ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾದ ಮುಖವಾಡ ಕಳಚಿದ ಭಾರತ: 'ಆಪರೇಷನ್ ಸಿಂದೂರ್' ವೇಳೆ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದನ್ನು ಒಪ್ಪಿಕೊಂಡ ಡ್ರ್ಯಾಗನ್ ರಾಷ್ಟ್ರ!

‘ಆಪರೇಷನ್ ಸಿಂಧೂರ್’ ವೇಳೆ ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ ಒಪ್ಪಿಕೊಂಡ ಬೆನ್ನಲ್ಲೇ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳ ಬಗ್ಗೆ ಜವಾಬ್ದಾರಿಯುತ ದೇಶಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಭಾರತ ಎಚ್ಚರಿಸಿದೆ. ಚೀನಾದ J-10CE ಯುದ್ಧವಿಮಾನಗಳಿಗೆ ತಾಂತ್ರಿಕ ನೆರವು ನೀಡಿದ್ದ ವಿಚಾರ ಬಹಿರಂಗವಾದ ಬಳಿಕ, ಭಾರತ ಚೀನಾ-ಪಾಕಿಸ್ತಾನ ಸಂಬಂಧಗಳ ವಿರುದ್ಧ ಕಿಡಿಕಾರಿದೆ.

ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು: ಭಾರತದಿಂದ ಖಡಕ್ ಎಚ್ಚರಿಕೆ

ಭಾರತೀಯ ಸೇನೆ -

Profile
Sushmitha Jain May 13, 2026 6:47 PM

ನವದೆಹಲಿ: ಕಳೆದ ವರ್ಷ ನಡೆದ 'ಆಪರೇಷನ್ ಸಿಂದೂರ್ (Operation Sindoor)' ಸಮಯದಲ್ಲಿ ಪಾಕಿಸ್ತಾನ (Pakistan)ಕ್ಕೆ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ (Chaina) ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಭಾರತವು ಚೀನಾಕ್ಕೆ ಅತ್ಯಂತ ಖಾರವಾದ ಸಂದೇಶ ರವಾನಿಸಿದೆ. ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರಗಳಿಗೆ ಬೆಂಬಲ ನೀಡುವ ಮೊದಲು "ಜವಾಬ್ದಾರಿಯುತ ರಾಷ್ಟ್ರಗಳು (responsible nations)" ತಮ್ಮ ನಡೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಭಾರತ ಕುಟುಕಿದೆ.

ಭಾರತದ ಆಕ್ಷೇಪ ಮತ್ತು ಚೀನಾದ ನಡೆಯ ಟೀಕೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಾರಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ರಣಧೀರ್ ಜೈಸ್ವಾಲ್, "ಭಯೋತ್ಪಾದಕ ಮೂಲಸೌಕರ್ಯಗಳನ್ನು ರಕ್ಷಿಸಲು ಪ್ರಯತ್ನಿಸುವ ರಾಷ್ಟ್ರಗಳಿಗೆ ಬೆಂಬಲ ನೀಡುವುದು ಜಾಗತಿಕ ವೇದಿಕೆಯಲ್ಲಿ ಅವರ ಘನತೆ ಮತ್ತು ನಿಲುವಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಆ ರಾಷ್ಟ್ರಗಳೇ ಯೋಚಿಸಬೇಕು," ಎಂದು ಹೇಳಿದರು. ಇಂತಹ ಕ್ರಮಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆ ದೇಶಗಳ ವಿಶ್ವಾಸಾರ್ಹತೆಯನ್ನು ಕುಂದಿಸುತ್ತವೆ ಎಂದು ಅವರು ಎಚ್ಚರಿಸಿದರು.

ಆಪರೇಷನ್ ಸಿಂದೂರ್

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಭೂಭಾಗದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ 'ಆಪರೇಷನ್ ಸಿಂದೂರ್' ಮೂಲಕ ನಿಖರವಾದ ಮತ್ತು ಯೋಜಿತ ದಾಳಿ ನಡೆಸಿತ್ತು. ಭಾರತದ ಪ್ರಹಾರಕ್ಕೆ ತತ್ತರಿಸಿದ ಇಸ್ಲಾಮಾಬಾದ್ ಕೇವಲ ಮೂರೇ ದಿನಗಳಲ್ಲಿ ಕದನ ವಿರಾಮಕ್ಕಾಗಿ ನವದೆಹಲಿಗೆ ಮೊರೆ ಹೋಗಿತ್ತು.

ಇರಾನ್‌ ಮೇಲೆ ಅಮೆರಿಕದಿಂದ ಮತ್ತಷ್ಟು ಭೀಕರ ದಾಳಿ? ಎಐ ಇಮೇಜ್‌ ಮೂಲಕ ಡೊನಾಲ್ಡ್‌ ಟ್ರಂಪ್‌ ನೀಡಿದ ಸೂಚನೆಗೆ ಜಗತ್ತೇ ಕಂಪಿಸಿದ್ದೇಕೆ?

ಪಾಕಿಸ್ತಾನಕ್ಕೆ ಚೀನಾ ನೀಡಿದ ಸಹಾಯವೇನು?

ಇತ್ತೀಚೆಗೆ ಚೀನಾದ ಸರ್ಕಾರಿ ಸುದ್ದಿವಾಹಿನಿ 'ಸಿಸಿಟಿವಿ' ನೀಡಿದ ವರದಿಯ ಪ್ರಕಾರ, ಚೀನಾದ ಏವಿಯೇಷನ್ ​​ಇಂಡಸ್ಟ್ರಿ ಕಾರ್ಪೊರೇಷನ್‌ನ ಎಂಜಿನಿಯರ್‌ಗಳು ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸಿಬ್ಬಂದಿಯೊಂದಿಗೆ ಕೆಲಸ ಮಾಡಿದ್ದರು. ಮುಖ್ಯವಾಗಿ ಚೀನಾ ನಿರ್ಮಿತ J-10CE ಫೈಟರ್ ಜೆಟ್‌ಗಳು ಯುದ್ಧಭೂಮಿಯಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಈ ಎಂಜಿನಿಯರ್‌ಗಳು ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿದ್ದರು.

ವಿಫಲವಾದ ಜಾಗತಿಕ ಬೆಂಬಲ

ಕೇವಲ ಚೀನಾ ಮಾತ್ರವಲ್ಲದೆ, ಟರ್ಕಿ ಕೂಡ ಪಾಕಿಸ್ತಾನಕ್ಕೆ 'ಬೈರಕ್ತರ್' ಡ್ರೋನ್‌ಗಳನ್ನು ಪೂರೈಸಿತ್ತು. ಚೀನಾವು ಭಾರತೀಯ ಸೇನೆಯ ನಿಯೋಜನೆಯ ಬಗ್ಗೆ ಪಾಕಿಸ್ತಾನಕ್ಕೆ ಲೈವ್ ಮಾಹಿತಿಯನ್ನು ನೀಡಿತ್ತು ಎಂದು ಈ ಹಿಂದೆಯೇ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಬಹಿರಂಗಪಡಿಸಿದ್ದರು. ಆದರೆ, ಇಷ್ಟೆಲ್ಲಾ ವಿದೇಶಿ ನೆರವು ಇದ್ದರೂ ಪಾಕಿಸ್ತಾನಕ್ಕೆ ಭಾರತದ ಆಕ್ರಮಣವನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತೀಯ ವಾಯುಪಡೆಯು ಪಾಕಿಸ್ತಾನದ ಒಳಗಿರುವ 9 ಭಯೋತ್ಪಾದಕ ಶಿಬಿರಗಳು ಮತ್ತು 11 ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿತ್ತು.

ಈ ಘಟನೆಯು ಚೀನಾ ಮತ್ತು ಪಾಕಿಸ್ತಾನದ ನಡುವಿನ "ಆಪ್ತ ಸ್ನೇಹ"ದ ಅಸಲಿ ಮುಖವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿಟ್ಟಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಮಾರ್ಮಿಕವಾಗಿ ನುಡಿದಿದೆ.