Viral Video: ಕುಡಿದ ಮತ್ತಿನಲ್ಲಿ ಯುವಕ-ಯುವತಿಯ ಬೀದಿ ರಂಪಾಟ! ಈ ವಿಡಿಯೊ ನೋಡಿ
Drunk Man Fighting with Women: ಕುಡಿದು ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಇತರೆ ಸವಾರರೊಂದಿಗೆ ಕೋಪಗೊಳ್ಳುವುದು ಇತ್ಯಾದಿಯು ನಗರಗಳಲ್ಲಿ ಸದಾ ಅವ್ಯವಸ್ಥೆಯನ್ನು ಉಂಟುಮಾಡುತ್ತಲೇ ಇರುತ್ತವೆ. ಇದೀಗ ಒಬ್ಬ ವ್ಯಕ್ತಿಯೊಂದಿಗೆ ಇಬ್ಬರು ಯುವತಿಯರು ಹಾಗೂ ಅವರ ಸ್ನೇಹಿತ ಕುಡಿದು ಜಗಳವಾಡಿದ್ದಾರೆ.

-

ನವದೆಹಲಿ: ಕುಡಿದು ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಇತರೆ ಸವಾರರೊಂದಿಗೆ ಕೋಪಗೊಳ್ಳುವುದು ಇತ್ಯಾದಿಯು ನಗರಗಳಲ್ಲಿ ಸದಾ ಅವ್ಯವಸ್ಥೆಯನ್ನು ಉಂಟುಮಾಡುತ್ತಲೇ ಇರುತ್ತವೆ. ಇಂಥದ್ದೇ ಜಗಳಗಳು ಅಪಘಾತಕ್ಕೆ ಕಾರಣವಾಗುತ್ತಿದೆ. ತಡರಾತ್ರಿ ರಸ್ತೆಯಲ್ಲಿ ಜಗಳಗಳು (fights) ಸಾಮಾನ್ಯವಾಗುತ್ತಿವೆ. ಮದ್ಯ ಸೇವಿಸಿದ ಬಳಿಕ ಈ ಜಗಳ ನಡೆದಿದೆ. ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಭಾರಿ ವೈರಲ್ (Viral Video) ಆಗಿದೆ. ಈ ಬಾರಿ ಇಬ್ಬರು ಪುರುಷರು ಮತ್ತು ಇಬ್ಬರು ಯುವತಿಯರ ನಡುವೆ ಜಗಳವಾಗಿದೆ. ಒಬ್ಬ ವ್ಯಕ್ತಿಯೊಂದಿಗೆ ಇಬ್ಬರು ಯುವತಿಯರು ಹಾಗೂ ಅವರ ಸ್ನೇಹಿತ ಕುಡಿದು ಜಗಳವಾಡಿದ್ದಾರೆ.
ಈ ವಿಡಿಯೊವು, ರಸ್ತೆಯ ಮಧ್ಯದಲ್ಲಿ ರಾತ್ರಿಯ ವೇಳೆ ಎಷ್ಟು ಬೇಗನೆ ಜೋರಾದ ವಾದವಾಗಿ ಮಾರ್ಪಟ್ಟಿತು ಎಂಬುದನ್ನು ಸೆರೆಹಿಡಿಯುತ್ತದೆ. 26 ಸೆಕೆಂಡುಗಳ ವಿಡಿಯೊವು ರಸ್ತೆಯಲ್ಲಿ ಬಿದ್ದ ಬೈಕ್ ಬಳಿ ಇಬ್ಬರು ಪುರುಷರು ಜಗಳವಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರಲ್ಲಿ, ಒಬ್ಬ ಕಪ್ಪು ಶರ್ಟ್ ಧರಿಸಿ ಕುಡಿದಿರುವಂತೆ ಕಾಣಿಸಿಕೊಂಡಿದ್ದು, ಹಾಗಾದರೆ ನಾನು ಸುಮ್ಮನಿರಬೇಕು? ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಅವನೊಂದಿಗೆ ಒಬ್ಬ ಯುವತಿಯು ಅವರ ನಡುವೆ ಬಂದು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಅವಳು ಇನ್ನೊಬ್ಬ ಪುರುಷನನ್ನು ತಳ್ಳುತ್ತಾಳೆ.
ಇದನ್ನೂ ಓದಿ: Viral News; ಪೊಲೀಸ್ ಠಾಣೆಯಲ್ಲೇ ರೀಲ್ಸ್ ಮಾಡಿದ ಭೂಪರು; ಎಫ್ಐಆರ್ ದಾಖಲು
ನಂತರ ಕಪ್ಪು ಶರ್ಟ್ ಧರಿಸಿದ ವ್ಯಕ್ತಿ ಕೋಪದಿಂದ ರಸ್ತೆಯ ಮೇಲೆ ಬಿದ್ದಿದ್ದ ಬೈಕನ್ನು ಹಿಡಿದು ಅದಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಾನೆ. ಅವನ ಜೊತೆಗಿದ್ದ ಯುವತಿ ಬೈಕಿಗೆ ಹಾನಿ ಮಾಡಿದ್ದಕ್ಕಾಗಿ ಅವನ ಮೇಲೆ ಕೂಗುತ್ತಾ, ಮನೆಗೆ ಹೋಗೋಣ ಎಂದು ಹೇಳಿದ್ದಾಳೆ. ಮುಖ್ಯ ರಸ್ತೆಯ ಮಧ್ಯದಲ್ಲಿ ನಡೆದ ಈ ನಾಟಕೀಯ ದೃಶ್ಯವನ್ನು ವೀಕ್ಷಿಸುತ್ತಾ, ಪಕ್ಕದಲ್ಲಿದ್ದ ಜನರು ಸುತ್ತಲೂ ಒಟ್ಟುಗೂಡುತ್ತಿದ್ದಂತೆ ವಾದ ಮುಂದುವರಿಯುತ್ತದೆ. ರಾತ್ರಿಯ ಸಮಯವಾಗಿದ್ದರಿಂದ ಮತ್ತು ನಿಖರವಾದ ಸ್ಥಳ ತಿಳಿದಿಲ್ಲವಾದರೂ, ಜಗಳ ನೋಡಲು ಸಾಕಷ್ಟು ಜನರು ಸೇರಿದ್ದರು.
ವಿಡಿಯೊ ವೀಕ್ಷಿಸಿ:
ವಿಡಿಯೊ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ, ಕೂಗುತ್ತಿದ್ದ ಯುವತಿ ತಾನೇ ಬೈಕನ್ನು ಎತ್ತಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಅವರೊಂದಿಗೆ ವಾದ ಮಾಡುತ್ತಿದ್ದ ವ್ಯಕ್ತಿಯು ನೀವು ಮೂವರೂ ಕುಡಿದಿದ್ದೀರಾ ಎಂದು ಆರೋಪಿಸಿದ್ದಾರೆ. ಅದಕ್ಕೆ ಯುವತಿಯು ಯಾವುದೇ ಹಿಂಜರಿಕೆಯಿಲ್ಲದೆ, ಹೌದು ನಾವು ಕುಡಿದಿದ್ದೇವೆ ಎಂದು ಕೂಗಿ ಹೇಳಿದ್ದಾಳೆ.
ಇದನ್ನೂ ಓದಿ: Viral Video: ಮಹಿಳೆಯ ಮೃತದೇಹವನ್ನೂ ಬಿಟ್ಟಿಲ್ಲ ಈ ಪಾಪಿ... ಶವದ ಮೇಲೂ ಅತ್ಯಾಚಾರ- ವಿಡಿಯೊ ವೈರಲ್
ವಾಗ್ವಾದದ ಸಮಯದಲ್ಲಿ ಯುವತಿಯ ಜೊತೆ ಆಕೆಯ ಸ್ನೇಹಿತೆ ಕೂಡ ಇದ್ದಳು. ಈ ವಿಡಿಯೊವನ್ನು ಅಕ್ಟೋಬರ್ 10 ರಂದು X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 98,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಅನೇಕ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೊಗೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಇದು ಕರ್ವಾ ಚೌತ್ ವಿಶೇಷ ಎಂದು ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ.