ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಪ್ರತಿಭಟನೆ ಕಾವಿನ ನಡುವೆ ನೀಟ್‌ ಸಂಪೂರ್ಣ ರದ್ದುಗೊಳಿಸಬೇಕು ಎಂದ ತಮಿಳುನಾಡು ಸಿಎಂ ವಿಜಯ್

ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳು ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನೀಟ್‌ನಲ್ಲಿನ ಅಕ್ರಮ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ಸೋಮವಾರ ಪೊಲೀಸ್ ದೌರ್ಜನ್ಯ ನಡೆದಿರುವುದನ್ನು ವಿರೋಧ ಪಕ್ಷಗಳು ವಿರೋಧಿಸಿವೆ. ಇವುಗಳ ಸಾಲಿನಲ್ಲಿ ಈಗ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ಕೂಡ ಸೇರಿಕೊಂಡಿದೆ.

ವಿದ್ಯಾರ್ಥಿಗಳ ಪ್ರತಿಭಟನೆ: ವಿಪಕ್ಷಗಳಿಗೆ ಬೆಂಬಲ ಘೋಷಿಸಿದ ಟಿವಿಕೆ

ಸಂಗ್ರಹ ಚಿತ್ರ -

ಚೆನ್ನೈ: ದೇಶಾದ್ಯಂತ ನಡೆಸುವ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು(Medical Entrance Exam) ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಜೋಸೆಫ್ ವಿಜಯ್ (Chief Minister Joseph Vijay) ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ( Tamilaga Vettri Kazhagam) ಆಗ್ರಹಿಸಿದೆ. ದೆಹಲಿಯಲ್ಲಿ (Delhi) ಸೋಮವಾರದಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ (Protest) ವಿರೋಧ ಪಕ್ಷಗಳು ಸಾಥ್ ನೀಡಿದ ಬೆನ್ನಲ್ಲೇ ತಮಿಳುನಾಡಿನ ಆಡಳಿತಾರೂಢ ಟಿವಿಕೆಯು, ನೀಟ್‌ನಲ್ಲಿನ ಅಕ್ರಮಗಳನ್ನು ವಿರೋಧಿಸುವುದಲ್ಲದೆ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ಮೇ ತಿಂಗಳಿನಿಂದ ನೀಟ್‌ನಲ್ಲಿನ ಅಕ್ರಮ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನೀಟ್‌ ವಿವಾದ; ರಾಜಕೀಯಕ್ಕಾಗಿ ಬಳಸಿಕೊಳ್ಳಬೇಡಿ ಎಂದು ರಾಹುಲ್ ಗಾಂಧಿಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು
ಪ್ರತಿಭಟನಾಕಾರರು ಸೋಮವಾರ ಸಂಸತ್ ಚಲೋ ಅಭಿಯಾನವನ್ನು ನಡೆಸಿದ್ದು, ಈ ವೇಳೆ ಅವರ ಮೇಲೆ ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಿದ್ದಾರೆ. ಇದನ್ನು ವಿರೋಧಿಸಿ ಮಂಗಳವಾರ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಪ್ರಾರಂಭಿಸಿವೆ. ಇದರ ಬೆನ್ನಲ್ಲೇ ಈಗ ಟಿವಿಕೆಯು ವಿದ್ಯಾರ್ಥಿಗಳನ್ನು ಬೆಂಬಲಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ತನ್ನದು ರಾಜಿಯಾಗದ ಮತ್ತು ದೃಢವಾದ ನಿಲುವು ಎಂದು ತನ್ನ ಹೇಳಿಕೆಯಿಂದ ತೋರಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷ, ವೈದ್ಯಕೀಯ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತಗಳಿಗಾಗಿ ಜನರನ್ನು ವಂಚಿಸುವ ಮೋಸದ ರಾಜಕೀಯದಲ್ಲಿ ತಾನು ಎಂದಿಗೂ ತೊಡಗುವುದಿಲ್ಲ ಎಂದು ಹೇಳಿದ್ದು ಈ ಮೂಲಕ ಡಿಎಂಕೆ ಮೇಲೆ ದಾಳಿ ಮಾಡಿದೆ.

2021ರ ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಅಧಿಕಾರಕ್ಕೆ ಬಂದರೆ ನೀಟ್ ಅನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿತ್ತು. ಆದರೆ ಇದನ್ನು ಈಗ ಟಿವಿಕೆ ನೆನಪಿಸಿದೆ.

ದೆಹಲಿಯ ಕನ್ನಾಟ್ ಪ್ರದೇಶದಲ್ಲಿ ತಡರಾತ್ರಿ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ

ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಟಿವಿಕೆಯು ಸಮಸ್ಯೆ ಪರಿಹಾರಕ್ಕೆ ಸಲಹೆಯನ್ನು ನೀಡಿದೆ. ಇದರಲ್ಲಿ ಮುಖ್ಯವಾಗಿ ಶಿಕ್ಷಣವನ್ನು ಸಮಕಾಲೀನ ಪಟ್ಟಿಯಿಂದ ಸಂವಿಧಾನದ ರಾಜ್ಯ ಪಟ್ಟಿಗೆ ಬದಲಾಯಿಸಬೇಕು. ಇದಕ್ಕಾಗಿ ಯಾವುದೇ ಕಾನೂನು ಅಥವಾ ಕಾರ್ಯವಿಧಾನದ ಅಡೆತಡೆಗಳು ಇದ್ದಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲು ಮಧ್ಯಂತರ ಕ್ರಮವಾಗಿ ವಿಶೇಷ ಸಮಕಾಲೀನ ಪಟ್ಟಿಯನ್ನು ರಚಿಸಬೇಕು. ಇದರಿಂದ ವೈದ್ಯಕೀಯ ಶಿಕ್ಷಣ ಸೇರಿದಂತೆ ಶಿಕ್ಷಣದ ಮೇಲೆ ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ಸಿಗುತ್ತದೆ. ಇದರಿಂದ ಶಾಶ್ವತ ಮತ್ತು ಮಧ್ಯಂತರ ಪರಿಹಾರ ಎರಡು ಕೂಡ ಸಾಧ್ಯವಿದೆ ಎಂದು ಪಕ್ಷ ಹೇಳಿದೆ.