ನವದೆಹಲಿ: ಭಯೋತ್ಪಾದನೆಯ (terror attack) ವಿರುದ್ಧ ಭಾರತದ ನಿಲುವನ್ನು ಪುನರುಚ್ಚರಿಸಿದ ಭಾರತದ ಸೇನಾ ಮುಖ್ಯಸ್ಥರಾದ ಜನರಲ್ (Indian Army Chief General ) ಉಪೇಂದ್ರ ದ್ವಿವೇದಿ (Upendra Dwivedi) ಅವರು ಪಾಕಿಸ್ತಾನವು (Pakistan) ಭಾರತದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದರೆ ಅದು ಭೌಗೋಳಿಕವಾಗಿ ಇರುವುದಿಲ್ಲ. ಇತಿಹಾಸದ ಭಾಗವಾಗಿ ಬಿಡುವುದು ಎಂದು ಎಚ್ಚರಿಸಿದರು. ದೆಹಲಿಯ (delhi) ಮಾಣೆಕ್ಷಾ ಕೇಂದ್ರದಲ್ಲಿ ಶನಿವಾರ ನಡೆದ 'ಯೂನಿಫಾರ್ಮ್ ಅನ್‌ವೀಲ್ಡ್' ಆಯೋಜಿಸಿದ್ದ ಅಧಿವೇಶನದಲ್ಲಿ ಮಾತನಾಡಿದ ಅವರು ಕಳೆದ ವರ್ಷ ಆಪರೇಷನ್ ಸಿಂದೂರ್‌ಗೆ (Operation Sindoor) ಕಾರಣವಾದ ವಿಷಯಗಳ ಕುರಿತು ಹೇಳಿದರು.
ಭಾರತದ ವಿರುದ್ಧ ಪಾಕಿಸ್ತಾನ ನಡೆಸುವ ಯಾವುದೇ ದುಷ್ಕೃತ್ಯವನ್ನು ಕೂಡ ಸಹಿಸಲಾಗದು ಎಂದ ಅವರು ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಮತ್ತು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ ಅವರು ಭೌಗೋಳಿಕವಾಗಿ ಉಳಿಯುವುದಿಲ್ಲ. ಅವರು ಇತಿಹಾಸವಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬಳಿಕ ಭಾರತೀಯ ಸೇನೆಯು ಮಾಡಿರುವ ಆಪರೇಷನ್ ಸಿಂದೂರ್‌ಗೆ ಕಾರಣವಾದ ವಿಷಯಗಳ ಬಗ್ಗೆ ತಿಳಿಸಿದರು. ಈ ಸಂದರ್ಭಗಳು ಮತ್ತೆ ಬಂದರೆ ಭಾರತೀಯ ಸೇನೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕೂಡ ಹೇಳಿದರು.
ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್‌ನ ಮೊದಲ ವರ್ಷಾಚರಣೆ ಬಳಿಕ ನಡೆದಿರುವ 'ಸೇನಾ ಸಂವಾದ' ಕಾರ್ಯಕ್ರಮದಲ್ಲಿ ಅವರು ಸಂಕ್ಷಿಪ್ತವಾಗಿ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ನೀಡಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಪುನರುಚ್ಚರಿಸಿದರು.
ಏಪ್ರಿಲ್ 22 ರಂದು ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಪಾಕ್ ಬೆಂಬಲಿತ ಉಗ್ರರು 26 ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಗುರುತಿಸಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಮೇ 7 ರಂದು 'ಬ್ರಹ್ಮೋಸ್' ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಬಹವಾಲ್ಪುರದಲ್ಲಿದ್ದ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯನ್ನು ಧ್ವಂಸಗೊಳಿಸಿತು.
ಸುಖೋಯ್-30 MKI ಮತ್ತು ರಾಫೇಲ್ ಯುದ್ಧ ವಿಮಾನಗಳನ್ನು ಬಳಸಿ ಭಾರತದ ಗಡಿಯೊಳಗೆ ಇದ್ದುಕೊಂಡೇ ಉಗ್ರರ ತಾಣಗಳ ಮೇಲೆ ನಿಖರ ದಾಳಿ ನಡೆಸಿತ್ತು. ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಅನಂತರ ಮೇ 10ರಂದು ಸಂಘರ್ಷವನ್ನು ಕೊನೆಗೊಳಿಸಲು ನವದೆಹಲಿ ಮತ್ತು ಇಸ್ಲಾಮಾಬಾದ್ ಒಪ್ಪಂದಕ್ಕೆ ಬಂದವು.