ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆವರೆಗೆ; ಯಾವಾಗ, ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್‌

Dharmendra Pradhan Resigns: ನೀಟ್‌ ಪ್ರಶ್ನೆಪತ್ರಿಕೆ ಅಕ್ರಮದ ವಿರುದ್ಧದ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ. ಕೇಂದ್ರ ಸಿಕ್ಷನ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. ವಿಪಕ್ಷಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಈ ಬೆಳವನಿಗೆಯ ಹಿನ್ನೆಲೆಯಲ್ಲಿ ಇದುವರೆಗಿನ ಘಟನೆಗಳ ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.

ದೆಹಲಿಯಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಧರ್ಮೇಂದ್ರ ಪ್ರಧಾನ್

ದೆಹಲಿ, ಜು. 25: ಜೆನ್‌ ಝೀ ತಲೆಮಾರು ಮನಸ್ಸು ಮಾಡಿದರೇ ಏನೂ ಮಾಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಯುವಜನತೆ ದೇಶದಲ್ಲಿ ಮತ್ತೊಂದು ಕ್ರಾಂತಿಯನ್ನೇ ಮಾಡಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಸಲ್ಲಿಸಿದ್ದಾರೆ (Dharmendra Pradhan Resigns). ದೇಶದಲ್ಲೇ ಸಂಚಲನ ಸೃಷ್ಟಿಸಿದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಕೇಂದ್ರ ಸರ್ಕಾರ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಪ್ರಧಾನ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP), ವಿಪಕ್ಷಗಳ ಹೋರಾಟಕ್ಕೆ ಸದ್ಯ ಜಯ ಲಭಿಸಿದ್ದು, ಕೇಂದ್ರ ದ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ಶನಿವಾರ (ಜುಲೈ 25) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪರೀಕ್ಷಾ ಅಕ್ರಮಕ್ಕೆ ಕಠಿಣ ಸಜೆಯ ನಿಯಮ ಜಾರಿಗೊಳಿಸಲಾಗುವುದು ಎಂದು ಪ್ರದಾನಿ ಘೋಷಿಸಿದರೂ ಪರತಿಭಟನಾಕಾರರು ಪ್ರಧಾನ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗೆ ಒಪ್ಪಿಕೊಂಡಿತ್ತು. ಹೀಗಾಗಿ ಪ್ರಧಾನ್‌ ರಾಜೀನಾಮೆ ನೀಡಿದ್ವಿದು,ಪಕ್ಷಗಳು ಮತ್ತು ಹೋರಾಟಗಾರರು ಸ್ವಾಗತಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್‌ ಅವರ ಎಕ್ಸ್‌ ಪೋಸ್ಟ್‌:



ಇದುವರೆಗಿನ ಬೆಳವಣಿಗೆಗಳ ವಿವರ

ಮೇ 3: ನೀಟ್‌-ಯುಜಿ 2026 ಆಯೋಜನೆ. ಪರೀಕ್ಷೆ ಬರೆದ ಸುಮಾರು 22 ಅಭ್ಯರ್ಥಿಗಳು.

ಮೇ 12: ಪ್ರಶ್ನೆಪತ್ರಿಕೆ ಸೋರಿಕೆ ಸಾಬೀತಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು.

ಮೇ 16: ಅಭಿಜಿತ್‌ ದಿಪ್ಕೆಯಿಂದ ಜನತಾ ಕ್ರಾಕೋಚ್‌ ಪಾರ್ಟಿ ಸ್ಥಾಪನೆ.

ಜೂನ್‌ 2: ಪರೀಕ್ಷೆ ಅಕ್ರಮ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಭುಗಿಲೆದ್ದ ಆಕ್ರೋಶ. ಪ್ರತಿಭಟನೆ ಆರಂಭ.

ಜೂನ್‌ 6: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಅಭಿಜಿತ್‌ ದಿಪ್ಕೆ ಭಾರತಕ್ಕೆ ಹಿಂತಿರುಗಿ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿದರು.

ಜೂನ್‌ 11: ಸಿಜೆಪಿ 5 ಅಂಶಗಳ ಪ್ರಣಾಳಿಕೆ ಬಿಡುಗಡೆಗೊಳಿಸಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಬೇಡಿಕೆ ಇಟ್ಟಿತು.

ಜೂನ್‌ 20: ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಿಜೆಪಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಆರಂಭಿಸಿತು.

ಜೂನ್‌ 28: ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್ಚುಕ್‌ ಸಿಜೆಪಿಗೆ ಬೆಂಬಲ ಘೋಷಿಸಿ ಜಂತರ್‌ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಜುಲೈ 9: ಮಳೆಗಾಲದ ಅಧಿವೇಶನದ ಮೊದಲ ದಿನ ಸಂಸತ್‌ನತ್ತ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ಸಿಜೆಪಿ.

ಜುಲೈ 16: ಸೋನಮ್‌ ವಾಂಗ್ಚುಕ್‌ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಅವರ ಜೀವ ಉಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್‌.

ಜುಲೈ 18: ಜಂತರ್‌ ಮಂತರನಿಂದ ಸೋನಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು.

ಜುಲೈ 20: ಸಂಸತ್‌ಗೆ ಮುತ್ತಿಗೆ ಹಾಕಲು ಹೊರಟ ಸಾವಿರಾರು ಪ್ರತಿಭಟನಾಕಾರರು. ಕೇಂದ್ರ ಸರ್ಕಾರ ಮೊದಲ ಬಾರಿ ಸಿಜೆಪಿ ಮುಖಂಡರ ಜತೆ ಮಾತುಕತೆ ನಡೆಸಿತು.

ಜುಲೈ 20ರಿಂದ 24: ಸಂಸತ್‌ನಲ್ಲಿ ಗದ್ದಲ ಎಬ್ಬಿಸಿದ ವಿಪಕ್ಷಗಳು ಪ್ರಧಾನ್‌ ರಾಜೀನಾಮೆಗೆ ಪಟ್ಟು ಹಿಡಿದವು.

ದೆಹಲಿ ಪ್ರತಿಭಟನೆ ಕಾವಿನ ನಡುವೆ ನೀಟ್‌ ಸಂಪೂರ್ಣ ರದ್ದುಗೊಳಿಸಬೇಕು ಎಂದ ತಮಿಳುನಾಡು ಸಿಎಂ ವಿಜಯ್

ಜುಲೈ 21: ನೇರವಾಗಿ ಹೋರಾಟಕ್ಕೆ ಧುಮುಕಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಭಾರಿ ಪ್ರತಿಭಟನೆ.

ಜುಲೈ 23: ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಪ್ರಾಸ್ಟ್-ಟ್ರ್ಯಾಕ್‌ ಕೋರ್ಟ್‌ ಘೋಷಿಸಿದ ನರೇಂದ್ರ ಮೋದಿ.

ಜುಲೈ 24: ಕೇಂದ್ರದ ಭರವಸೆ ಬಳಿಕ ಉಪವಾಸ ಸತ್ಯಾಗ್ರಹ ಹಿಂಪಡೆದ ಸೋನಮ್‌ ವಾಂಗ್ಚುಕ್‌. ಸಿಜೆಪಿ-ಕೇಂದ್ರದ 2ನೇ ಸುತ್ತಿನ ಮಾತುಕತೆ.

ಜುಲೈ 25: ಸಚಿವ ಸ್ಥಾನ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author