ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಎರಡು ದಶಕಗಳಲ್ಲೇ ಅತಿದೊಡ್ಡ ದಾಳಿ ಇದು...! ಕೆಲವೇ ದಿನಗಳ ಹಿಂದೆ ನಡೆದಿತ್ತು ಹಮಾಸ್‌, ಲಷ್ಕರ್‌ ಉಗ್ರರ ಬೃಹತ್‌ ಸಭೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ75 ದಿನಗಳ ಹಿಂದೆ ಹಮಾಸ್‌ನ (Hamas) ಹಿರಿಯ ನಾಯಕರು, ಲಷ್ಕರ್-ಎ-ತೊಯ್ಬಾ ಮತ್ತು ಲಷ್ಕರ್-ಎ-ಮುಸ್ತಫಾಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ರಾವಲಕೋಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam Terror Attack) ಎರಡು ದಶಕಗಳಲ್ಲೇ ಅತ್ಯಂತ ಘೋರ ನಾಗರಿಕರ ಮೇಲಿನ ಭಯೋತ್ಪಾದಕ ದಾಳಿ ನಡೆದಿದೆ.

ಕೆಲವೇ ದಿನಗಳ ಹಿಂದೆ ನಡೆದಿತ್ತು ಹಮಾಸ್‌, ಲಷ್ಕರ್‌ ಉಗ್ರರ ಬೃಹತ್‌ ಸಭೆ!

Profile Sushmitha Jain Apr 23, 2025 11:15 AM

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) 75 ದಿನಗಳ ಹಿಂದೆ ಹಮಾಸ್‌ನ (Hamas) ಹಿರಿಯ ನಾಯಕರು, ಲಷ್ಕರ್-ಎ-ತೊಯ್ಬಾ (Lashkar-e-Taiba) ಮತ್ತು ಲಷ್ಕರ್-ಎ-ಮುಸ್ತಫಾ (Lashkar-e-Mustafa) ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ರಾವಲಕೋಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam Terror Attack) ಎರಡು ದಶಕಗಳಲ್ಲೇ ಅತ್ಯಂತ ಘೋರ ನಾಗರಿಕರ ಮೇಲಿನ ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಯಲ್ಲಿ 28ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇದರಲ್ಲಿ ಇಸ್ರೇಲ್ ಮತ್ತು ಇಟಲಿಯ ಒಬ್ಬೊಬ್ಬ ನಾಗರಿಕರೂ ಸೇರಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಭಯೋತ್ಪಾದಕರು ಪೂಂಚ್‌ನಿಂದ ಪಹಲ್ಗಾಮ್‌ಗೆ ತಲುಪುವ ಮಾರ್ಗವನ್ನು ಬಳಸಿದ್ದಾರೆ, ಇದು PoK ಯಲ್ಲಿ ಸಭೆ ನಡೆದ ಸ್ಥಳಕ್ಕೆ ಸಮೀಪದಲ್ಲಿದೆ. ಭಾರತದ ಕೇಂದ್ರ ಗುಪ್ತಚರ ಸಂಸ್ಥೆಗಳು ಈ ದಾಳಿಯಲ್ಲಿ ಹಮಾಸ್‌ನ ನೇರ ಅಥವಾ ಪರೋಕ್ಷ ಒಡನಾಟಕ್ಕೆ ಖಚಿತ ಪುರಾವೆಗಳನ್ನು ಕಂಡುಕೊಂಡಿಲ್ಲವಾದರೂ, ಇದು 2023ರ ಅಕ್ಟೋಬರ್ 7ರಂದು ಇಸ್ರೇಲ್‌ನ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಹೋಲುತ್ತದೆ. ದಾಳಿಯ ವಿಧಾನ, ಗುರಿ ಆಯ್ಕೆ, ಮತ್ತು ಸಂಘಟಿತ ಕಾರ್ಯಾಚರಣೆಯು ಆ ಘಟನೆಯನ್ನು ನೆನಪಿಸುತ್ತದೆ.

ಫೆಬ್ರವರಿ 5ರಂದು ಪಿಒಕೆಯ ರಾವಲಕೋಟ್‌ನಲ್ಲಿ “ಕಾಶ್ಮೀರ ಸಾಲಿಡಾರಿಟಿ ಮತ್ತು ಹಮಾಸ್ ಆಪರೇಷನ್ ಅಲ್-ಅಕ್ಸಾ ಫ್ಲಡ್” ಎಂಬ ಸಭೆಯಲ್ಲಿ 90-100 ಭಯೋತ್ಪಾದಕರು ಭಾಗವಹಿಸಿದ್ದರು, ಇವರಲ್ಲಿ ಹೆಚ್ಚಿನವರು ವಿದೇಶಿ ನಾಗರಿಕರಾಗಿದ್ದರು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಭೆಯ ಉದ್ದೇಶವು ಪಾಕಿಸ್ತಾನ ಮತ್ತು ಪ್ಯಾಲೆಸ್ತೇನ್‌ನನ್ನು ಇಸ್ರೇಲ್ ಮತ್ತು ಭಾರತದ ವಿರುದ್ಧ ಒಗ್ಗೂಡಿಸುವುದಾಗಿತ್ತು.

ಹಮಾಸ್‌ನ ಡಾ. ಖಾಲಿದ್ ಕದ್ದೂಮಿ, ಡಾ. ನಾಜಿ ಝಹೀರ್, ಮುಫ್ತಿ ಅಝಮ್ ಸೇರಿದಂತೆ ಐವರು ನಾಯಕರು ಈ ಸಭೆಯಲ್ಲಿ ಮಾತನಾಡಿದ್ದರು. ಅವರು ಪಾಕಿಸ್ತಾನ, ಪ್ಯಾಲೆಸ್ತೇನ್ ಮತ್ತು ತಮ್ಮ ಸಂಘಟನೆಯ ಧ್ವಜಗಳ ಚಿತ್ರವಿರುವ ಶಾಲುಗಳನ್ನು ಧರಿಸಿದ್ದರು. ಭಾರತದ ಮೋಸ್ಟ್‌ ವಾಂಟೆಡ್ ಭಯೋತ್ಪಾದಕ ಮಸೂದ್ ಅಝರ್‌ನ ಸಹೋದರ ತಲ್ಹಾ ಸೈಫ್ ಸಹ ಜೆಇಎಂ ಮತ್ತು ಎಲ್‌ಇಟಿ ನಾಯಕರೊಂದಿಗೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಓದಿ:Pahalgam Attack: ಜನಸಾಮಾನ್ಯರು, ಅಮರನಾಥ ಯಾತ್ರಿಕರು, ಪ್ರವಾಸಿಗರು, ಸೈನಿಕರನ್ನೇ ಗುರಿಯಾಗಿಸಿಕೊಂಡ ಭಯೋತ್ಪಾದಕರು

ಇಸ್ರೇಲ್ ಸರ್ಕಾರದ ಅಧಿಕಾರಿಯೊಬ್ಬರು ಹಮಾಸ್ ನಾಯಕರು ಈ ಹಿಂದೆಯೂ PoKಗೆ ಪದೇ ಪದೇ ಭೇಟಿ ನೀಡಿದ್ದಾರೆ ಎಂಬ ಗುಪ್ತಚರ ಮಾಹಿತಿ ಇದ್ದು, ಭಾರತವು ಹಮಾಸ್‌ನನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕೆಂದು ಇಸ್ರೇಲ್ ಕೋರಿದೆ.

2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್‌ನ ಮೇಲೆ ಸಂಘಟಿತ ದಾಳಿ ನಡೆಸಿತು. ಟೆಲ್ ಅವೀವ್, ಆಶ್ಕೆಲಾನ್, ಮತ್ತು ಜೆರುಸಲೆಂನಂತಹ ನಗರಗಳ ಮೇಲೆ ರಾಕೆಟ್‌ಗಳನ್ನು ನಡೆಸಿತ್ತು. ರೀ ಇಮ್ ಸಮೀಪದ ಸಂಗೀತ ಉತ್ಸವದಲ್ಲಿ 260ಕ್ಕೂ ಹೆಚ್ಚು ಜನರ ಸಾಮೂಹಿಕ ಕೊಲೆ ಸೇರಿದಂತೆ ಸುಮಾರು 1,200 ಜನರು ಹತರಾದರು. ಇದೇ ರೀತಿಯ ಕ್ರೂರವಾಗಿ ಪಹಲ್ಗಾಮ್‌ನ ದಾಳಿಯಲ್ಲಿ ಭಯೋತ್ಪಾದಕರು ಪ್ರವಾಸಿಗರ ಕೇಂದ್ರದ ಮೇಲೆ ದಾಳಿ ನಡೆಸಿ, ಕೆಲವರ ಧಾರ್ಮಿಕ ಗುರುತನ್ನು ಖಚಿತಪಡಿಸಿಕೊಂಡ ನಂತರ ಗುಂಡಿನ ದಾಳಿ ನಡೆಸಿದ್ದಾರೆ. 2002ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿರುವ ಇದನ್ನು ಚೆನ್ನಾಗಿ ಯೋಜಿತ ಮತ್ತು ತಾಲೀಮು ಪಡೆದ ಕೃತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಎಚ್ಚರಿಕೆ ಘೋಷಿಸಲಾಗಿದೆ.

PoK ಸಭೆಯು ಭಾರತದ ಗುಪ್ತಚರ ಸಂಸ್ಥೆಗಳಿಗೆ ಆತಂಕವನ್ನುಂಟು ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಯ ಯೋಜನೆಯ ಬಗ್ಗೆ ಗುಪ್ತಚರ ಮಾಹಿತಿಗಳು ಈಗಾಗಲೇ ಇದ್ದವು ಎಂದು ಮೂಲಗಳು ತಿಳಿಸಿವೆ. ಈ ದಾಳಿಯು ಪ್ರವಾಸೋದ್ಯಮಕ್ಕೆ ಆಘಾತವನ್ನುಂಟು ಮಾಡಿದ್ದು, ಭದ್ರತಾ ವ್ಯವಸ್ಥೆಯ ಮೇಲೆ ಹಲವು ಪ್ರಶ್ನೆಗಳನ್ನು ಎತ್ತಿದೆ.