ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam terror attack: ಪಹಲ್ಗಾಮ್ ದಾಳಿ ಬಗ್ಗೆ ಮತ್ತಷ್ಟು ಆಘಾತಕಾರಿ ಸಂಗತಿ ಬಯಲಿಗೆ

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ (Pahalgam Attack) ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದನಾ ದಾಳಿಗೆ (Terror attack) ಸಂಬಂಧಿಸಿ ಇಬ್ಬರು ಸ್ಥಳೀಯ ನಿವಾಸಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ವಿಚಾರಣೆಗೆ ಒಳಪಡಿಸಿದೆ. ತನಿಖೆ ವೇಳೆ ಅವರಿಬ್ಬರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಕುರಿತು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪಹಲ್ಗಾಮ್ ದಾಳಿ-NIA ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್‌ ಸಂಗತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu and kashmir) ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್‌ನ (Pahalgam Attack) ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದನಾ ದಾಳಿಗೆ (terror attack) ಸಂಬಂಧಿಸಿ ಇಬ್ಬರು ಸ್ಥಳೀಯ ನಿವಾಸಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ವಿಚಾರಣೆಗೆ ಒಳಪಡಿಸಿದೆ. ತನಿಖೆ ವೇಳೆ ಅವರಿಬ್ಬರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ಕುರಿತು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಭಯೋತ್ಪಾದಕನನ್ನು ನೋಡಿದ್ದಾನೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬೈಸರನ್ ಕಣಿವೆಗೆ ಪ್ರವಾಸ ಬಂದಿದ್ದ 26 ಮಂದಿ ಸಾವನ್ನಪ್ಪಿದ್ದರು. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ತೀವ್ರ ವಿಚಾರಣೆಯನ್ನು ಆರಂಭಿಸಿದ್ದು, ತನಿಖೆಯನ್ನು ಚುರುಕುಗೊಳಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂದರು ನಿವಾಸಿಗಳಾದ ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಎಂಬವರ ವಿಚಾರಣೆ ನಡೆಸಲಾಗಿದೆ. ಇದರಿಂದ ಹಲವು ಮಹತ್ವದ ಮಾಹಿತಿಗಳು ಅಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗಿದೆ.

ದಾಳಿಯ ಬಳಿಕ ಭಯೋತ್ಪಾದಕರು ತಪ್ಪಿಸಿಕೊಳ್ಳುತ್ತಿದ್ದಾಗ ಅವರನ್ನು ನೋಡಿದ ಸ್ಥಳೀಯ ಸಾಕ್ಷಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುತಿಸಿದೆ. ಭಯೋತ್ಪಾದಕರು ತಪ್ಪಿಸಿಕೊಳ್ಳುವಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಯಾಳುಗಳಿಗೆ ಯಾರೂ ಸಹಾಯ ಮಾಡದಂತೆ ತಡೆಯಲು ಅವರು ಈ ರೀತಿ ಮಾಡಿರಬಹುದು ಎಂದು ಭಯೋತ್ಪಾದಕನನ್ನು ನೋಡಿದ ಸ್ಥಳೀಯ ಸಾಕ್ಷಿದಾರ ಹೇಳಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಕ್ಷಿಯ ಬಳಿ ಕೂಡ ಭಯೋತ್ಪಾದಕರು ಕಲ್ಮಾ ಪಠಿಸಲು ಕೇಳಿದ್ದಾರೆ. ಅವನ ಉಚ್ಚಾರಣೆಯಿಂದ ಆತ ಸ್ಥಳೀಯ ಎಂದು ದೃಢಪಡಿಸಿದ ಬಳಿಕ ಬಿಟ್ಟು ಬಿಡಲಾಗಿದೆ ಎಂದು ಸಾಕ್ಷಿದಾರ ಹೇಳಿದ್ದಾನೆ. ಗುಂಡಿನ ದಾಳಿ ನಡೆದ ಸ್ಥಳದಿಂದ ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಸಾಕ್ಷಿದಾರರ ಹೇಳಿಕೆಯನ್ನು ದೃಢಪಡಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸಾಕ್ಷಿದಾರರ ಹೇಳಿಕೆಯಿಂದ ಭಯೋತ್ಪಾದಕರನ್ನು ತನಿಖಾ ಅಧಿಕಾರಿಗಳು ಗುರುತಿಸಿದ್ದಾರೆ. ಮೂವರಲ್ಲಿ ಒಬ್ಬನನ್ನು ಪಾಕಿಸ್ತಾನಿ ಸೇನೆಯ ಮಾಜಿ ಸಿಬ್ಬಂದಿ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಆರು ಕಾರ್ಮಿಕರು ಮತ್ತು ಒಬ್ಬ ವೈದ್ಯರ ಸಾವಿಗೆ ಕಾರಣವಾದ ಸೋನ್‌ಮಾರ್ಗ್ ಝಡ್ ಮೋಧ್ ಸುರಂಗ ದಾಳಿಯ ಮಾಸ್ಟರ್‌ಮೈಂಡ್ ಈತ ಎಂದು ಶಂಕಿಸಲಾಗಿದೆ.

ಪರ್ವೈಜ್ ಅಹ್ಮದ್ ಮತ್ತು ಬಶೀರ್ ಅಹ್ಮದ್ ಹಿಂದಿನ ಯಾವುದೇ ದಾಳಿಯಲ್ಲಿ ಭಾಗಿಯಾಗಿಲ್ಲ. ಇವರು ಇಲ್ಲಿ ಐಎಸ್ಐನ ಹೊಸ ಮಾಡ್ಯೂಲ್ ರಚಿಸಲು ಉದ್ದೇಶಿಸಿರುವ ಕಾಶ್ಮೀರಿ ಭಯೋತ್ಪಾದಕರ ತಂಡದಲ್ಲಿದ್ದರು. ಉನ್ನತ ಮಟ್ಟದ ಗೌಪ್ಯತೆ ಕಾಪಾಡಿಕೊಳ್ಳಲು ಐಎಸ್ಐ ಈ ತಂತ್ರವನ್ನು ಮಾಡಿದೆ ಎನ್ನುತ್ತಾರೆ ಅಧಿಕಾರಿಗಳು.

ಇದನ್ನೂ ಓದಿ: Love Jihad: ಮುಸ್ಲಿಂ ಯುವತಿಯಿಂದ ಹಿಂದೂ ಗಂಡನ ಮತಾಂತರ, ಲವ್‌ ಜಿಹಾದ್‌ ನಡೆಸಿದ ವಿಚಿತ್ರ ಆರೋಪ

ಬೈಸರನ್ ಕಣಿವೆಯ ಮೂರರಿಂದ ಐದು ಮಂದಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇವರಲ್ಲಿ ಮೂವರು ಲಷ್ಕರ್-ಎ-ತೈಬಾ ಸಂಘಟನೆಗೆ ಸೇರಿದ್ದು, ಎಲ್ಲರೂ ಪಾಕಿಸ್ತಾನಿ ಪ್ರಜೆಗಳು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುತಿಸಿದೆ.