ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bomb Threat: "ದೆಹಲಿಯನ್ನು ಖಲಿಸ್ತಾನವನ್ನಾಗಿ ಮಾಡುತ್ತೇವೆ"; ಬೆಳ್ಳಂಬೆಳಗ್ಗೆ ಹತ್ತಾರು ಶಾಲೆಗಳಿಗೆ ಬಾಂಬ್ ಬೆದರಿಕೆ!

ದೆಹಲಿಯ ಹತ್ತಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್​​ಗಳು ಬಂದಿವೆ. ಇದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಆತಂಕಕ್ಕೆ ದೂಡಿದೆ. ಮಾಹಿತಿ ಸಿಕ್ಕ ತಕ್ಷಣವೇ ಶೋಧ ತಂಡ ಸ್ಥಳಕ್ಕೆ ತಲುಪಿ ಶಾಲೆಗಳಲ್ಲಿ ಶೋಧ ಕಾರ್ಯ ಆರಂಭಿಸಿವೆ.ಲಾರೆಟೋ ಕಾನ್ವೆಂಟ್ ಶಾಲೆಗೆ (ದೆಹಲಿ ಕ್ಯಾಂಟ್) ಬೆಳಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆಗೆ (ಸಿ.ಆರ್.ಪಾರ್ಕ್) 9:18ಕ್ಕೆ, ಕಾರ್ಮೆಲ್ ಶಾಲೆಗೆ (ಆನಂದ್ ನಿಕೇತನ್) 9:22ಕ್ಕೆ ಹಾಗೂ ಕಾರ್ಮೆಲ್ ಶಾಲೆಗೆ (ಸೆಕ್ಟರ್ 23, ದ್ವಾರಕಾ) 9:25ಕ್ಕೆ ಬೆದರಿಕೆ ಕರೆಗಳು ಬಂದಿವೆ. ಶಾಲೆಗಳಿಗೆ ಬಂದ ಬೆದರಿಕೆ ದೂರವಾಣಿ ಮೂಲಕ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ.

ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್!

ಸಾಂದರ್ಭಿಕ ಚಿತ್ರ -

Profile
Sushmitha Jain Feb 9, 2026 12:19 PM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳಿಗೆ(School) ಇಂದು(ಸೋಮವಾರ) ಬೆಳಿಗ್ಗೆ ಸರಣಿ ಬಾಂಬ್ ಬೆದರಿಕೆ ಕರೆಗಳು(Bomb Threat) ಮತ್ತು ಇಮೇಲ್ ಸಂದೇಶಗಳು ಬಂದಿರುವ ಘಟನೆ ನಡೆದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಆಂತಕಕ್ಕೀಡು ಮಾಡಿದೆ. ಇತ್ತೀಚಿನ ದಿನಗಳಲ್ಲಿ ದೆಹಲಿಯಂತಹ ಮಹಾನಗರಗಳಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಗಂಭೀರ ಕಳವಳ ವ್ಯಕ್ತಪಡಿಸುತ್ತಿವೆ. ಮಾಹಿತಿ ಸಿಕ್ಕ ತಕ್ಷಣವೇ ಶೋಧ ತಂಡ ಸ್ಥಳಕ್ಕೆ ತಲುಪಿ ಶಾಲೆಗಳಲ್ಲಿ ಶೋಧ ಕಾರ್ಯ ಆರಂಭಿಸಿವೆ.

ಲಾರೆಟೊ ಕಾನ್ವೆಂಟ್, ಡಾನ್ ಬಾಸ್ಕೊ ಮತ್ತು ಕಾರ್ಮೆಲ್ ಸೇರಿದಂತೆ ಹಲವು ಶಾಲೆಗಳು ಈ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದವು. ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಆವರಣಗಳನ್ನು ಖಾಲಿ ಮಾಡಿಸಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ ಸುಮಾರು 8:30ರಿಂದ 9:00 ಗಂಟೆಯೊಳಗೆ ವಿವಿಧ ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಎಲ್ಲಾ ಶಾಲೆಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದಾರೆ. ಈಗಾಗಲೇ ಶಾಲಾ ಆವರಣಗಳಲ್ಲಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದ್ದು, ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಸಂಪೂರ್ಣ ಸುರಕ್ಷತೆ ಖಚಿತಪಡಿಸಿಕೊಳ್ಳುವವರೆಗೆ ತಪಾಸಣೆ ಮುಂದುವರಿಸಲಾಗುತ್ತಿದೆ.

Bengaluru Hotels: ಇನ್ಮುಂದೆ ಹೋಟೆಲಲ್ಲಿ ಗಂಟೆಗಟ್ಟಲೆ ಮಾತಾಡ್ತಾ ಕುಳಿತಿರುವಂತಿಲ್ಲ! ಅದಕ್ಕೂ ಟೇಬಲ್‌ ಚಾರ್ಜ್!

ದೆಹಲಿಯ ಶಾಲೆಗಳಿಗೆ ಇಂತಹ ಬಾಂಬ್ ಬೆದರಿಕೆಗಳು ಇದೇ ಮೊದಲ ಬಾರಿಗೆ ಬಂದಿಲ್ಲ. ಜುಲೈ 2025ರಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದು, ಆ ಸಂದರ್ಭದಲ್ಲೂ ಹೆಚ್ಚಿನವು ಹುಸಿ ಬೆದರಿಕೆಗಳಾಗಿದ್ದವು.

ಇನ್ನು ಕಳೆದ ತಿಂಗಳು ದೆಹಲಿಯ ನಾಲ್ಕು ಖಾಸಗಿ ಶಾಲೆಗಳು ಹಾಗೂ ಪಂಜಾಬ್-ಹರಿಯಾಣ ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವ ಘಟನೆ ನಡೆದಿತ್ತು. ಇದರಿಂದ ನಗರದೆಲ್ಲೆಡೆ ಆತಂಕ ಸೃಷ್ಟಿಯಾಗಿ, ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಗಳಿಗೆ ಧಾವಿಸಿ ಪರಿಶೀಲನೆ ಆರಂಭಿಸಿ, ಪ್ರಕರಣದ ಕುರಿತು ತನಿಖೆ ನಡೆಸಿದ್ದರು.

ಬೆದರಿಕೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸ್ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಸಮಗ್ರ ಶೋಧ ಕಾರ್ಯಾಚರಣೆ ನಡೆಸಿದವು. ಅಂದು ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿ ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಹುಸಿ ಬೆದರಿಕೆ ಇರಬಹುದೆಂಬ ಶಂಕೆಯೂ ವ್ಯಕ್ತವಾಗಿತ್ತು.

ಇದಕ್ಕೂ ಮೊದಲು ಬುಧವಾರ ಚಂಡೀಗಢ, ಗುರುಗ್ರಾಮ್ ಹಾಗೂ ಹರಿಯಾಣದ ಹಲವು ಭಾಗಗಳಲ್ಲಿಯೂ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ಆ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು.