Rafale fighter jet: LOCಯಲ್ಲಿ ರಫೇಲ್ ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ; ಪಾಕ್ ಹೇಳಿಕೆಯನ್ನು ನಿರಾಕರಿಸಿದ ಭಾರತ
ಯುದ್ಧಕ್ಕೆ ಬೆದರಿದ ಪಾಕಿಸ್ತಾನ ಇದೀಗ ಒಂದೊಂದೇ ನಾಟಕಗಳನ್ನು ಶುರು ಮಾಡಿದೆ. ಎಲ್‌ಒಸಿ ಬಳಿ ಭಾರತೀಯ ವಾಯುಪಡೆಯ ರಫೇಲ್ (Rafale fighter jet) ಯುದ್ಧವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಪಾಕಿಸ್ತಾನದ ಕೆಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸೇನೆಗೆ ಸಂಪೂರ್ಣ ಸ್ವಾತಂತ್ಯವನ್ನು ನೀಡಿದ್ದಾರೆ. ಯುದ್ಧಕ್ಕೆ ಬೆದರಿದ ಪಾಕಿಸ್ತಾನ ಇದೀಗ ಒಂದೊಂದೇ ನಾಟಕಗಳನ್ನು ಶುರು ಮಾಡಿದೆ. ಎಲ್‌ಒಸಿ ಬಳಿ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು (Rafale fighter jet) ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಪಾಕಿಸ್ತಾನದ ಕೆಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋದಲ್ಲಿ ಹಸಿರು ಮೈದಾನದಲ್ಲಿ ವಿಮನವೊಂದಕ್ಕೆ ಬೆಂಕಿ ತಗಲಿರುವುದನ್ನು ಕಾಣಬಹುದಾಗಿದೆ. ದಟ್ಟವಾದ ಹೊಗೆ ಆಕಾಶದೆತ್ತರಿಕ್ಕೇರಿದೆ. ಪಾಕಿಸ್ತಾನ ಸೇನೆಯು ಭಾರತೀಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಒಬ್ಬ ಎಕ್ಸ್ ಬಳಕೆದಾರರು "ಪಾಕಿಸ್ತಾನ ಸೇನೆಯು ಎಲ್‌ಒಸಿಯ ಪೂಂಚ್ ವಲಯದಲ್ಲಿ ಭಾರತೀಯ ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.
A Sukhoi fighter jet crashed in a field in the Shirajgaon area of Niphad taluka, Nashik district. Fortunately, both pilots on board managed to bail out safely using parachutes.#Sukhoi #Shirajgaon #Nashik #FighterJetCrashed #FighterJet #LokmatTimes pic.twitter.com/BK12jitKGR
— Lokmat Times (@lokmattimeseng) June 4, 2024
ಸದ್ಯ ವೈರಲ್ ಆಗಿದ್ದ ವಿಡಿಯೋ ಭಾರತ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನ ಹಂಚಿಕೊಂಡ ವಿಡಿಯೋ ಸುಳ್ಳು ಎಂದು ಹೇಳಿದೆ. ಪಾಕಿಸ್ತಾನ ಸೇನೆಯು ಯಾವುದೇ ಭಾರತೀಯ ರಫೇಲ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿಲ್ಲ. ಈ ವೀಡಿಯೊ ವಾಸ್ತವವಾಗಿ 2024 ರಲ್ಲಿ ಮಹಾರಾಷ್ಟ್ರದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಸು-30 ಎಂಕೆಐ ಫೈಟರ್ ಜೆಟ್‌ನ ವಿಡಿಯೋ ಎಂದು ಹೇಳಿದೆ. ವರದಿಯ ಪ್ರಕಾರ, ಭಾರತೀಯ ವಾಯುಪಡೆಯ ಸುಖೋಯ್ Su-30MKI ವಿಮಾನವು ನಾಸಿಕ್ ಜಿಲ್ಲೆಯ ಶಿರಸ್ಗಾಂವ್ ಬಳಿ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಪತನಗೊಂಡಿತು. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರಜಿಗಿದಿದ್ದು, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ವೀಡಿಯೊ ಪ್ರಸ್ತುತ ಭಾರತ-ಪಾಕಿಸ್ತಾನ ಉದ್ವಿಗ್ನತೆಗೆ ಸಂಬಂಧಿಸಿಲ್ಲ ಮತ್ತು ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸುವುದನ್ನು ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಸುದ್ದಿಯನ್ನೂ ಓದಿ: Allahu Akbar: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಹಲವರನ್ನು ರಕ್ಷಿಸಿದ 'ಅಲ್ಲಾಹು ಅಕ್ಬರ್' ಪದದ ಅರ್ಥ, ಮಹತ್ವವೇನು?
ಪಹಲ್ಗಾಮ್ ಉಗ್ರರ ದಾಳಿ ಪೈಶಾಚಿಕ ಕೃತ್ಯದ ಬಳಿಕ ಭಾರತದ ಪ್ರತೀಕಾರ ದಾಳಿಯ ಭೀತಿಯಲ್ಲಿರುವ ಪಾಕಿಸ್ತಾನ, ಇಸ್ಲಾಮಾಬಾದ್, ಲಾಹೋರ್‌ನಲ್ಲಿ ನೋ ಫ್ಲೈ ಝೋನ್ (ಹಾರಾಯ ನಿಷೇಧ ವಲಯ) ಘೋಷಣೆ ಮಾಡಿದೆ. ಮೇ 2 ರವರೆಗೆ ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ವಾಯುಪಡೆ (NOTAM) ನೋಟಿಸ್ ವಿಧಿಸಲಾಗಿದ್ದು, ಗೊತ್ತುಪಡಿಸಿದ ವಾಯುಪ್ರದೇಶದಲ್ಲಿ ಯಾವುದೇ ವಿಮಾನಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.