಚಯಿಸುತ್ತಿದೆ.

ದೇಶದಲ್ಲಿವೆ ಅನೇಕ ಮುಕ್ತ ಕಾರಾಗೃಹ (ಸಾಂದರ್ಭಿಕ ಚಿತ್ರ)

ನವದೆಹಲಿ: ಇತ್ತೀಚೆಗ ದೆಹಲಿ ಹೈಕೋರ್ಟ್(Dehali Highcourt) ನೀಡಿರುವ ಒಂದು ತೀರ್ಪಿನಿಂದಾಗಿ(Judgement) ದೇಶಾದ್ಯಂತ ಮುಕ್ತ ಕಾರಾಗೃಹ(Open Prision)ವಿಚಾರಕ್ಕೆ ಸಂಬಂಧಿಸಿದ ಚರ್ಚೆಯೊಂದು ಮುನ್ನಲೆಗೆ ಬಂದಿದೆ. ಮುಕ್ತ ಕಾರಾಗೃಹಗಳಲ್ಲಿ ಇರುವ ಖೈದಿಗಳಿಗೆ ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದಂತೆ ಒಂದು ನಿರ್ಧಿಷ್ಟ ಕಾರ್ಯ ನಿರ್ವಹಣಾ ವಿಧಾನ (ಎಸ್.ಒ.ಪಿ.)ವನ್ನು ಎಂಟು ವಾರಗಳೊಳಗಾಗಿ ರೂಪಿಸುವಂತೆ ನ್ಯಾಯಾಲಯವು ಮಹಾ ನಿರ್ದೆಶಕರು (ಕಾರಾಗೃಹ) ಇವರಿಗೆ ನಿರ್ದೇಶನವನ್ನು ನೀಡಿದೆ.

ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ನೀಡಿರುವ ಈ ನಿರ್ದೇಶನದಲ್ಲಿ, ಎಸ್.ಒ.ಪಿ.ಯು ಒಂದೋ ಜೈಲಿನ ನಿಯಮಾವಳಿಗನುಗುಣವಾಗಿ ಖೈದಿಗಳಿಗೆ ಮೊಬೈಲ್ ಫೋನನ್ನು ಇಟ್ಟುಕೊಳ್ಳಲು ಅನುಮತಿ ಕೊಡಬೇಕು ಅಥವಾ ಖೈದಿಗಳು ಒಳ ಬರುವ ಸಂದರ್ಭದಲ್ಲಿ ಅವುಗಳನ್ನು ಡಿಪಾಸಿಟ್ ಮಾಡಿ, ಬಳಿಕ ಅವರು ಹೊರ ಹೋಗುವ ಸಂದರ್ಭದಲ್ಲಿ ಅದನ್ನು ಅವರಿಗೆ ಮರಳಿಸುವ ವ್ಯವಸ್ಥೆಯನ್ನು ರೂಪಿಸುವಂತೆ ಅವರು ಸೂಚಿಸಿದ್ದಾರೆ.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ಈ ನಿರ್ದೇಶನ ಬಂದಿದ್ದು, ಆ ಖೈದಿ 2020ರಲ್ಲಿ ಬಂದಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಆತನನ್ನು ಇತ್ತೀಚೆಗಷ್ಟೇ ಮುಕ್ತ ಕಾರಾಗೃಹದಿಂದ ನೈಜ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಇತ್ತ ತಪಾಸಣೆ ಸಂದರ್ಭದಲ್ಲಿ ಈ ಖೈದಿಯ ಬಳಿಯಲ್ಲಿ ಒಂದು ಮೊಬೈಲ್ ಫೋನು, ಎರಡು ಸಿಮ್ ಕಾರ್ಡ್ ಗಳು ಮತ್ತು ಎರಡು ಚಾರ್ಜರ್ ಗಳು ಪತ್ತೆಯಾಗುತ್ತವೆ. ಹಾಗಾಗಿ ಈತನಿಗಿದ್ದ ಮುಕ್ತ ಕಾರಾಗೃಹದ ಸೌಲಭ್ಯವನ್ನು ತೆರವುಗೊಳಿಸಿ ಈತನನ್ನು ಹೆಚ್ಚು ನಿಗಾ ಇರುವ ಕೊಠಡಿಗೆ ವರ್ಗಾಯಿಸಲಾಗುತ್ತದೆ.

ಈ ಸುದ್ದಿಯನ್ನು ಓದಿ: Viral News: ಮೃತಪಟ್ಟಿದ್ದಾನೆಂದು ಸಮಾಧಿ ಮಾಡಿದ ಪೋಷಕರು: ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷನಾದ ಮಗ!

ಮುಕ್ತ ಕಾರಾಗೃಹದಲ್ಲಿ ಯಾರನ್ನು ಇರಿಸಲಾಗುತ್ತದೆ?

ಕಡಿಮೆ ಅಪಾಯದ ಖೈದಿಗಳನ್ನು, ಸನ್ನಡತೆ ತೋರಿದ ಖೈದಿಗಳನ್ನು ಸಾಮಾನ್ಯವಾಗಿ ಮುಕ್ತ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ಇವರಿಗೆ ಜೈಲು ಆವರಣದಿಂದ ಹೊರ ಹೋಗುವ ಸ್ವಾತಂತ್ರ್ಯವಿರುತ್ತದೆ ಮಾತ್ರವಲ್ಲದೇ ಕೆಲವರಿಗೆ ಶಿಕ್ಷಣ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವ ಮುಕ್ತ ಅವಕಾಶವನ್ನು ನೀಡಲಾಗುತ್ತದೆ.
ಪಶ್ಚಿಮ ಬಂಗಾಲದಲ್ಲಿ ಜೈಲು ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದು ಮುಕ್ತ ಕಾರಾಗೃಹಕ್ಕೆ ವರ್ಗಾವಣೆಗೊಳ್ಳಲು ಅರ್ಹತೆಯನ್ನು ಹೊಂದಿರುವ ಖೈದಿಗಳ ದಾಖಲೆಗಳನ್ನು ಪರಿಶೀಲಿಸಿ ಬಳಿಕ ನಿರ್ಧಾರವನ್ನು ಪ್ರಕಟಿಸುತ್ತಾರೆ. ಹಾಗೆಯೇ, ರಾಜಸ್ಥಾನದಲ್ಲಿ ಖೈದಿಗಳು ಮುಕ್ತ ಕಾರಾಗೃಹದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅವರು ತಮ್ಮ ಶಿಕ್ಷಾವಧಿಯ ಮೂರನೇ ಒಂದು ಭಾಗವನ್ನು ಪೂರ್ಣಗೊಳಿಸಿರಬೇಕೆಂಬ ನಿಯಮವಿದೆ.

ಮುಕ್ತ ಕಾರಾಗೃಹಗಳು ಹೇಗಿರುತ್ತವೆ?

ಸಾಂಪ್ರದಾಯಿಕ ಜೈಲುಗಳಂತಲ್ಲದೆ, ಮುಕ್ತ ಕಾರಾಗೃಹಗಳು ಖೈದಿಗಳ ಪುನರ್ವಸತಿಗೆ ಆದ್ಯತೆಯನ್ನು ನೀಡುತ್ತದೆ. ಅಲ್ಲಿ ಭದ್ರತಾ ನಿಯಮಾವಳಿಗೆಳಲ್ಲಿ ಒಂದಷ್ಟು ಸಡಿಲಿಕೆಯಿರುತ್ತದೆ, ಖೈದಿಗಳ ಮೇಲೆ ನಂಬಿಕೆ ಇರಿಸಲಾಗುತ್ತದೆ. ವರದಿಗಳ ಪ್ರಕಾರ ಕೆಲವೊಂದು ರಾಜ್ಯಗಳಲ್ಲಿರುವ ಮುಕ್ತ ಕಾರಾಗೃಹಗಳಲ್ಲಿರುವ ಖೈದಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸಿಸಲೂ ಸಹ ಅವಕಾಶವನ್ನು ಮಾಡಿಕೊಡಲಾಗುತ್ತದೆ ಮತ್ತು ಅವರಿಗೆ ಸಂಪಾದಿಸುವ ಅವಕಾಶವನ್ನು ನೀಡಲಾಗುತ್ತದೆ.

ಪಶ್ಚಿಮ ಬಂಗಾಲದ ಮುಕ್ತ ಕಾರಾಗೃಹಗಳಲ್ಲಿ ಖೈದಿಗಳು ಸ್ವತಂತ್ರವಾಗಿ ದಿನಪೂರ್ತಿ ಓಡಾಡಬಹುದಾಗಿರುತ್ತದೆ. ಆದರೆ ಈ ಸೌಲಭ್ಯ ಎಲ್ಲಾ ಕಡೆಗಳಲ್ಲಿ ಇರುವುದಿಲ್ಲ. ಆದರೆ, ಮುಕ್ತ ಕಾರಾಗೃಹ ವ್ಯವಸ್ಥೆಯಲ್ಲಿ ಸುಧಾರಣೆಗೆ ಹೆಸರುವಾಸಿಯಾಗಿರುವ ಪ.ಬಂಗಾಲ ಮತ್ತು ರಾಜಸ್ಥಾನಗಳಂತಹ ರಾಜ್ಯಗಳಲ್ಲಿ ಈ ವ್ಯವಸ್ಥೆಯನ್ನು ನಾವು ಕಾಣಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Viral News: ಮೃತಪಟ್ಟಿದ್ದಾನೆಂದು ಸಮಾಧಿ ಮಾಡಿದ ಪೋಷಕರು: ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷನಾದ ಮಗ!

ಮುಕ್ತ ಕಾರಾಗೃಹ ವ್ಯವಸ್ಥೆಯ ಪ್ರಮುಖ ಅಂಶಗಳು:

ಜವಾಬ್ದಾರಿಯುತ ಸ್ವಾತಂತ್ರ್ಯ: ಇಲ್ಲಿ ಖೈದಿಗಳು ಜೈಲು ಆವರಣದಿಂದ ಕೆಲಸಕ್ಕೆ, ಶಿಕ್ಷಣಕ್ಕೆ ಅಥವಾ ಕುಟುಂಬ ಸದಸ್ಯರ ಭೇಟಿಗಾಗಿ ಹೊರ ಹೋಗಬಹುದಾಗಿರುತ್ತದೆ.

ಉದ್ಯೋಗವಕಾಶಗಳು: ಹೆಚ್ಚಿನ ಖೈದಿಗಳು ತಮ್ಮ ಕಾರಾಗೃಹದ ಸಮೀಪದಲ್ಲಿರುವ ಕಾರ್ಖಾನೆಗಳಲ್ಲಿ, ಹೊಲಗಳಲ್ಲಿ, ಅಂಗಡಿಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಕೆಲಸಮಾಡುವ ಮೂಲಕ, ತಮ್ಮ ಶಿಕ್ಷಾವಧಿ ಮುಗಿದ ಬಳಿಕ ವೃತ್ತಿ ಕೌಶಲವನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಕೌಟುಂಬಿಕ ಸಂಪರ್ಕ: ಭಾವನಾತ್ಮಕ ಸದೃಡತೆಗಾಗಿ ಖೈದಿಗಳಿಗೆ ಸುದೀರ್ಘ ಅಥವಾ ಸಕಾಲಿಕ ಕೌಟುಂಬಿಕ ಭೇಟಿಯ ಅವಕಾಶಗಳನ್ನು ನೀಡಲಾಗುತ್ತದೆ.

ಪುನರ್ವಸತಿಯ ದೂರದೃಷ್ಟಿತ್ವ: ಮುಕ್ತ ಕಾರಾಗೃಹ ವ್ಯವಸ್ಥೆಯು ಖೈದಿಗಳ ಸುಧಾರಣೆ, ಶಿಕ್ಷಿಸದಿರುವಿಕೆ ಮೂಲಕ ಅವರಿಗೊಂದು ಬೆಂಬಲಾತ್ಮಕವಾದ ಮತ್ತು ಸಂರಚಿತ ವಾತಾವರಣವನ್ನು ಕಟ್ಟಿಕೊಡುವ ಗುರಿಯನ್ನು ಹೊಂದಿದೆ.

ಅರ್ಹತಾ ಮಾನದಂಡ: ಸನ್ನಡತೆಯ, ಕಡಿಮೆ ಅಪಾಯದ ಹಿನ್ನಲೆ ಹೊಂದಿರುವ ಮತ್ತು ಪುನರ್ವಸತಿಗೆ ಸಂಭವನೀಯ ಖೈದಿಗಳನ್ನು ಮುಕ್ತ ಕಾರಾಗೃಹ ವ್ಯವಸ್ಥೆಗೆ ಪರಿಗಣಿಸಲಾಗುವುದು. ಭಾರತದಲ್ಲಿ ಈ ಮುಕ್ತ ಕಾರಾಗೃಹ ವ್ಯವಸ್ಥೆಯು 1905ರಲ್ಲಿ ಪರಿಚಯಗೊಂಡಿತು. ಪ್ರಥಮವಾಗಿ ಇದನ್ನು ಬಾಂಬೆ ಪ್ರೆಸಿಡೆನ್ಸಿಯಡಿಯಲ್ಲಿ ಜಾರಿಗೆ ತರಲಾಯಿತು. ಮಹಿಳೆಯರಿಗಾಗಿ ಮೊದಲ ಮುಕ್ತ ಕಾರಾಗೃಹ ವ್ಯವಸ್ಥೆಯನ್ನು 2010ರಲ್ಲಿ ಪುಣೆಯ ಯರವಾಡ ಕಾರಾಗೃಹದಲ್ಲಿ ಪ್ರಾರಂಭಿಸಲಾಯಿತು. ದಕ್ಷಿಣ ಭಾರತದ ಮೊಟ್ಟಮೊದಲ ಮಕ್ತ ಕಾರಾಗೃಹ ವ್ಯವಸ್ಥೆ 2012ರಲ್ಲಿ ಕೇರಳದ ಪೂಜಾಪುರದಲ್ಲಿ ಪ್ರಾರಂಭಗೊಂಡಿತು