ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ: ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ
ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ: ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ
![ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ: ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ](https://cdn-vishwavani-prod.hindverse.com/media/original_images/image-0957b69a-d2cf-4272-ae13-04aa28c72514.jpg)
![Profile](https://vishwavani.news/static/img/user.png)
![image-7601697d-a7c6-47ea-b2e1-f944465bd26a.jpg](https://cdn-vishwavani-prod.hindverse.com/media/images/image-7601697d-a7c6-47ea-b2e1-f944465bd26a.max-1200x800.jpg)
![image-952967b8-6046-4fc1-a33b-141e0f61759f.jpg](https://cdn-vishwavani-prod.hindverse.com/media/images/image-952967b8-6046-4fc1-a33b-141e0f61759f.max-1200x800.jpg)
ನವದೆಹಲಿ: ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ. ಹಬ್ಬದ ಮೂಡ್ ನಲ್ಲಿಯೇ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದ್ದಾರೆ.
5ನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, "ನೀವು ಮೊದಲ ಬಾರಿಗೆ ಪರೀಕ್ಷೆಗಳನ್ನು ಬರೆಯುತ್ತಿಲ್ಲ.
ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವವರು ಯಾರೂ ಇಲ್ಲ. ಪದೇ ಪದೇ ಪರೀಕ್ಷೆಗೆ ಕುಳಿತುಕೊಳ್ಳುವ ಮೂಲಕ ನಾವು ಪರೀಕ್ಷೆಯ ಪುರಾವೆಯಾಗಿದ್ದೇವೆ. ನಿಮ್ಮ ಮುಂಬರುವ ಪರೀಕ್ಷೆಯ ಸಮಯವನ್ನು ನಿಮ್ಮ ದಿನಚರಿಯಂತೆಯೇ ಅದೇ ಸುಲಭ ವಾಗಿ ಕಳೆಯಿರಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಭಯಭೀತ ವಾತಾವರಣದಿಂದ ದೂರವಿರಬೇಕು. ನೀವು ನೇರವಾಗಿ ಕುಳಿತುಕೊಳ್ಳ ಬೇಕು ಎಂದುಕೊಂಡಿದ್ದರೂ ದೇಹ ಗೂನಾಗುತ್ತೆ. ಇದೇ ಥರ ಮನಸ್ಸೂ ಅಷ್ಟೇ, ನಮಗೆ ಮೋಸ ಮಾಡುತ್ತೆ. ನಮ್ಮ ಮನಸ್ಸು ನಮಗೆ ಮೋಸ ಮಾಡಲು ಬಿಡಬಾರದು. ಮನಸ್ಸಿಗೆ ಯಾವುದು ಒಳ್ಳೇದು ಅನ್ನಿಸುತ್ತೋ ಅದರ ಹಿಂದೆ ಓಡುತ್ತದೆ.
ಆನ್‌ಲೈನ್ ಶಿಕ್ಷಣದ ವ್ಯಾಪಕ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಗಳು, ಜ್ಞಾನ ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿ ಯಾಗಿದೆ. ಆದರೆ, ಆಫ್‌ಲೈನ್ ಶಿಕ್ಷಣವು ಆ ಜ್ಞಾನ ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗು ತ್ತದೆ.
'ಆಫ್‌ಲೈನ್‌ನಲ್ಲಿ ಏನಾಗುತ್ತದೆಯೋ ಅದೇ ಆನ್‌ಲೈನ್‌ನಲ್ಲೂ ನಡೆಯುತ್ತದೆ. ನಮಗೆ ಕಲಿಕೆಯ ಮಾಧ್ಯಮವು ಸಮಸ್ಯೆಯಾಗ ಬಾರದು. ನಮ್ಮ ಮನಸ್ಸು ವಿಷಯದೊಳಗೆ ಮುಳುಗಿದರೆ, ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ' ಎಂದು ತಿಳಿಸಿ ದರು.
ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವಾಗ ತಮ್ಮನ್ನು ತಾವು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ನೀವು ನಿಜವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಪಾಲಕರು ಕೆಲವೊಮ್ಮೆ ತಮ್ಮ ಮಕ್ಕಳ ಶಕ್ತಿ ಮತ್ತು ಆಸಕ್ತಿಗಳನ್ನು ಗಮನಿಸಲು ವಿಫಲರಾಗುತ್ತಾರೆ. ಪ್ರತಿ ಮಗುವೂ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತದೆ. ಇದನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿಯವರ ಪರೀಕ್ಷಾ ಪೆ ಚರ್ಚಾವನ್ನು 2018 ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ. ಪರೀಕ್ಷಾ ಪೆ ಚರ್ಚಾ 2022 ಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ವರ್ಷದ ಪರೀಕ್ಷಾ ಪೆ ಚರ್ಚಾಗಾಗಿ ನೋಂದಾಯಿಸಿಕೊಂಡಿದ್ದಾರೆ.