ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Blue Star 1984: ಆಪರೇಷನ್ ಬ್ಲೂ ಸ್ಟಾರ್‌ ಇಂದಿರಾ ಗಾಂಧಿಯವರ ತಪ್ಪು ನಿರ್ಧಾರ; ಪಿ.ಚಿದಂಬರಂ ಅಚ್ಚರಿಯ ಹೇಳಿಕೆ

P. Chidambaram: ಅಮೃತಸರದ ಸ್ವರ್ಣ ಮಂದಿರದಿಂದ ಸಿಖ್ ಪ್ರತ್ಯೇಕತಾವಾದಿಗಳನ್ನು ಹೊರದಬ್ಬಲು 1984ರಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಬ್ಲೂ ಸ್ಟಾರ್‌ ಒಂದು ತಪ್ಪು ನಿರ್ಧಾರವಾಗಿತ್ತು. ಇದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೂಷಿಸಲು ಸರಿಯಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್‌ ಇಂದಿರಾ ಗಾಂಧಿಯ ತಪ್ಪು ನಿರ್ಧಾರ-ಪಿ.ಚಿದಂಬರಂ

-

ನವದೆಹಲಿ: ಅಮೃತಸರದ (Amritsar) ಸ್ವರ್ಣ ಮಂದಿರವನ್ನು (Golden Temple) ಭದ್ರಪಡಿಸಿಕೊಳ್ಳಲು ಎಂದು ಭಾರತೀಯ ಮಿಲಿಟರಿ (Indian army) 1984ರಲ್ಲಿ ನಡೆಸಿದ ಕಾರ್ಯಾಚರಣೆಯಾದ ಆಪರೇಷನ್ ಬ್ಲೂ ಸ್ಟಾರ್ (Operation Blue Star) ಒಂದು ತಪ್ಪು ದಾರಿಯಾಗಿತ್ತು. ಸ್ವರ್ಣ ಮಂದಿರದೊಳಗೆ ಸೇರಿದ್ದ ಸಿಖ್ ಪ್ರತ್ಯೇಕತಾವಾದಿಗಳನ್ನು ಹೊರದಬ್ಬಲು ಭಾರತೀಯ ಮಿಲಿಟರಿ ಈ ಕಾರ್ಯಾಚರಣೆಯನ್ನು ನಡೆಸಿತ್ತು ಎಂದು ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ (Veteran Congress leader and former Union Minister) ಪಿ. ಚಿದಂಬರಂ (P Chidambaram) ಹೇಳಿದರು.

ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಇಂದಿರಾ ಗಾಂಧಿ ಅವರು ಹಸಿರು ನಿಶಾನೆ ತೋರಿದ್ದರಿಂದ ಅವರು ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಇಂದಿರಾ ಗಾಂಧಿ ಅವರನ್ನು ದೂಷಿಸಬಾರದು. ಯಾಕೆಂದರೆ ಅದು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಯ ಸಂಘಟಿತ ನಿರ್ಧಾರವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಏನಿದು ಆಪರೇಷನ್ ಬ್ಲೂ ಸ್ಟಾರ್ ?

ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಸಂಕೀರ್ಣದೊಳಗೆ 1984ರಲ್ಲಿ ಸೇರಿಕೊಂಡಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಖಲಿಸ್ತಾನಿ ಸಶಸ್ತ್ರ ಪ್ರತ್ಯೇಕತಾವಾದಿಗಳನ್ನು ಹೊರದಬ್ಬಲು ಭಾರತೀಯ ಸೇನೆಯು ಆಪರೇಷನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತ್ತು.

ಜೂನ್ 1 ರಿಂದ ಜೂನ್ 8ರವರೆಗೆ ನಡೆದ ಈ ಕಾರ್ಯಾಚರಣೆಯ ವೇಳೆ ಅನೇಕ ಸಾವುನೋವುಗಳು ಸಂಭವಿಸಿತ್ತು. ಇದು ಮುಂದೆ ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾಯಿತು. 1984ರ ಅಕ್ಟೋಬರ್ 31ರಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಕೊಂದು ಹಾಕಿದರು. ಇದು ದೇಶಾದ್ಯಂತ ಸಿಖ್ ವಿರೋಧಿ ಗಲಭೆ ಉಂಟಾಗಲು ಪ್ರಮುಖ ಕಾರಣವಾಯಿತು.

ಕಾರ್ಯಾಚರಣೆ ವೇಳೆ ಮಿಲಿಟರಿ ಅಧಿಕಾರಿಗಳು ಯಾವುದೇ ಅಗೌರವ ತೋರಿಲ್ಲ. ಆದರೆ ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ಆಪರೇಷನ್ ಬ್ಲೂ ಸ್ಟಾರ್ ಒಂದು ತಪ್ಪು ದಾರಿಯಾಗಿತ್ತು. ಇದಾದ ಕೆಲವು ವರ್ಷಗಳ ಬಳಿಕ ದೇವಾಲಯದಿಂದ ಸೈನಿಕರ ಭದ್ರತೆಯನ್ನು ತೆಗೆದುಹಾಕಲಾಗಿದೆ. ಇದು ಸರಿಯಾದ ಮಾರ್ಗವಾಗಿದೆ ಎಂದು ಚಿದಂಬರಂ ತಿಳಿಸಿದರು.

ಇದನ್ನೂ ಓದಿ: Afghanistan Vs Pak: 58 ಪಾಕ್‌ ಸೈನಿಕರನ್ನು ಕೊಂದ ತಾಲಿಬಾನ್‌; ಅಡಗಿರುವ ಉಗ್ರರನ್ನು ಹೊರದಬ್ಬುವಂತೆ ವಾರ್ನಿಂಗ್‌

ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ಬಳಿಕ ಭಾರತ ಸರ್ಕಾರವು ಗೋಲ್ಡನ್ ಟೆಂಪಲ್‌ನಿಂದ ಪಲಾಯನ ಮಾಡಿದ ಸಶಸ್ತ್ರ ಪ್ರತ್ಯೇಕತಾವಾದಿಗಳನ್ನು ಬಂಧಿಸಲು ಪಂಜಾಬ್‌ನ ಗ್ರಾಮೀಣ ಭಾಗಗಳಲ್ಲಿ ಆಪರೇಷನ್ ವುಡ್ರೋಸ್ ಅನ್ನು ನಡೆಸಿತು. ಈ ವೇಳೆ ಐದು ಸಿಖ್ ತಖ್ತ್‌ಗಳಲ್ಲಿ ಅತ್ಯಂತ ಪವಿತ್ರವಾದ ಅಕಲ್ ತಖ್ತ್ ಅನ್ನು ಧ್ವಂಸಗೊಳಿಸಲಾಯಿತು. ಆಪರೇಷನ್ ಬ್ಲೂ ಸ್ಟಾರ್ ಒಂದು ತಪ್ಪಾಗಿತ್ತು. ಅದಕ್ಕಾಗಿಯೇ ಇಂದಿರಾ ಗಾಂಧಿಯವರು ತಮ್ಮ ಪ್ರಾಣ ಕಳೆದುಕೊಂಡರು ಎಂದು ಚಿದಂಬರಂ ಹೇಳಿದ್ದಾರೆ.