ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಓಣಂ ಹಬ್ಬದಂದು ರಂಗೋಲಿ ಹಾಕಿದ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ FIR

ಆಪರೇಷನ್ ಸಿಂದೂರ್ ಹೆಸರಿನ ಹೂವಿನ ರಂಗೋಲಿಯನ್ನು (ಪೂಕಳಂ) ಕೇರಳದ ದೇವಾಲಯದ ಮುಂದೆ ಹಾಕಿರುವ ಆರೋಪದಲ್ಲಿ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೇವಾಲಯದ ಆವರಣದಲ್ಲಿ ಧ್ವಜಗಳು ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಹೈಕೋರ್ಟ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್; ಕಾರಣವೇನು?

-

ತಿರುವನಂತಪುರಂ: ದೇವಸ್ಥಾನವೊಂದರಲ್ಲಿ ಆಪರೇಷನ್ ಸಿಂದೂರ್ (Operation Sindoor) ಹೆಸರಿನ ಹೂವಿನ ರಂಗೋಲಿ (ಪೂಕಳಂ) ಹಾಕಿರುವ ಕೇರಳದ 27 ಆರ್‌ಎಸ್‌ಎಸ್ ಕಾರ್ಯಕರ್ತರ (RSS Activists) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ (Kollam district) ಓಣಂ (Onam) ಹಬ್ಬದಂದು ಪಾರ್ಥಸಾರಥಿ ದೇವಸ್ಥಾನದ (Parthasarathy temple) ಆವರಣದ ಬಳಿ ಧ್ವಜಗಳು ಸೇರಿದಂತೆ ಇತರ ಅಲಂಕಾರಿಕ ವಸ್ತುಗಳನ್ನು ಹೈಕೋರ್ಟ್ ನಿಷೇಧಿಸಿದೆ. ಆದರೂ ಹೂವಿನ ರಂಗೋಲಿಯನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೇವಾಲಯ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪಾರ್ಥಸಾರಥಿ ದೇವಸ್ಥಾನದ ಹೊರಗೆ ಓಣಂ ಹಬ್ಬದಂದು ಆರ್‌ಎಸ್‌ಎಸ್ ಧ್ವಜ ಮತ್ತು ಆಪರೇಷನ್ ಸಿಂದೂರ್ ಎಂದು ಬರೆದಿರುವ ರಂಗೋಲಿಯನ್ನು ಹಾಕಲಾಗಿತ್ತು.

ಈ ಹಿಂದೆ ಹಬ್ಬಗಳ ಸಮಯದಲ್ಲಿ ದೇವಾಲಯದ ಬಳಿ ಧ್ವಜ ಅಳವಡಿಸುವ ವಿಚಾರವಾಗಿ ಆಗಾಗ್ಗೆ ಘರ್ಷಣೆಗಳು ಉಂಟಾಗುತ್ತಿದ್ದವು. ಇದನ್ನು ತಪ್ಪಿಸಲು ಹೈಕೋರ್ಟ್ 2023ರಲ್ಲಿ ದೇವಾಲಯದ ಆವರಣದ ಬಳಿ ಧ್ವಜಗಳು ಸೇರಿದಂತೆ ಇತರೆ ಅಲಂಕಾರಿಕ ವಸ್ತುಗಳನ್ನು ನಿಷೇಧಿಸಿತ್ತು. ಹೀಗಾಗಿ ಇಲ್ಲಿ ಹೂವಿನ ರಂಗೋಲಿಯನ್ನು ಹಾಕಿರುವುದು ಕೇರಳ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ದೇವಾಲಯ ಸಮಿತಿ ಸದಸ್ಯ ಮೋಹನನ್ ತಿಳಿಸಿದ್ದಾರೆ.

ದೇವಾಲಯ ಸಮಿತಿ ಹಾಕಿರುವ ಹೂವಿನ ವಿನ್ಯಾಸದ ಪಕ್ಕದಲ್ಲಿಯೇ ಈ ರಂಗೋಲಿಯನ್ನು ಹಾಕಲಾಗಿದೆ. ಇದು ಹೈಕೋರ್ಟ್ ಆದೇಶವನ್ನು ಉಲ್ಲಂಘನೆಯಾಗಿದ್ದು, ಘರ್ಷಣೆಗೆ ಕಾರಣವಾಗಬಹುದಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ದೂರು ದಾಖಲಿಸಿದ್ದೆವು, ಆಪರೇಷನ್ ಸಿಂದೂರ್ ಬಗ್ಗೆ ನಮಗೆ ಗೌರವವಿದೆ. ಆದರೆ ಅದನ್ನು ಚಿತ್ರಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.



ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 223, 192ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದಕ್ಕೆ ಪ್ರತಿಕಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಎಕ್ಸ್‌ನಲ್ಲಿ, ʼʼಇದು ಸ್ವೀಕಾರಾರ್ಹವಲ್ಲ. ಇದು ಭಾರತದ ಹೆಮ್ಮೆ. ಆಪರೇಷನ್‌ ಸಿಂದೂರ್‌ ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯದ ಸಂಕೇತ. ಕೇರಳ ಪೊಲೀಸರ ಈ ಎಫ್‌ಐಆರ್ ಭಯೋತ್ಪಾದನೆಯ 26 ಸಂತ್ರಸ್ತರು ಮತ್ತು ಅವರ ಕುಟುಂಬಗಳು ಮತ್ತು ತಮ್ಮ ರಕ್ತ ಮತ್ತು ತ್ಯಾಗದಿಂದ ಭಾರತವನ್ನು ರಕ್ಷಿಸುವ ಪ್ರತಿಯೊಬ್ಬ ಸೈನಿಕನಿಗೆ ಮಾಡಿದ ಅವಮಾನʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Tihar Jail: ವಿಜಯ್ ಮಲ್ಯ, ನೀರವ್ ಮೋದಿ ಭಾರತಕ್ಕೆ ಹಸ್ತಾಂತರ- ತಿಹಾರ್ ಜೈಲು ಭದ್ರತೆ ಪರಿಶೀಲಿಸಿದ ಯುಕೆ ತಂಡ

ಇದಕ್ಕೆ ಸ್ಪಷ್ಟನೆ ನೀಡಿರುವ ಕೇರಳ ಪೊಲೀಸರು, ನ್ಯಾಯಾಲಯದ ಆದೇಶದ ವಿರುದ್ಧ ದೇವಾಲಯದ ಆವರಣದಲ್ಲಿ ಧ್ವಜ ಮತ್ತು ಫ್ಲೆಕ್ಸ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರ ವಿರುದ್ಧ ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.