ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾಂಗ್ರೆಸ್‌ ಕಾರ್ಯಕರ್ತನಿಗೆ ಸೀರೆ ಉಡಿಸಿ ಅಪಮಾನ- ಬಿಜೆಪಿ ಕಾರ್ಯಕರ್ತರ ವಿಡಿಯೊ ವೈರಲ್‌

Congress Felicitates BJP’S Senior Party Worker: ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ 73 ವರ್ಷದ ಕಾಂಗ್ರೆಸ್‌ ಕಾರ್ಯಕರ್ತ ಪ್ರಕಾಶ್ ಪಗಾರೆ ಅವರನ್ನು ಕೈ ಪಕ್ಷ ಸನ್ಮಾನಿಸಿದೆ. ಬಿಜೆಪಿ ಬೆಂಬಲಿಗರು ಪಗಾರೆ ಅವರಿಗೆ ಬಲವಂತವಾಗಿ ಸೀರೆ ಉಡಿಸಿ ಅವಮಾನ ಮಾಡಿದ್ದರು. ಇದರ ವಿಡಿಯೊ ಭಾರೀ ವೈರಲ್ ಆಗಿದೆ.

ಕಾಂಗ್ರೆಸ್‌ ಕಾರ್ಯಕರ್ತನಿಗೆ ಸೀರೆ ಉಡಿಸಿ ಅಪಮಾನ- ವಿಡಿಯೊ ನೋಡಿ

-

Priyanka P Priyanka P Oct 12, 2025 5:36 PM

ಮುಂಬೈ: ಕಳೆದ ತಿಂಗಳು ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ 73 ವರ್ಷದ ಪಕ್ಷದ ಕಾರ್ಯಕರ್ತ ಪ್ರಕಾಶ್ ಪಗಾರೆ ಅವರನ್ನು ಕಾಂಗ್ರೆಸ್ (Congress) ಸನ್ಮಾನಿಸಿದೆ. ಈ ಸಂಬಂಧ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಶನಿವಾರ ಕಲ್ಯಾಣ್‌ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಬಿಜೆಪಿ ಬೆಂಬಲಿಗರು ಪಗಾರೆ ಅವರಿಗೆ ಬಲವಂತವಾಗಿ ಸೀರೆ ಉಡಿಸಿದ ವಾರಗಳ ನಂತರ ಕಾಂಗ್ರೆಸ್ ಅವರಿಗೆ ಬೆಂಬಲ ಸೂಚಿಸಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.

ಒಗ್ಗಟ್ಟು ಮತ್ತು ಗೌರವದ ಪ್ರದರ್ಶನವಾಗಿ, ಸಪ್ಕಲ್ ಪಗರೆ ಅವರನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡರು. ಅವರಿಗೆ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸಹಾಯ ಮಾಡಿದರು. ಪಕ್ಷದ ತಳಮಟ್ಟದ ಕಾರ್ಯಕರ್ತರ ಬೆಂಬಲವನ್ನು ದೃಢೀಕರಿಸುವುದು ಮತ್ತು ಪಗಾರೆ ಅವರಿಗೆ ಆಗಿರುವ ಅವಮಾನವನ್ನು ಖಂಡಿಸುವುದು ಈ ಬೆಂಬಲದ ಉದ್ದೇಶವಾಗಿತ್ತು.

ವಿಡಿಯೊ ವೀಕ್ಷಿಸಿ:



ಸೆಪ್ಟೆಂಬರ್ 23 ರಂದು ಸಾಮಾಜಿಕ ಮಾಧ್ಯಮ ವೇದಿಕೆ X (ಹಿಂದೆ ಟ್ವಿಟರ್) ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಫ್ ಮಾಡಿದ ಚಿತ್ರವನ್ನು ಪೋಸ್ಟ್ ಮಾಡಿದ ನಂತರ ಪಗರೆ ಅವರನ್ನು ಗುರಿಯಾಗಿಸಲಾಯಿತು. ಈ ಸಂಬಂಧ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ಜಗಳವಾಡಿದ್ದಲ್ಲದೆ, ಬಲವಂತವಾಗಿ ಅವರಿಗೆ ಕೆಂಪು ಸೀರೆಯನ್ನು ಉಡಿಸಿದ್ದಾರೆ. ಈ ಘಟನೆಯನ್ನು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯಗಳನ್ನು ಬಿಡುಗಡೆ ಮಾಡಿದರು. ಘಟನೆಯ ನಂತರ, ಪಗರೆ ಅವರನ್ನು ಡೊಂಬಿವ್ಲಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

ವಿಡಿಯೊ ವೀಕ್ಷಿಸಿ:



ಇನ್ನು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಪ್ಕಲ್, ನಮ್ಮ ಪಕ್ಷವು ಪಗರೆ ಜೊತೆ ನಿಂತಿದೆ. ಇದು ಅದರ ಕಾರ್ಯಕರ್ತರಿಂದ ನಡೆಸಲ್ಪಡುವ ಪಕ್ಷ. ನಾನು ಮೊದಲೇ ಹೇಳಿದ್ದೆ - ನೀವು ಕಾಂಗ್ರೆಸ್ ಮೇಲೆ ಹೆಚ್ಚು ಸವಾಲುಗಳನ್ನು ಎಸೆಯುತ್ತೀರಿ, ಅದು ಬಲವಾಗಿ ಮರಳುತ್ತದೆ ಎಂದು ಅಂತಾ ಹೇಳಿದರು.

ಇನ್ನು ಭಾವನಾತ್ಮಕ ಭಾಷಣ ಮಾಡಿದ ಪಗಾರೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಟೀಕಿಸುತ್ತಾ, ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಿಜವಾದ ಪುರುಷರು ಜೈಲಿಗೆ ಹೋದರು. ಇತರರು ಆರ್‌ಎಸ್‌ಎಸ್‌ಗೆ ಹೋದರು ಎಂದು ಕಿಡಿಕಾರಿದರು. ನಾನು ಒಂದು ಘಟನೆಯಿಂದ ಕುಸಿಯುವುದಿಲ್ಲ. ಕಾಂಗ್ರೆಸ್ ಅನ್ನು ತ್ಯಾಗದ ಮೇಲೆ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ಮಹಿಳೆಯ ಮೃತದೇಹವನ್ನೂ ಬಿಟ್ಟಿಲ್ಲ ಈ ಪಾಪಿ... ಶವದ ಮೇಲೂ ಅತ್ಯಾಚಾರ- ವಿಡಿಯೊ ವೈರಲ್‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಗಾರೆ ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿದ ಎರಡು ವಾರಗಳ ನಂತರ ಸಪ್ಕಲ್ ಅವರು ಪಗಾರೆ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷದ ಕಾರ್ಯಕಾರಿ ಸಮಿತಿ ಸಭೆಗಾಗಿ ನವದೆಹಲಿಗೆ ಭೇಟಿ ನೀಡಿದ್ದ ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಅವರು ಈ ಘಟನೆಯನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತಂದಿದ್ದರು.