ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪುಟಿನ್ ಜತೆಗಿನ ಪ್ರಧಾನಿ ಮೋದಿ ಫೋಟೊಗೆ ಜನರ ಬಹುಪರಾಕ್; ಎಕ್ಸ್‌ನ ಅತಿ ಹೆಚ್ಚು ಇಷ್ಟವಾದ ಪೋಸ್ಟ್ ಇದು

People admire Modi’s photo with Putin: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರ ಫೋಟೊ ಪೋಸ್ಟ್ ಆದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ಬಂದಿದೆ. ಈ ಪೋಸ್ಟ್‌ ಅನ್ನು ನೆಟ್ಟಿಗರು ರೀಪೋಸ್ಟ್‌, ಶೇರ್, ಲೈಕ್‌ ಮಾಡಿದ್ದಾರೆ.

ನರೇಂದ್ರ ಮೋದಿ ಮತ್ತು ವ್ಲಾದಿಮಿರ್ ಪುಟಿನ್ (ಸಂಗ್ರಹ ಚಿತ್ರ)

ನವದೆಹಲಿ, ಡಿ. 20: ಭಾರತದಲ್ಲಿ ಈ ವರ್ಷ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅತಿ ಹೆಚ್ಚು ಇಷ್ಟವಾದ ಪೋಸ್ಟ್‌ಗಳಲ್ಲಿ ವ್ಲಾದಿಮಿರ್ ಪುಟಿನ್ (Vladimir Putin) ಜತೆಗಿನ ಪ್ರಧಾನಿ ಮೋದಿ (PM Narendra Modi) ಅವರ ಫೋಟೊ ಕೂಡ ಒಂದು. ಕಳೆದ 30 ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಟಾಪ್ 10 ಪೋಸ್ಟ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ಫೋಟೊಗಳು ಹೆಚ್ಚು ಇಷ್ಟವಾದ ಪೋಸ್ಟ್‌ಗಳಾಗಿವೆ. ಇದರಲ್ಲಿ ದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ (Delhi Airport) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇಬ್ಬರೂ ನಾಯಕರು ಒಟ್ಟಿಗೆ ಪ್ರಯಾಣಿಸಿದ ಫೋಟೋ ಕೂಡ ಒಂದು.

ಎಕ್ಸ್‌ನಲ್ಲಿನ ಎಂಟು ಪೋಸ್ಟ್‌ಗಳು ಒಟ್ಟಿಗೆ 1,60,700 ಮರುಪೋಸ್ಟ್‌ಗಳು ಮತ್ತು 14.76 ಲಕ್ಷ ಲೈಕ್ಸ್‌ ಗಳಿಸಿವೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್ ಮತ್ತು ಮರುಪೋಸ್ಟ್ ಮಾಡಲಾದ ಟಾಪ್ 10 ಹ್ಯಾಂಡಲ್‌ಗಳಲ್ಲಿ ಕಾಣಿಸಿಕೊಂಡ ಏಕೈಕ ರಾಜಕಾರಣಿ ಮೋದಿ ಎನಿಸಿಕೊಂಡರು.

ಅತಿ ಇಷ್ಟದ ಟ್ವೀಟ್‌ನಲ್ಲೂ ಪ್ರಧಾನಿ ಮೋದಿ ಮುಂದು; ಟಾಪ್ 10 ನಲ್ಲಿ ಮತ್ತಾವುದೇ ರಾಜಕಾರಣಿಗೂ ಇಲ್ಲ ಸ್ಥಾನ

ಎಕ್ಸ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಒಂದು ದೇಶದಲ್ಲಿ ಕಳೆದ ತಿಂಗಳಲ್ಲಿ ಅತಿ ಹೆಚ್ಚು ಇಷ್ಟವಾದ ಟ್ವೀಟ್‌ಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ, ಕಳೆದ 30 ದಿನಗಳಲ್ಲಿ ಅತಿ ಹೆಚ್ಚು ಇಷ್ಟವಾದ 10 ಟ್ವೀಟ್‌ಗಳಲ್ಲಿ ಅಗ್ರ ಎಂಟು ಟ್ವೀಟ್‌ಗಳು ಪ್ರಧಾನಿ ಮೋದಿವಅವರದ್ದಾಗಿದೆ. ಟಾಪ್ 10ರಲ್ಲಿ ಬೇರೆ ಯಾವುದೇ ರಾಜಕಾರಣಿ ಇಲ್ಲ.

ರಷ್ಯಾದ ಮಾಸ್ಕೋದಿಂದ ಭಾರತಕ್ಕೆ ಪ್ರವಾಸ ಬಂದಿದ್ದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿ ಅವರೊಂದಿಗೆ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿರುವ ಫೋಟೊ 34,000ಕ್ಕೂ ಹೆಚ್ಚು ಮರುಪೋಸ್ಟ್‌ಗಳು ಮತ್ತು 2,14,000 ಲೈಕ್‌ಗಳನ್ನು ಪಡೆದುಕೊಂಡಿದೆ. ಇದು ಪ್ರಧಾನ ಮಂತ್ರಿ ಅವರ ಎಂಟು ಪೋಸ್ಟ್‌ಗಳಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಫೋಟೊವಾಗಿದೆ.

ಡಿಸೆಂಬರ್ 4ರಂದು ರಷ್ಯಾ ಅಧ್ಯಕ್ಷರು ಅವರ ದೇಶಕ್ಕೆ ಹೊರಟಾಗ, ಪ್ರಧಾನಿ ಮೋದಿ ರಷ್ಯನ್ ಭಾಷೆಯಲ್ಲಿ ಭಗವದ್ಗೀತೆ ಪ್ರತಿಯನ್ನು ಉಡುಗೊರೆಯಾಗಿ ನೀಡಿರುವ ಫೋಟೊಗೆ 29,000 ಮರುಪೋಸ್ಟ್‌ಗಳು ಮತ್ತು 2,31,000 ಲೈಕ್‌ಗಳು ಬಂದವು.

ನವೆಂಬರ್ 29ರಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ವಿವಾಹಕ್ಕೆ ಪ್ರಧಾನಿ ಮೋದಿ ಕಳುಹಿಸಿದ ಅಭಿನಂದನಾ ಸಂದೇಶವು, 14,900 ಮರುಪೋಸ್ಟ್‌ಗಳು ಮತ್ತು 2,11,000 ಲೈಕ್‌ಗಳನ್ನು ಪಡೆದಿದೆ. ಪುಟಿನ್ ಅವರಿಗೆ ನೀಡಿದ ಸ್ವಾಗತವು 20,000 ಮರುಪೋಸ್ಟ್‌ಗಳು ಮತ್ತು 1,79,000 ಲೈಕ್‌ಗಳನ್ನು ಗಳಿಸಿದೆ.

ಅಸ್ಸಾಂ ಚಹಾ, ಭಗವದ್ಗೀತೆ, ಬೆಳ್ಳಿ ಕುದುರೆ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳಿವು

ಡಿಸೆಂಬರ್ 5ರಂದು ರಾಷ್ಟ್ರಪತಿ ಭವನದಲ್ಲಿ ರಷ್ಯಾದ ಅಧ್ಯಕ್ಷರು ಗೌರವ ವಂದನೆ ಸ್ವೀಕರಿಸಿದ ಬಗ್ಗೆ ಮೋದಿ ಅವರ ಪೋಸ್ಟ್ 28,100 ರೀಟ್ವೀಟ್‌ಗಳು ಮತ್ತು 21,8000 ಲೈಕ್‌ಗಳನ್ನು ಗಳಿಸಿದೆ. ನವೆಂಬರ್ 25ರಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ನಡೆದ ಧರ್ಮ ಧ್ವಜಾರೋಹಣ ಉತ್ಸವದ ಅವರ ಪೋಸ್ಟ್ 26,300 ರೀಪೋಸ್ಟ್‌ಗಳು ಮತ್ತು 1,40,000 ಲೈಕ್‌ ಗಳಿಸಿದೆ.

ಪ್ರಧಾನಿ ಅವರಇನ್ನೆರಡು ಪೋಸ್ಟ್‌ಗಳೆಂದರೆ, ಡಿಸೆಂಬರ್ 2ರಂದು 50 ದಿನಗಳಲ್ಲಿ ದಂಡಕ್ರಮ ಪಾರಾಯಣವನ್ನು ಪೂರ್ಣಗೊಳಿಸಿದ 19 ವರ್ಷದ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಅವರ ಕುರಿತಾದ ಒಂದು ಪೋಸ್ಟ್ ಹಾಗೂ ನವೆಂಬರ್ 24ರಂದು ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅವರ ಅಭಿನಂದನಾ ಸಂದೇಶವು ಕ್ರಮವಾಗಿ 22,500 ರೀಪೋಸ್ಟ್‌ಗಳು, 13,6000 ಲೈಕ್‌ಗಳು ಮತ್ತು 14,900 ಮರುಪೋಸ್ಟ್‌ಗಳು ಮತ್ತು 1,47,000 ಲೈಕ್‌ಗಳನ್ನು ಪಡೆದಿವೆ.