ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪ್ಪಾ ನಾನು ಬಾರಾಮತಿಗೆ ಹೋಗುತ್ತಿದ್ದೇನೆ; ವಿಮಾನ ಪತನಕ್ಕೂ ಮುನ್ನ ಫ್ಲೈಟ್‌ ಸಿಬ್ಬಂದಿ ತಂದೆಗೆ ಹೇಳಿದ್ದೇನು?

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ಅಪಘಾತದ ನಂತರ, ವಿಮಾನ ಸಿಬ್ಬಂದಿ ಪಿಂಕಿ ಮಾಲಿ ಮತ್ತು ಆಕೆಯ ತಂದೆ ಶಿವಕುಮಾರ್ ಮಾಲಿ ನಡುವಿನ ಕೊನೆಯ ಫೋನ್ ಸಂಭಾಷಣೆ ಹೊರಬಿದ್ದಿದೆ.

ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ಅಪಘಾತದ (Ajit Pawar Plane Crash) ನಂತರ, ವಿಮಾನ ಸಿಬ್ಬಂದಿ ಪಿಂಕಿ ಮಾಲಿ ಮತ್ತು ಆಕೆಯ ತಂದೆ ಶಿವಕುಮಾರ್ ಮಾಲಿ ನಡುವಿನ ಕೊನೆಯ ಫೋನ್ ಸಂಭಾಷಣೆ ಹೊರಬಿದ್ದಿದೆ. ಮುಂಬೈನ ವರ್ಲಿಯ ನಿವಾಸಿ ಪಿಂಕಿ ತನ್ನ ತಂದೆಗೆ, "ಪಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ವಿಮಾನದಲ್ಲಿ ಹೋಗುತ್ತಿದ್ದೇನೆ. ಅವರನ್ನು ಬಿಟ್ಟು ಬಂದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ. ನಾವು ನಾಳೆ ಮಾತನಾಡೋಣ ಎಂದು ಹೇಳಿದ್ದಾಳೆ. ಇದಾದ ಮರುದಿನವೇ ಆಕೆಯ ಮನೆಗೆ ಸಾವಿನ ಸುದ್ದಿ ಬರ ಸಿಡಿಲಿನಂತೆ ತಿಳಿಯಿತು.

ನಾನು ಅವಳಿಗೆ, 'ನಾವು ನಾಳೆ ನಿಮ್ಮ ಕೆಲಸದ ನಂತರ ಮಾತನಾಡೋಣ' ಎಂದು ಹೇಳಿದೆ. ಆದರೆ ಆ ನಾಳೆ ಎಂದಿಗೂ ಬರುವುದಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಅಂತಹ ಘಟನೆಗಳ ಬಗ್ಗೆ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲ. ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ಮಾಡಲು ನನಗೆ ಅವಳ ದೇಹವು ಬೇಕು. ನಾನು ಬಯಸುವುದು ಇಷ್ಟೇ ಎಂದು ಅವರ ತಂದೆ ಹೇಳಿದರು.

ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ವಿಮಾನ ಸೇವಕಿ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ಘಟನೆಯಲ್ಲಿ ಮೃತಪಟ್ಟಿದ್ದಾರೆ.

Ajit Pawar: ಅಜಿತ್‌ ಪವಾರ್‌ ರಾಜಕೀಯ ಬೆನ್ನೆಲುಬು ಈಕೆ; ಪತ್ನಿ ಸುನೇತ್ರಾ ಪವಾರ್‌ ಬಗ್ಗೆ ನಿಮಗೆಷ್ಟು ಗೊತ್ತು?

ವಿಮಾನದ ವಿವರಗಳ ಪ್ರಕಾರ, ವಿಮಾನವು ಬೆಳಿಗ್ಗೆ 8:10 ಕ್ಕೆ ಮುಂಬೈನಿಂದ ಹೊರಟು 8:45 ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು, 8:50 ಕ್ಕೆ ಅಪಘಾತಕ್ಕೀಡಾಯಿತು. ಫೆಬ್ರವರಿ 5 ರಂದು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಗೆ ಮುನ್ನ ಪುಣೆ ಜಿಲ್ಲೆಯಲ್ಲಿ ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಪವಾರ್ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.